ಜಿಲ್ಲಾ ಸುದ್ದಿ

ಕನಕಶ್ರೀ ಪುರಸ್ಕಾರಕ್ಕೆ ಡಾ.ಸ್ವಾಮಿರಾವ್ ಆಯ್ಕೆ

ರಿಯ ಸಾಹಿತಿ, ದಾಸ ಸಾಹಿತ್ಯ ವಿದ್ವಾಂಸರಾದ ಡಾ. ಸ್ವಾಮಿರಾವ್ ಕುಲಕರ್ಣಿ ಅವರಿಗೆ ಕರ್ನಾಟಕ ರಾಜ್ಯ ನೀಡುವ ರಾಜ್ಯ ಮಟ್ಟದ ಕನಕಶ್ರೀ ಪ್ರಶಸ್ತಿ ದೊರಕಿದೆ...

ಕನಕಶ್ರೀ ಪುರಸ್ಕಾರಕ್ಕೆ ಡಾ.ಸ್ವಾಮಿರಾವ್ ಆಯ್ಕೆ
ಡಾ. ಸ್ವಾಮಿರಾವ್ ಕುಲಕರ್ಣಿ
Published On :

ಬೆಂಗಳೂರು: ಹಿರಿಯ ಸಾಹಿತಿ, ದಾಸ ಸಾಹಿತ್ಯ ವಿದ್ವಾಂಸರಾದ ಡಾ. ಸ್ವಾಮಿರಾವ್ ಕುಲಕರ್ಣಿ ಅವರಿಗೆ ಕರ್ನಾಟಕ ರಾಜ್ಯ ನೀಡುವ ರಾಜ್ಯ ಮಟ್ಟದ ಕನಕಶ್ರೀ ಪ್ರಶಸ್ತಿ ದೊರಕಿದೆ.

ಕನಕದಾಸ ಜಯಂತಿ ಅಂಗವಾಗಿ ಬೆಂಗಳೂರಿನ ವಿಧಾನಸೌಧದ ಸಭಾಗೃಹದಲ್ಲಿ ನ.28ರಂದು ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ರು. 5 ಲಕ್ಷ ನಗದು ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಸ್ವಾಮಿರಾವ್ ಕುಲಕರ್ಣಿ 35 ವರ್ಷ ಕಾಲ ದಾಸ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಕ್ಷೇತ್ರ ಕಾರ್ಯದ ಮುಖಾಂತರ ಈ ಭಾಗದ ದಾಸರ ಬದುಕು ಹಾಗೂ ಸಾಹಿತ್ಯವನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಇಸ್ಲಾಂ ಧರ್ಮದ ಬಡೇ ಸಾಬ್ ಶ್ರೀರಾಮದಾಸರು ದಾಸ ಸಾಹಿತ್ಯಕ್ಕೆ ನೀಡಿರುವ ಸಾವಿರಾರು ಕೀರ್ತನೆಗಳು ಸಂಗ್ರಹಿಸಿ ಅವರ ಕುರಿತು ಡಾ. ಚನ್ನಣ್ಣ ವಾಲೀಕಾರ್ ಮಾರ್ಗದರ್ಶನದಲ್ಲಿ 1995ರಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಹರಿದಾಸ ಸಾಹಿತ್ಯ ವಿಚಾರ ವಾಹಿನಿ ಸಂಸ್ಥಾಪಕ ಅಧ್ಯಕ್ಷರಾಗಿ 15ವರ್ಷಗಳಿಂದ ಹರಿದಾಸ ವೈಭವ ಎಂಬ ಕಾರ್ಯಕ್ರಮದ ಮೂಲಕ ದಾಸರ ಸಾಮಾಜಿಕ, ವೈಚಾರಿಕ ಚಿಂತನೆಗಳನ್ನು ಜನಮನಕ್ಕೆ ಮುಟ್ಟಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ದಾಸ ಸಾಹಿತ್ಯದ ವಿವಿಧ ವಿಷಯ ಕುರಿತು ಈವರೆಗೆ ಸ್ವಾಮಿರಾವ್ ಅವರ 12 ಪುಸ್ತಕಗಳು ಪ್ರಕಟವಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.