ಸಾರಿಗೆ ವಾಹನಗಳಿಗೆ ಇನ್ನು ಸ್ಪೀಡ್ ಗವರ್ನರ್ ಕಡ್ಡಾಯ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ
ನ್ಯಾಯಾಲಯದ ಆದೇಶದ ಮೇರೆಗೆ ಅರ್ಹತಾ ಪತ್ರ ನವೀಕರಣಕ್ಕೆ ಹಾಜರುಪಡಿಸುವ ಹಾಗೂ ಈಗಾಗಲೇ ನೋಂದಾಯಿತವಾದ ಎಲ್ಲ ಸಾರಿಗೆ ವಾಹನಗಳಿಗೆ ...

ಬೆಂಗಳೂರು: ನ್ಯಾಯಾಲಯದ ಆದೇಶದ ಮೇರೆಗೆ ಅರ್ಹತಾ ಪತ್ರ ನವೀಕರಣಕ್ಕೆ ಹಾಜರುಪಡಿಸುವ ಹಾಗೂ ಈಗಾಗಲೇ ನೋಂದಾಯಿತವಾದ ಎಲ್ಲ ಸಾರಿಗೆ ವಾಹನಗಳಿಗೆ ಕಡ್ಡಾಯವಾಗಿ ಸ್ಪೀಡ್ ಗವರ್ನರ್ ಅಳವಡಿಸುವಂತೆ ರಾಜ್ಯ ಪ್ರಾದೇಶಿಕ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಸಂಸ್ಥೆ ಆದೇಶಿಸಿದೆ.
ಮುಂಬರುವ 2016ರ ಏಪ್ರಿಲ್ 1ರೊಳಗೆ ಎಲ್ಲ ಸಾರಿಗೆ ವಾಹನಗಳು ಸ್ಪೀಡ್ ಗೌರ್ನರ್ ಅನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅಂತಹ ಚಾಲಕರಿಗೆ ದಂಡ ವಿಧಿಸಲಾಗುವುದು ಎಂದು ಹೇಳುವ ಮೂಲಕ ಸ್ಪೀಡ್ ಗೌರ್ನರ್ ಅಳವಡಿಕೆ ವಿರೋಧಿಸಿ, ಮುಷ್ಕರಕ್ಕೆ ಮುಂದಾಗಿರುವವರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.
ರೋಸ್‍ಮಾರ್ಟ್ ಆಟೋಟೆಕ್ ಮತ್ತು ಪ್ರಿಕಾಲ ಎಂಬ ಸಂಸ್ಥೆಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆಗೆ ಸರ್ಕಾರ ಅನುಮತಿ ನೀಡಿದೆ. ಸರ್ಕಾರದ ನಿಬಂಧನೆಗೊಳಪಟ್ಟ ಈ ಎರಡು ಸ್ಪೀಡ್ ಗವರ್ನರ್ ತಯಾರಿಕಾ ಕಂಪೆನಿಗಳಿಂದ ಮಾತ್ರ ಯಂತ್ರ ಅಳವಡಿಸಿಕೊಳ್ಳಬೇಕು. ಆ ವಾಹನಗಳ ವೇಗ ಮಿತಿ ಪ್ರತಿ ಗಂಟೆಗೆ ಗರಿಷ್ಠ 80 ಕಿ.ಮೀ. ವೇಗಮಿತಿಗೆ ಒಳಪಡಬೇಕು. ಅಂತಹ ಮಾಪನಗಳುಳ್ಳ ವೇಗ ನಿಯಂತ್ರಕ ಉಪಕರಣ ಅಳವಡಿಸಬೇಕು. ಪ್ರಮುಖವಾಗಿ ಅಪಾಯಕಾರಿ ಸರಕು ಸಾಗಣೆ ಮಾಡುವ ಸಾರಿಗೆ ವಾಹನ, ಟ್ಯಾಂಕರ್ಸ್, ಡಂಪರ್ಸ್ ಮತ್ತು ಶಾಲಾ ವಾಹನಗಳಿಗೆ ಪ್ರತಿ ಗಂಟೆಗೆ ಗರಿಷ್ಠ 60 ಕಿ.ಮೀ. ವೇಗಮಿತಿಗೆ ಒಳಪಡುವಂತೆ ಸ್ಪೀಡ್ ಗವರ್ನರ್ ಅನ್ನು ಅಳವಡಿಸುವಂತೆ ಆದೇಶಿಸಿದೆ.
ಸಣ್ಣ ಪ್ರಮಾಣದ ಸರಕು ಮತ್ತು ಸಾರಿಗೆ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ ಕ್ರಮ ಕೈ ಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ವೈ.ಎನ್. ನಂಜಪ್ಪ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ವಿಭಾಗೀಯ ಪೀಠ, ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ. ಕನಿಷ್ಠ 3.5 ಟನ್‍ಗಿಂತ ಕಡಿಮೆ ತೂಕವಿರುವ ವಾಹನಗಳು ಮತ್ತು ಚಾಲಕ ಸೇರಿದಂತೆ 9 ಜನರನ್ನು ಕೊಂಡೊಯ್ಯುವ ವಾಹನಗಳು ಸಹ ಅಪಘಾತಗಳಿಗೆ ಕಾರಣವಾಗುತ್ತಿವೆ. ಆದ ಕಾರಣ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ಮಾಡುವಂತೆ ಸೂಚಿಸಬೇಕು ಎಂದು ಅರ್ಜಿದಾರರ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


