ದೆಹಲಿಯಲ್ಲಿ ಮೊಬೈಲ್ ಕಳೆದುಕೊಂಡ ಹಿರೇಮಠ್
ಬಿಗಿ ಭದ್ರತೆ ಇರುವ ಪ್ರದೇಶದಲ್ಲಿ ಬೈಕ್‍ನಲ್ಲಿ ಬಂದ ಕಳ್ಳರು ದುಬಾರಿ ಮೊಬೈಲ್‍ಅನ್ನು ಕಿತ್ತೊಯ್ದಿದ್ದಾರೆ. ಮೊಬೈಲ್ ಕಳೆದುಕೊಂಡವರು ಸಮಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಅವರು...

ಪೊಲೀಸ್‍ಠಾಣೆ ಸಮೀಪವೇ ಬೈಕ್‍ನಲ್ಲಿ ಬಂದ ಕಳ್ಳರು ಮಹಿಳೆಯರಿಂದ ಚಿನ್ನದ ಸರ ಕದ್ದೊಯ್ಯುವ ಸುದ್ದಿ ಬೆಂಗಳೂರಿನಲ್ಲಿ ಹೊಸದೇನಲ್ಲ. ಆದರೆ, ದೆಹಲಿಯಲ್ಲಿ ದೆಹಲಿ ಪೊಲೀಸ್ ಕೇಂದ್ರ ಕಚೇರಿಗೆ ಕೂಗಳತೆ ದೂರದಲ್ಲಿರುವ ,ಬಿಗಿ ಭದ್ರತೆ ಇರುವ ಪ್ರದೇಶದಲ್ಲಿ ಬೈಕ್‍ನಲ್ಲಿ ಬಂದ ಕಳ್ಳರು ದುಬಾರಿ ಮೊಬೈಲ್‍ಅನ್ನು ಕಿತ್ತೊಯ್ದಿದ್ದಾರೆ. ಮೊಬೈಲ್ ಕಳೆದುಕೊಂಡವರು ಸಮಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಅವರು.
ದೀನದಯಾಳ್ ಉಪಾಯಧ್ಯಾಯ ಮಾರ್ಗದಲ್ಲಿರುವ ಗಾಂಧಿ ಭವನದಲ್ಲಿ ವಾಯುವಿಹಾರ ಮಾಡುತ್ತಿದ್ದ ಹಿರೇಮಠ ಅವರಿಂದ ಮೊಬೈಲ್ ಕಿತ್ತೊಯ್ಯಲಾಗಿದೆ. ಆದಾಯ ತೆರಿಗ ಕಚೇರಿ, ಪೊಲೀಸ್ ಕೇಂದ್ರ ಕಚೇರಿ ಸೇರಿದಂತೆ ಹತ್ತಾರು ಕೇಂದ್ರ ಸರ್ಕಾರದ ಕಚೇರಿಗಳು ಈ ವ್ಯಾಪ್ತಿಯಲ್ಲಿರುವುದರಿಂದ ಬಿಗಿ ಭದ್ರತೆ ಇದೆ. ಜತೆಗೆ ಎಲ್ಲೆಡೆ ಸಿಸಿ ಕ್ಯಾಮರಾದ ಕಣ್ಗಾವಲು ಇದೆ. ಐಟಿಒ ಮೆಟ್ರೋ ನಿಲ್ದಾಣವೂ ಗಾಂಧಿ ಭವನಕ್ಕೆ ಸಮೀಪವೇ ಇದೆ. ಹಿರೇಮಠ ಅವರ ಮೊಬೈಲ್‍ಗೆ ಬಂದ ಕರೆ ಸ್ವೀಕರಿಸುವಷ್ಟರಲ್ಲೇ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಕಕ್ಕಾಬಿಕ್ಕಿಯಾದ ಹಿರೇಮಠ ಅವರಿಗೆ ಬೈಕ್ ನಂಬರ್ ಸಹ ನೋಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಬಗ್ಗೆ ಇಂದ್ರಪ್ರಸ್ತ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿ ಟೀವಿ ಪರಿಶೀಲಿಸಿ ಕಳ್ಳರನ್ನು ಹಿಡಿಯುವುದಾಗಿ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


