ಜಿಲ್ಲಾ ಸುದ್ದಿ

ತಾಯಿ ಕರೆ ಸ್ವೀಕರಿಸದ್ದಕ್ಕೆ ನೇಣಿಗೆ ಶರಣಾದ ವಕೀಲೆ!

ಫೋನ್ ಕರೆ ಮಾಡಿದಾಗ ತಾಯಿ ಸ್ವೀಕರಿಸಿಲ್ಲ ಎನ್ನುವ ಕಾರಣಕ್ಕೆ ಮನನೊಂದ ಎಲ್ ಎಲ್‍ಬಿ ಪಧವಿದರೆಯೊಬ್ಬರು...

ತಾಯಿ ಕರೆ ಸ್ವೀಕರಿಸದ್ದಕ್ಕೆ ನೇಣಿಗೆ ಶರಣಾದ ವಕೀಲೆ!
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಫೋನ್ ಕರೆ ಮಾಡಿದಾಗ ತಾಯಿ ಸ್ವೀಕರಿಸಿಲ್ಲ ಎನ್ನುವ ಕಾರಣಕ್ಕೆ ಮನನೊಂದ ಎಲ್ ಎಲ್‍ಬಿ ಪಧವಿದರೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರ ಸಮೀಪದ ಅತ್ತಿಗುಪ್ಪೆಯಲ್ಲಿ ನಡೆದಿದೆ. 
ಅತ್ತಿಗುಪ್ಪೆ ನಿವಾಸಿ ನಿವೃತ್ತ ಇನ್ಸ್‍ಪೆಕ್ಟರ್ ಐಸಾಕ್ ಸ್ಟೀಫನ್ ಅವರ ಪುತ್ರಿ ಸ್ವರ್ಣಲತಾ (26) ಮೃತರು. ಸೋಮವಾರ ರಾತ್ರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐಸಾಕ್ ಸ್ಟೀಫನ್ ದಂಪತಿಗೆ 7 ಹೆಣ್ಣು ಮಕ್ಕಳಿದ್ದು, ಈ ಪೈಕಿ ಐವರಿಗೆ ವಿವಾಹವಾಗಿದೆ. ಕೊನೆಯ ಪುತ್ರಿ ಸ್ವರ್ಣಲತಾ, ಬಿ.ಎ, ಎಲ್‍ಎಲ್‍ಬಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಕಾನೂನು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. 
ಮೂರು ದಿನಗಳ ಹಿಂದೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಐಸಾಕ್ ಸ್ಟೀಫನ್ ದಂಪತಿ ಗೋವಾಗೆ ಹೋಗಿದ್ದರು. ಹಾಗಾಗಿ ಸ್ವರ್ಣಲತಾ, ನಾಗರಬಾವಿಯಲ್ಲಿದ್ದ ಸಹೋದರಿ ಮನೆಯಲ್ಲಿ ಉಳಿದುಕೊಂಡಿದ್ದು ಕೆಲಸಕ್ಕೆ ರಜೆ ಹಾಕಿದ್ದರು. ಸೋಮವಾರ ಕಚೇರಿಯಲ್ಲಿ ಹೆಚ್ಚಿನ ಕೆಲಸವಿದೆ ಎಂದು ಸಹೋದರಿಗೆ ಹೇಳಿದ ಸ್ವರ್ಣಲತಾ, ಅಲ್ಲಿಂದ ಅತ್ತಿಗುಪ್ಪೆಗೆ ಬಂದಿದ್ದರು. ಸಂಜೆ 6.30ಕ್ಕೆ ಮನೆಗೆ ಬಂದ ಸಹೋದರಿ, ಪಾಲಕರು ಬರುವವರೆಗೂ ತನ್ನ ಮನೆಯಲ್ಲೇ ಇರುವಂತೆ ಹೇಳಿದ್ದಾರೆ. 
ಆದರೆ, ಇದಕ್ಕೆ ನಿರಾಕರಿಸಿದ ಸ್ವರ್ಣಲತಾ ಅತ್ತಿಗುಪ್ಪೆಯಲ್ಲೇ ಉಳಿದುಕೊಂಡಿದ್ದರು. ರಾತ್ರಿ 11.30ಕ್ಕೆ ಸ್ವರ್ಣಲತಾ ಮೊಬೈಲ್‍ಗೆ ಸಹೋದರಿ ಕರೆ ಮಾಡಿದ್ದು, ಸ್ವೀಕರಿಸಿರಲಿಲ್ಲ. ಮಲಗಿರಬೇಕೆಂದು ಸುಮ್ಮನಾದ ಅವರು ಮಂಗಳವಾರ ಬೆಳಗ್ಗೆ ಕರೆ ಮಾಡಿದಾಗಲೂ ಸ್ವೀಕರಿಸಲಿಲ್ಲ. ಇದರಿಂದ ಅನುಮಾನಗೊಂಡ ಅವರು ಮನೆ ಬಳಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಮರಣ ಪತ್ರ ಲಭ್ಯವಾಗಿದ್ದು, `ನನ್ನ ಸಾವಿಗೆ ನಾನೇ ಕಾರಣ ಅಮ್ಮ ಕ್ಷಮಿಸು' ಎಂದು ಬರೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 
ಪಾಲಕರು ಗೋವಾಗೆ ಹೋದಾಗ ಬೆಡ್ ಶೀಟ್ ವಿಚಾರವಾಗಿ ಸಹೋದರಿಯರ ನಡುವೆ ಜಗಳವಾಗಿದೆ. ಇದರಿಂದ ನೊಂದ ಸ್ವರ್ಣಲತಾ, ತಾಯಿಗೆ ಕರೆ ಮಾಡಿ ಮಾತನಾಡಲು ಯತ್ನಿಸಿದ್ದಾರೆ. ಆದರೆ, ಕಾರಣಾಂತರಗಳಿಂದ ತಾಯಿ ಕರೆ ಸ್ವೀಕರಿಸಿಲ್ಲ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರಿತಿಸುತ್ತಿದ್ದ ಅಮ್ಮ ತನ್ನ ಜತೆ ಮಾತನಾಡಿಲ್ಲವೆಂದು ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.