ಸಿಎಂ ನೇತೃತ್ವದ ಸಭೆ ವಿಫಲ
ಉಪ ಲೋಕಾಯುಕ್ತರ ಹುದ್ದೆಗೆ ನಿವೃತ್ತ ನ್ಯಾ.ಕೆ.ಎಲ್.ಮಂಜುನಾಥ್‍ರನ್ನೇ ನೇಮಿಸ ಬೇಕೆನ್ನುವ ಸರ್ಕಾರದ ಪ್ರಯತ್ನಕ್ಕೆ ಮತ್ತೆ ಹಿನ್ನೆಡೆಯಾಗಿದೆ. ಈ ಸಂಬಂಧ ಬುಧವಾರ ನಡೆದ ಸಭೆ ವಿಫಲವಾಗಿದೆ...

ಬೆಂಗಳೂರು: ಉಪ ಲೋಕಾಯುಕ್ತರ ಹುದ್ದೆಗೆ ನಿವೃತ್ತ ನ್ಯಾ.ಕೆ.ಎಲ್.ಮಂಜುನಾಥ್‍ರನ್ನೇ ನೇಮಿಸ ಬೇಕೆನ್ನುವ ಸರ್ಕಾರದ ಪ್ರಯತ್ನಕ್ಕೆ ಮತ್ತೆ ಹಿನ್ನೆಡೆಯಾಗಿದೆ. ಈ ಸಂಬಂಧ ಬುಧವಾರ ನಡೆದ ಸಭೆ ವಿಫಲವಾಗಿದೆ.
ಸ್ಪೀಕರ್ ಕಾಗೋಡು ತಿಮ್ಮಪ್ಪ, ಸಭಾಪತಿ ಡಿ.ಎಚ್.ಶಂಕರಮೂರ್ತಿ, ಪ್ರತಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಅವನ್ನೊಳಗೊಂಡ ಸಭೆ ಮಂಗಳವಾರ ನಡೆಯಿತು. ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಜುನಾಥ್ ಹೆಸರು ಪ್ರಸ್ತಾಪಿಸಿದಾಗ ಪ್ರತಿಪಕ್ಷ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಆ ಪ್ರಸ್ತಾವನೆ ಅಲ್ಲಿಗೆ ಕೈಬಿಟ್ಟು ಇತರೆ ಹೆಸರುಗಳ ಬಗ್ಗೆ ಚರ್ಚೆ ನಡೆಯಿತು. ಆದರೆ ಅಂತಿಮವಾಗಿ ಒಮ್ಮತ ಮೂಡದ ಕಾರಣ ಸಭೆ ವಿಫಲವಾಗಿದೆ. ಈಗಾಗಲೇ ಮಂಜುನಾಥ್ ಹೆಸರು ಶಿಫಾರಸು ಮಾಡಿದ್ದ ಸರ್ಕಾರದ ಪ್ರಸ್ತಾಪವನ್ನು ರಾಜ್ಯಪಾಲ ವಿ.ಆರ್.ವಾಲ. ಸತತ ಮೂರನೇ ಬಾರಿಗೆ ತಿರಸ್ಕರಿಸಿದ್ದಾರೆ.
ಇಷ್ಟರ ಮೇಲೆ ಮತ್ತೆ ಅವರ ಹೆಸರನ್ನೇ ಶಿಫಾರಸು ಮಾಡುವುದುಕಷ್ಟ ಸಾಧ್ಯ. ಹೀಗಾಗಿ ಉಪ ಲೋಕಾಯುಕ್ತ ಸ್ಥಾನದ ಶಿಫಾರಸು ಪಟ್ಟಿಯಲ್ಲಿ ಇನ್ನು ಮಂಜುನಾಥ್ ಉಳಿಯುವ ಸಾಧ್ಯತೆ ದೂರವಾಗಿದೆ ಎಂದು ಮೂಲಗಳು ತಿಳಿಸಿವೆ. ನ್ಯಾ.ಪಚ್ಚಾಪುರೆ ಹಾಗೂ ನ್ಯಾ.ಗುಂಜಾಲ್ ಅವರ ಹೆಸರು ಪ್ರಸ್ತಾಪಿಸಿದಾಗ ಚರ್ಚೆ ನಡೆದರೂ ಒಮ್ಮತ ಮೂಡಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


