ಜಿಲ್ಲಾ ಸುದ್ದಿ

ರಸ್ತೆಯಲ್ಲಿ ಹೊತ್ತಿ ಉರಿದ ಕಾರು

ಮಹಾತ್ಮ ಗಾಂಧಿ ರಸ್ತೆಯ ಟ್ರಿನಿಟಿ ವೃತ್ತದ ಬಳಿ ಮಂಗಳವಾರ ಬೆಳಗ್ಗೆ ನಡುರಸ್ತೆಯಲ್ಲಿ ಕಾರೊಂದು ಹೊತ್ತು ಉರಿದು...

ರಸ್ತೆಯಲ್ಲಿ ಹೊತ್ತಿ ಉರಿದ ಕಾರು
ಮಹಾತ್ಮ ಗಾಂಧಿ ರಸ್ತೆಯ ಟ್ರಿನಿಟಿ ವೃತ್ತದ ಬಳಿ ಮಂಗಳವಾರ ಬೆಳಗ್ಗೆ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು
Published On :
ಬೆಂಗಳೂರು: ಮಹಾತ್ಮ ಗಾಂಧಿ ರಸ್ತೆಯ ಟ್ರಿನಿಟಿ ವೃತ್ತದ ಬಳಿ ಮಂಗಳವಾರ ಬೆಳಗ್ಗೆ ನಡುರಸ್ತೆಯಲ್ಲಿ ಕಾರೊಂದು ಹೊತ್ತು ಉರಿದು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 
ಹೊಂಗಸಂದ್ರ ನಿವಾಸಿ ಕಾರಿನ ಚಾಲಕ ಹಾಗೂ ಮಾಲೀಕ ಆದಿ ನಾರಾಯಣ ಎಂಬುವರ ಇಂಡಿಕಾ ಕಾರು ಅವಘಡಕ್ಕೆ ತುತ್ತಾಗಿದ್ದು, ಘಟನೆಯಲ್ಲಿ ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದಿನಾರಾಯಣ, ತಮ್ಮ ಕಾರನ್ನು ಸಿಟಿ ಟ್ಯಾಕ್ಸಿಗೆ ಅಟ್ಯಾಚ್ ಮಾಡಿದ್ದಾರೆ.
ಬೆಳಗ್ಗೆ ದೇವರಚಿಕ್ಕನಹಳ್ಳಿಯಿಂದ ಪ್ರಯಾಣಿಕರನ್ನು ಪಿಕ್ ಮಾಡಿದ ಅವರು ಟ್ರಿನಿಟಿ ವೃತ್ತದ ಸಮೀಪದಲ್ಲೇ ಇಳಿದುಕೊಂಡಿದ್ದರು. 11 ಗಂಟೆ ಸುಮಾರಿಗೆ ಟ್ರಿನಿಟಿ ವೃತ್ತದ ಸಿಗ್ನಲ್‍ನಲ್ಲಿ ವಾಹನ ನಿಲ್ಲಿಸಿದ್ದರು. ಸಿಗ್ನಲ್ ಬಿಟ್ಟಾಗ ಕಾರು ಚಾಲೂ ಆದಾಗ ಎಂಜಿನ್‍ನಿಂದ ಹೊಗೆ ಬರಲು ಆರಂಭಿಸಿತು. 
ಏನಾಯಿತು ಎಂದು ಕೆಳಗೆ ಇಳಿಯುತ್ತಿದ್ದಂತೆ ಕಾರು ಬೆಂಕಿ ಹೊತ್ತಿ ಕೊಂಡು ಉರಿಯಲು ಪ್ರಾರಂಭಿಸಿತು. ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದರಾದರೂ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಕಾರು ಸುಟ್ಟು ಕರಕಲಾಗಿತ್ತು. 
ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದ ಕಾರು ಬೆಂಕಿಗಾಹುತಿಯಾಗಿರುವ ಸಾಧ್ಯತೆ ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದರು. ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.