ಜಿಲ್ಲಾ ಸುದ್ದಿ

ಪತಿ ಮನೆ ಎದುರು ಪತ್ನಿ ಪ್ರತಿಭಟನೆ

ಪತಿ ಕುಟುಂಬದವರು ವರದಕ್ಷಿಣಿ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ಪತಿಯ ಮನೆ ಎದುರು ಸೋಮವಾರ ಪ್ರತಿಭಟಿಸಿದರು...

ಪತಿ ಮನೆ ಎದುರು ಪತ್ನಿ ಪ್ರತಿಭಟನೆ
ಪತಿ ಮನೆ ಎದುರು ಪ್ರತಿಭಟನೆ ನಡೆಸುತ್ತಿರುವ ರಜನಿ
Published On :

ಮೈಸೂರು: ಪತಿ ಕುಟುಂಬದವರು ವರದಕ್ಷಿಣಿ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ಪತಿಯ ಮನೆ ಎದುರು ಸೋಮವಾರ ಪ್ರತಿಭಟಿಸಿದರು.

ಶಾರದಾದೇವಿ ನಗರದಲ್ಲಿರುವ ಪತಿ ಮನೆ ಎದುರು ಪ್ರತಿಭಟಿಸಿದ ರಜನಿ, ಎರಡು ವರ್ಷದ ಹಿಂದೆ ತಮ್ಮ ಮದುವೆಯಾಗಿತ್ತು. ವರದಕ್ಷಿಣೆ ಸಹ ನೀಡಲಾಗಿತ್ತು. ಆದರೆ, ಮದುವೆಯಾದ ನಂತರ ಮತ್ತೆ ವರದಕ್ಷಿಣೆ ತರುವಂತೆ ಪತಿ ಮನೆಯವರು ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿರುವುದಾಗಿ ದೂರಿದರು. ಪತಿ ಕುಟುಂಬದವರ ವಿರುದ್ಧ ದೂರು ನೀಡಲು ರಜನಿ ಸರಸ್ವತಿಪುರಂ  ಠಾಣೆಯ ಪೊಲೀಸರ ಮೂಲಕ ಮಹಿಳಾ ಠಾಣೆಗೆ ತೆರಳಿದ್ದರು.

ಆದರೆ ಮಹಿಳಾ ಠಾಣೆ ಪೊಲೀಸರು ರಜನಿ ಮತ್ತು ಪತಿ ಮನೆಯವರೊಂದಿಗೆ ಸಮಾಲೋಚನೆ ನಡೆಸಿ ಕಳುಹಿಸಿದ್ದಾರೆ. ಇದಾದ ನಂತರವೂ ತನ್ನನ್ನು ಮನೆಗೆ ಸೇರಿಸಿಕೊಂಡಿಲ್ಲ ಎಂದು ರಜನಿ ಆರೋಪಿಸಿ ತನ್ನ ತಾಯಿಯೊಂದಿಗೆ ಪತಿ ಮನೆ ಎದುರು ಪ್ರತಿಭಟಿಸಿದರು. ಈ ವಿಷಯ ತಿಳಿದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಕೆ. ರಾಧಾ ಮತ್ತು ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ರಜನಿ ಅವರಿಂದ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾ ಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.