ಅಗಲಿದ ಗಣ್ಯರಿಗೆ ಸಂತಾಪ
ವಿಧಾನ ಮಂಡಲದ ಅಧಿವೇಶನ ಆರಂಭಗೊಂಡಿದ್ದು, ಅಗಲಿದ ಗಣ್ಯರ ಸಂತಾಪ ಸೂಚನೆ ನಿರ್ಣಯದ ನೆರಳಲ್ಲೇ ಸಂಶೋಧಕ ಡಾ.ಎಂ.ಎಂ ಕಲಬುರ್ಗಿ ಹತ್ಯೆ, ಅಸಹಿಷ್ಣುತೆ ಮತ್ತು ಪ್ರಶಸ್ತಿ ವಾಪ್ಸಿ ವಿಚಾರಗಳು ನುಸುಳಿದ್ದು, ಕಲಬುರ್ಗಿ ಹಂತಕರ ಬಂಧನಕ್ಕೆ...

ವಿಧಾನಸಭೆ: ವಿಧಾನ ಮಂಡಲದ ಅಧಿವೇಶನ ಆರಂಭಗೊಂಡಿದ್ದು, ಅಗಲಿದ ಗಣ್ಯರ ಸಂತಾಪ ಸೂಚನೆ ನಿರ್ಣಯದ ನೆರಳಲ್ಲೇ ಸಂಶೋಧಕ ಡಾ.ಎಂ.ಎಂ ಕಲಬುರ್ಗಿ ಹತ್ಯೆ, ಅಸಹಿಷ್ಣುತೆ ಮತ್ತು ಪ್ರಶಸ್ತಿ ವಾಪ್ಸಿ ವಿಚಾರಗಳು ನುಸುಳಿದ್ದು, ಕಲಬುರ್ಗಿ ಹಂತಕರ ಬಂಧನಕ್ಕೆ ಮೊದಲ ದಿನವೇ ಆಗ್ರಹ ವ್ಯಕ್ತವಾಗಿದೆ. ಸಂತಾಪ ಸೂಚನೆ ನಿರ್ಣಯದೊಂದಿಗೆ ವಿಧಾನಸಭೆ ಕಲಾಪ ಆರಂಭ-ಗೊಂಡಿತು.
ಶಾಸಕ ವೆಂಕಟೇಶ್ ನಾಯಕ್, ಮಾಜಿ ಸಚಿವ ಎಂ.ಮಹಾದೇವ, ಜಿ.ಮಹಾದೇವಪ್ಪ, ಎಸ್ .ಜಯಪ್ರಕಾಶ್ ಶೆಟ್ಟಿ, ಎಚ್.ಬಿ.ಕೃಷ್ಣಮೂರ್ತಿ, ಕಯ್ಯಾರ ಕಿಂಜ್ಞಣ್ಣ ರೈ, ಡಾ.ಎಂ.ಎಂ.ಕಲಬುರ್ಗಿ, ಕೆ.ಎಸ್.ಎಲ್. ಸ್ವಾಮಿ ನಿಧನಕ್ಕೆ ಸಂತಾಪ ಸೂಚಿಸುವ ನಿರ್ಣಯವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಮಂಡಿಸಿದರು. ಆ ಬಳಿಕ ಸದಸ್ಯರ ಒತ್ತಾಯದ ಮೇರೆಗೆ ಫ್ರಾನ್ಸ್ ಮತ್ತು ಇಟಲಿಯಲ್ಲಿ ನಡೆದ ಉಗ್ರರ ದಾಳಿ ಹಾಗೂ ರೈತರ ಆತ್ಮಹತ್ಯೆ ಪ್ರಕರಣವನ್ನೂ ಸಂತಾಪ ನಿರ್ಣಯದಲ್ಲಿ ಸೇರಿಸಲಾಯಿತು. ಆದರೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ವೈ.ಎಸ್.ವಿ.ದತ್ತ ಪ್ರಶಸ್ತಿ ವಾಪ್ಸಿ ಮತ್ತು ಅಸಹಿಷ್ಣುತೆ ವಿಚಾರವನ್ನು ಸಂತಾಪ ನಿರ್ಣಯದ ಜತೆಗೆ ಸೇರಿಸಿ ಮಾತನಾಡಿದರು.
ಕಲಬುರ್ಗಿ ಹತ್ಯೆಗೆ ಅಸಹಿಷ್ಣುತೆಯ ಬಣ್ಣ ಬಳಿದು ಸಾಹಿತಿಗಳು ಪ್ರಶಸ್ತಿ ವಾಪಸ್ ಮಾಡುವುದು ಸರಿಯಲ್ಲ ಎಂದು ಶೆಟ್ಟರ್ ಪ್ರತಿಪಾದಿಸಿದರೆ, ಅಸಹಿಷ್ಣುತೆ ವಾತಾವರಣ ಅನಾರೋಗ್ಯಕರವಾಗಿ ಬೆಳೆಯುತ್ತಿದ್ದು, ಸಾಹಿತಿಗಳು ನೈತಿಕ, ಸಾತ್ವಿಕ ಕೋಪದಲ್ಲಿ ಪ್ರಶಸ್ತಿ ವಾಪಸ್ ಮಾಡಿದರೆ ಅದು ಸರಿಯಲ್ಲ ಎನ್ನುವುದು ಸರಿಯೇ ಎಂದು ದತ್ತ ಪ್ರಶ್ನಿಸಿದರು.
ಯಾರು ಏನೆಂದರು ?: ಸಿಎಂ ಸಿದ್ದರಾಮಯ್ಯ ಅಗಲಿದ ಎಲ್ಲ ಗಣ್ಯರ ಸಾಧನೆ ಸ್ಮರಿಸಿದರು. ಬಳಿಕ ಕಲಬುರ್ಗಿ ಹತ್ಯೆ ಪ್ರಸ್ತಾಪಿಸಿ, ಹಂತಕರನ್ನು ಪತ್ತೆ ಹಚ್ಚುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯಕ್ರಮ ತೆಗೆದುಕೊಂಡಿದೆ. ಗೋವಿಂದ ಕಾರಜೋಳ, ಬಿ.ಆರ್ .ಪಾಟೀಲ್ ಸಂತಾಪ ನಿರ್ಣಯದ ಪರ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


