ಮೋದಿ ಭಾಷಣಕಾರ ಅಷ್ಟೆ, ಕೆಲಸಗಾರನಲ್ಲ: ಆನಂದ ರಾಜ್
ಮೋದಿ ಒಬ್ಬ ಭಾಷಣಕಾರನೇ ಹೊರತು ಕೆಲಸಗಾರನಲ್ಲ. ವೇದಿಕೆ ಮೇಲೆ ಮಾತ್ರ ಅಂಬೇಡ್ಕರ್ ವಿಚಾರ ಹೇಳುತ್ತಾರೆ. ಕೃತಿಯಲ್ಲಿ ಮೇಲ್ಜಾತಿಯ...ತುಷ್ಟೀಕರಣ
ಬೆಂಗಳೂರು: ಮೋದಿ ಒಬ್ಬ ಭಾಷಣಕಾರನೇ ಹೊರತು ಕೆಲಸಗಾರನಲ್ಲ. ವೇದಿಕೆ ಮೇಲೆ ಮಾತ್ರ ಅಂಬೇಡ್ಕರ್ ವಿಚಾರ ಹೇಳುತ್ತಾರೆ. ಕೃತಿಯಲ್ಲಿ ಮೇಲ್ಜಾತಿಯ ತುಷ್ಟೀಕರಣ ಮಾಡುತ್ತಾರೆ. ಗೋಮಾಂಸದ ರಾಜಕಾರಣ ಮಾಡಿದ ಕೋಮುವಾದಿ ಮತಾಂಧ ಶಕ್ತಿಗಳಿಗೆ ಬಿಹಾರದ ಜನರು ತಕ್ಕ ಉತ್ತರ ನೀಡಿದ್ದಾರೆ ಎಂದು ರಿಪಬ್ಲಿಕ್ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಆನಂದರಾಜ್ ಅಂಬೇಡ್ಕರ್ ಹೇಳಿದರು.
ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್‍ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪಜಾ, ಪಪಂ ನೌಕರರ ಸಂಘ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 125ನೇ ಜಯಂತ್ಯುತ್ಸವದ ವರ್ಷಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ಜನಾಂಗದಲ್ಲಿ ಹುಟ್ಟಿದ ಮೋದಿ ಪ್ರಧಾನಿಯಾಗಲು ಅಂಬೇಡ್ಕರ್ ರಚಿಸಿದ ಸಂವಿ ಧಾನ ಕಾರಣವಾಗಿದೆ. ಆದರೆ, ಮೋದಿ ಮಾತು ಬೇರೆ, ಕೃತಿ ಬೇರೆಯಾಗಿದೆ. ಮೇಲ್ಜಾತಿಯ ಮುಖಂಡರನ್ನು ಈ ದೇಶದ ನಾಯಕರನ್ನಾಗಿ ಮಾಡುತ್ತದೆ. ಆದರೆ ವಿಶ್ವವೇ ಜನನಾಯಕನೆಂದು ಒಪ್ಪಿಕೊಂಡ ಅಂಬೇಡ್ಕರ್ ಗೆ ಸೂಕ್ತ ಸ್ಥಾನಮಾನ ಸಿಗದಿಲ್ಲದಿರುವುದು ದುರಂತ ಎಂದು ವಿಷಾದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

