ರಾಷ್ಟ್ರದ ಭವಿಷ್ಯ ಮಕ್ಕಳ ಕೈಯಲ್ಲಿದೆ: ವಾಲಾ
ಮಕ್ಕಳ ಕೈಯಲ್ಲಿ ರಾಷ್ಟ್ರದ ಭವಿಷ್ಯ ಅಡಗಿದ್ದು, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪೋಷಕರು ಸಹಕಾರ ನೀಡಬೇಕೆಂದು...
ಬೆಂಗಳೂರು: ಮಕ್ಕಳ ಕೈಯಲ್ಲಿ ರಾಷ್ಟ್ರದ ಭವಿಷ್ಯ ಅಡಗಿದ್ದು, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪೋಷಕರು ಸಹಕಾರ ನೀಡಬೇಕೆಂದು ರಾಜ್ಯಪಾಲ ವಜುಬಾಯಿ ರುಢಬಾಯಿ ವಾಲಾ ಕರೆ ನೀಡಿದರು.
ಕಬ್ಬನ್ ಉದ್ಯಾನದಲ್ಲಿರುವ ಜವಾಹರ ಬಾಲಭವನದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಅಡಗಿರುವ ಅಗಾಧ ಪ್ರತಿಭೆ ಹೊರತರಬೇಕು. ಹಾಗಂತ ಅವರಿಗೆ ಒತ್ತಡ ಹೇರಿ ತಮ್ಮ ವಿಚಾರಗಳು, ಉದ್ದೇಶಗಳನ್ನು ತುರುಕಬೇಡಿ. ಅವರಿಷ್ಟದಂತೆ ಬೆಳೆಯಲು ಅವಕಾಶ ಮಾಡಿಕೊಡಿ. ಮನೆಯಿಂದಲೇ ಮಕ್ಕಳಿಗೆ ಸಂಸ್ಕಾರ ಬೆಳೆಸುವ ಪೂರ್ಣ ಜವಾಬ್ದಾರಿ ಎಲ್ಲಾ ತಾಯಂದಿರ ಮೇಲಿದೆ ಎಂದರು.
ನೆಹರು ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುತ್ತಿರುವುದು ಕೃತಾರ್ಥವಾಗಿದೆ.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳನ್ನು ಸನ್ಮಾನಿಸುತ್ತಿರುವುದು ಒಳ್ಳೆಯದು. ಈ ಮಕ್ಕಳ ವೈಯಕ್ತಿಕತೆಯನ್ನು ಗುರುತಿಸಿ ಸನ್ಮಾನಿಸುತ್ತಿಲ್ಲ. ಬದಲಾಗಿ ಅವರಲ್ಲಿರುವ ಪ್ರತಿಭೆಗೆ ಗೌರವ ನೀಡಲಾಗುತ್ತಿದೆ. ಇಂತಹ ಎಷ್ಟೋ ಮಕ್ಕಳು ಸಮಾಜದಲ್ಲಿ ಇದ್ದು ಅವರನ್ನು ಗುರುತಿಸುವಂತಾಗಬೇಕು ಎಂದರು.
ಮಹಾತ್ಮ ಗಾಂಧಿ ಅವರು ಚಿಕ್ಕವರಿದ್ದಾಗ ಅವರ ತಂದೆಗೆ ಎಷ್ಟೋ ಮಂದಿ ನಿಮ್ಮ ಮಗ ರೋಗಿಷ್ಠನಾ? ಯಾಕಿಷ್ಟು ಸಣ್ಣಗಿದ್ದಾರೆ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಗಾಂಧಿ ತಂದೆ ನನ್ನ ಮಗ ಸಣ್ಣಗಿರಬಹುದು, ಆದರೆ ಮುಂದೊಂದು ದಿನ ದೇಶವನ್ನು ಪ್ರತಿನಿಧಿಸುತ್ತಾನೆ ಎಂದಿದ್ದರು. ಪ್ರತಿಯೊಬ್ಬ ತಂದೆ ತಾಯಿಗೂ ತಮ್ಮ ಮಕ್ಕಳ ಪ್ರತಿಭೆ ಗೊತ್ತಿರುತ್ತದೆ. ಅದಕ್ಕೆ ನೀರೆರುವಂತಾಗಬೇಕು. ಟಿ.ವಿ ಮುಂದೆ ಕೂರಿಸಬೇಡಿ. ವಿಡಿಯೋ ಗೇಮ್ ಆಡಿಸುವ ಬದಲು ಮೈದಾನಕ್ಕೆ ಕಳುಹಿಸಿ. ಆಗ ಮನಸ್ಸು, ಶರೀರ ಪುಷ್ಕಳವಾಗುತ್ತದೆ ಎಂದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಪ್ರದರ್ಶಿಸಿದ 36 ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಮೊತ್ತ 10 ಸಾವಿರ ಹಾಗೂ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ಪ್ರದಾನ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

