ಸಿಎಂ ವಿರುದ್ಧ ಕುಟ್ಟಪ್ಪ ಪುತ್ರನ ಆಕ್ರೋಶ
ಗಲಭೆ ಸಂದರ್ಭದಲ್ಲಿ ಮೃತಪಟ್ಟ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವಪ್ಪಂಡ ಕುಟ್ಟಪ್ಪ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗುರುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮಡಿಕೇರಿ: ಗಲಭೆ ಸಂದರ್ಭದಲ್ಲಿ ಮೃತಪಟ್ಟ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೇವಪ್ಪಂಡ ಕುಟ್ಟಪ್ಪ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗುರುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈ ಸಂದರ್ಭ ಕುಟ್ಟಪ್ಪ ಪುತ್ರ ಡಾಲಿ, ತನ್ನ ತಂದೆಯ ಸಾವಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದನ್ನು ನಿಲ್ಲಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾದಾಪುರ ಬಳಿಯ ಇಗ್ಗೋಡ್ಲು ಗ್ರಾಮದಲ್ಲಿನ ದೇವಪ್ಪಂಡ ಕುಟ್ಟಪ್ಪ ಸ್ವಗೃಹಕ್ಕೆ ಭೇಟಿ ನೀಡಿದ ಸಚಿವ ದಿನೇಶ್ ಗುಂಡೂರಾವ್, ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಚಿವರು, `ಧೈರ್ಯ ತಂದುಕೊಳ್ಳಿ' ಎಂದು ಸಾಂತ್ವನದ ಮಾತನ್ನಾಡಿದರು. ಈ ಸಂದರ್ಭ ಕುಟ್ಟಪ್ಪ ಪತ್ನಿ ಚಿಣ್ಣವ್ವ ದುಃಖದ ಕಟ್ಟೆಯೊಡೆಯಿತು. ಮನೆ ಮಂದಿ ಕಣ್ಣೀರುಗರೆದರು. ಆಕ್ರೋಶ ತೋಡಿಕೊಂಡ ಕುಟ್ಟಪ್ಪ ಪುತ್ರ ಡಾಲಿ, ತನ್ನ ತಂದೆ ಕುಟ್ಟಪ್ಪ ದೇಶಪ್ರೇಮಿ. ದೇಶಕ್ಕಾಗಿಯೇ
ಪ್ರಾಣತೆತ್ತಿದ್ದಾರೆ. ತನ್ನ ತಂದೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಹಿಂದೂ ಸಮಾವೇಶಕ್ಕೆ ತೆರಳುವಾಗ ಪೊಲೀಸರು ಎಲ್ಲಾ ವಾಹನಗಳ ತಪಾಸಣೆ ಕೈಗೊಳ್ಳುತ್ತಾರೆ. ಆದರೆ ಟಿಪ್ಪು ಜಯಂತಿ ಸಂದರ್ಭ ಮಡಿಕೇರಿಗೆ ಮಾರಕಾಸ್ತ್ರಗಳೊಂದಿಗೆ ತೆರಳುತ್ತಿದ್ದ ಯಾವುದೇ ವಾಹನಗಳನ್ನು ತಪಾಸಣೆ ಮಾಡಿಲ್ಲ ಎಂದೂ ಡಾಲಿ ಆರೋಪಿಸಿದರು. ತನ್ನ ತಂದೆ ಕುಟ್ಟಪ್ಪ ಕಾಂಪೌಂಡ್‍ನಿಂದ ಜಾರಿ ಸತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದನ್ನು ನಿಲ್ಲಿಸಲಿ. ಜೊತೆಗೆ, ತಂದೆ ಸಾವಿಗೆ ಕಾರಣರಾದ ವರಿಗೆ ಕಠಿಣ ಶಿಕ್ಷೆಯಾಗಬೇಕೆಂದೂ ಡಾಲಿ ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


