ನಗರದಲ್ಲಿ ಮಾತೃತ್ವ ಸೂಪರ್ ಸ್ಪೆಷಾಲಿಟಿ ಫರ್ಟಿಲಿಟಿ ಕೇಂದ್ರ ಪ್ರಾರಂಭ
ವೈಯಕ್ತಿಕ ಹಾಗೂ ಆತ್ಮೀಯತೆಯ ಸುರಕ್ಷತೆಯ ಸೇವೆ ಒದಗಿಸುವುದರಲ್ಲಿ ಮಾತೃತ್ವ ಸಂಸ್ಥೆ ನಂಬಿಕೆ ಹೊಂದಿದೆ. ಇದನ್ನು ಸಮಾಜದ ಎಲ್ಲ ವರ್ಗಕ್ಕೂ ಕೈಗೆಟಕುವ ದರದಲ್ಲಿ ಒದಗಿಸಲಾಗುವುದು ಎಂದು...

* ಸಂತಾನಕ್ಕೆ ಅಗತ್ಯವಿರುವ ಸಮಗ್ರ ಪರಿಹಾರ. ಅದೂ ಕೈಗೆಟಕುವ ದರದಲ್ಲಿ.
* ಸಂತಾನ ಔಷಧ ವಿದ್ಯಾಭ್ಯಾಸದಲ್ಲಿ ಪದವಿ ಮತ್ತು ಸರ್ಟಿಫಿಕೇಟ್ ಕೋರ್ಸ್.
* ಕರ್ನಾಟಕದಲ್ಲಿ ಇನ್ನೂ ಮೂರು ಸೇರಿದಂತೆ 2016 ರ ಅಂತ್ಯದ ವೇಳೆಗೆ ಒಟ್ಟು 10 ಕೇಂದ್ರ ಸ್ಥಾಪನೆ.
ಬೆಂಗಳೂರು: ಮೊದಲ ಪೀಳಿಗೆಯ ವೈದ್ಯ ವೃತ್ತಿಯ ನಾಲ್ಕು ಮಂದಿ ಪ್ರಾರಂಭಿಸಿರುವ ಸಂಸ್ಥೆ ಮ್ಯಾಕ್ಸ್ ಫರ್ಟಿಲಿಟಿ ಹೆಲ್ತ್‍ಕೇರ್ ಪ್ರೈ.ಲಿ.ನ ಮಾತೃತ್ವ ಸೂಪರ್ ಸ್ಪೆಷಾಲಿಟಿ ವೈದ್ಯಕೀಯ ಕೇಂದ್ರ ಬೆಂಗಳೂರಿನಲ್ಲಿ ಇಂದು ಕಾರ್ಯಾರಂಭ ಮಾಡಿದೆ. ಖ್ಯಾತ ನಟಿ ಪ್ರಿಯಾಂಕ ಉಪೇಂದ್ರ ಬೆಂಗಳೂರಿನಲ್ಲಿ ಮಾತೃತ್ವ ಉದ್ಘಾಟಿಸಿದ ಸಮಯದಲ್ಲಿ ವೈದ್ಯಕೀಯ ಕ್ಷೇತ್ರದ ತಜ್ಞರಾದ ಡಾ. ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ನಿರ್ದೇಶಕರು, ಗೌರವಾನ್ವಿತ ಮುಖ್ಯ ಅತಿಥಿಯಾಗಿದ್ದರು.
11 ಕೋಟಿ ರೂ. ಬಂಡವಾಳದೊಂದಿಗೆ ಬೆಂಗಳೂರಿನಲ್ಲಿ ಮಾತೃತ್ವ ಕೇಂದ್ರ ತೆರೆದಿರುವ ಸಂಸ್ಥೆ ಇನ್ನೂ 6 ಕೇಂದ್ರಗಳನ್ನು ಮೈಸೂರು, ದಾವಣೆಗೆರೆ, ಹುಬ್ಬಳ್ಳಿ, ಕರ್ನೂಲು, ಮದುರೈ ಹಾಗೂ ಸೇಲಂ - ಮುಂದಿನ ಆರು ತಿಂಗಳಲ್ಲಿ ತೆರೆಯುವ ಯೋಜನೆ ಹೊಂದಿದೆ. 2016 ರ ಅಂತ್ಯದ ವೇಳೆಗೆ ಒಟ್ಟು 10 ಕೇಂದ್ರಗಳನ್ನು ಎರಡನೇ ದರ್ಜೆ ನಗರಗಳಲ್ಲಿ ಹೊಂದುವುದು ಸಂಸ್ಥೆಯ ಗುರಿಯಾಗಿದೆ. ಸ್ಥಾಪನೆಗೆ ಅಗತ್ಯವಿರುವ ಬಂಡವಾಳವನ್ನು ಪ್ರಾಯೋಜಕರು ಮತ್ತು ಬ್ಯಾಂಕುಗಳಿಂದ ಸಾಲ ಪಡೆಯುವ ಮೂಲಕ ಮಾಡಲಾಗಿದೆ. ಅನೇಕ ವಿಸಿ ನಿಧಿಗಳು ಹೂಡಿಕೆಗೆ ಆಸಕ್ತಿ ತೋರಿವೆ. ಬಹುಶಃ ಮಾತೃತ್ವ ಮೊದಲ ವಿಸಿ ನಿಧಿಯನ್ನು 6 ತಿಂಗಳೊಳಗೆ ಪಡೆಯಲಿದ್ದು ಯೋಜನಾ ವಿಸ್ತರಣೆಗೆ ಇದು ನೆರವಾಗಲಿದೆ.
ಮ್ಯಾಕ್ಸ್ ಫರ್ಟಿಲಿಟಿ ಹೆಲ್ತ್ ಕೇರ್ ಪ್ರೈ.ಲಿ.ನ ನಿರ್ದೇಶಕ, ಡಾ. ಮಂಜುನಾಥ್ ಸಿ.ಎಸ್ ಅವರ ಪ್ರಕಾರ, ಸಂತಾನ ಭಾಗ್ಯದ ಅಗತ್ಯ ಇರುವ ಜನರು ಮೆಟ್ರೊ ಮತ್ತು 2 ಹಾಗೂ 3 ನೇ ದರ್ಜೆಯ ನಗರದ ಜನರಿಗೆ ಎಂಬುದನ್ನು ಮಾತೃತ್ವ ಸಂಸ್ಥೆಯ ಮೂಲ ವ್ಯಕ್ತಿಗಳು ಅರಿತಿದ್ದಾರೆ. ಅದೇರೀತಿ ಸಂತಾನ ಭಾಗ್ಯದ ಔಷಧಗಳ ಬಗ್ಗೆ ಮಕ್ಕಳಿಲ್ಲದ ಪೋಷಕರು ಗಾಢಾಂಧಕಾರದಲ್ಲಿ ಇದ್ದಾರೆ. ಇದರಿಂದಾಗಿ ಮಾತೃತ್ವ ಸಂಸ್ಥೆ ಕಾರ್ಯ ಆರಂಭಿಸಿದ್ದು ತಿರುಪತಿಯಲ್ಲಿ ಮೊದಲ ಕೇಂದ್ರ ತೆರೆಯಲಾಯಿತು. ಬೆಂಗಳೂರು ಕೇಂದ್ರ ಸಂತಾನ ಸಮಸ್ಯೆಗೆ ಪರಿಹಾರ ಮತ್ತು ಅನುಭವಿ ವೈದ್ಯರ ತಂಡ ಹಾಗೂ ಕ್ಲಿಷ್ಟ ಪ್ರಕರಣಗಳಿಗೆ ಪರಿಹಾರ ನೀಡುವ ಸೌಕರ್ಯ ಹೊಂದಿದೆ ಎಂದರು. ಹೊಸೂರು ಮತ್ತು ಕಡಪಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಫರ್ಟಿಲಿಟಿ ಕೇಂದ್ರಗಳು ಮಾತೃತ್ವ ಹೆಸರಲ್ಲಿ ಮರುನಾಮಕರಣಕೊಂಡು ಕಾರ್ಯನಿರ್ವಹಿಸುತ್ತಿವೆ.
ವೈಯಕ್ತಿಕ ಹಾಗೂ ಆತ್ಮೀಯತೆಯ ಸುರಕ್ಷತೆಯ ಸೇವೆ ಒದಗಿಸುವುದರಲ್ಲಿ ಮಾತೃತ್ವ ಸಂಸ್ಥೆ ನಂಬಿಕೆ ಹೊಂದಿದೆ. ಇದನ್ನು ಸಮಾಜದ ಎಲ್ಲ ವರ್ಗಕ್ಕೂ ಕೈಗೆಟಕುವ ದರದಲ್ಲಿ ಒದಗಿಸಲಾಗುವುದು ಎಂದು ಮ್ಯಾಕ್ಸ್ ಫರ್ಟಿಲಿಟಿ ಹೆಲ್ತ್ ಕೇರ್ ಪ್ರೈ.ಲಿ.ನ ನಿರ್ದೇಶಕಿಯಾದ ಡಾ. ರೇಖಾ ರಾಜೇಶ್ ತಿಳಿಸಿದ್ದಾರೆ. ಮಾತೃತ್ವ ಕೇಂದ್ರಗಳು ಒತ್ತಡ ಮುಕ್ತ ಅನುಭವವನ್ನು ದಂಪತಿಗಳಿಗೆ, ವ್ಯಕ್ತಿಗಳಿಗೆ ನೀಡುವ ಮೂಲಕ ಮೆಟ್ರೊ ಪ್ರಯಾಣ ತಪ್ಪಿಸುವಂತೆ ಮಾಡುತ್ತದೆ. ಈ ಮೂಲಕ ಗುಣಮಟ್ಟದ ಸುರಕ್ಷತೆ ನೀಡುವ ಜತೆಗೆ ಕೇಂದ್ರದ ತಜ್ಞರು ಅತ್ಯಂತ ಎಚ್ಚರಿಕೆಯಿಂದ ಚಿಕಿತ್ಸೆಯ ಪರಿಣಾಮ ಗಮನಿಸಬಹುದಾಗಿದೆ ಎಂದಿದ್ದಾರೆ ಅವರು.
ಇವುಗಳ ಜತೆಗೆ ಕೇಂದ್ರ ವೈದ್ಯರು ಹಾಗೂ ಎಂಬ್ರಿಯೊಲಾಜಿಸ್ಟ್‍ಗಳಿಗೆ ನಿರಂತರ ತರಬೇತಿ ಕಾರ್ಯಕ್ರಮ ನಡೆಸುವ ಮೂಲಕ ಸಂತಾನ ಭಾಗ್ಯ ಔಷಧಿಯಲ್ಲಿ ಪರಿಣತೆ ಬಯಸುವವರಿಗೆ ಸರ್ಟಿಫಿಕೇಟ್ ಹಾಗೂ ಪದವಿ ನೀಡಲಿದೆ. ಇವು ರಾಜೀವ್‍ಗಾಂಧಿ ಆರೋಗ್ಯ ಸೇವೆ ವಿಶ್ವವಿದ್ಯಾನಿಲಯ, ಬೆಂಗಳೂರು ಇದರ ಮಾನ್ಯತೆ ಪಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


