ಜಿಲ್ಲಾ ಸುದ್ದಿ

ಹಿರಿಯ ಲೇಖಕಿ ಎಚ್ ಎಸ್ ಪಾರ್ವತಿ ನಿಧನ

ದಶಕಗಳ ಕಾಲ ಉಲಿದಿದ್ದ ಧ್ವನಿಯೊಂದು ಶಾಶ್ವತವಾಗಿ ಉಡುಗಿಹೋಗಿದೆ. ಲೇಖಕಿ ಹಾಗೂ ಆಕಾಶವಾಣಿಯ ಕಾರ್ಯ ನಿರ್ವಾಹಕಿಯಾಗಿ ಕೆಲಸ ನಿರ್ವಹಿಸಿದ್ದ ಎಚ್.ಎಸ್. ಪಾರ್ವತಿ (81) ಸೋಮವಾರ ನಿಧನರಾಗಿದ್ದಾರೆ. ಅವರು ಪುತ್ರಿ ಡಾ. ಎಂ.ಎಸ್. ವಿದ್ಯಾ ಹಾಗೂ ಪುತ್ರ ಎಂ.ಎಸ್.ರವಿ ಅವರನ್ನು ಅಗಲಿದ್ದಾರೆ...

ಹಿರಿಯ ಲೇಖಕಿ ಎಚ್ ಎಸ್ ಪಾರ್ವತಿ ನಿಧನ
ಎಚ್.ಎಸ್. ಪಾರ್ವತಿ (ಸಂಗ್ರಹ ಚಿತ್ರ)
Published On :

ಬೆಂಗಳೂರು; ದಶಕಗಳ ಕಾಲ ಉಲಿದಿದ್ದ ಧ್ವನಿಯೊಂದು ಶಾಶ್ವತವಾಗಿ ಉಡುಗಿಹೋಗಿದೆ. ಲೇಖಕಿ ಹಾಗೂ ಆಕಾಶವಾಣಿಯ ಕಾರ್ಯ ನಿರ್ವಾಹಕಿಯಾಗಿ ಕೆಲಸ ನಿರ್ವಹಿಸಿದ್ದ ಎಚ್.ಎಸ್. ಪಾರ್ವತಿ (81) ಸೋಮವಾರ ನಿಧನರಾಗಿದ್ದಾರೆ. ಅವರು ಪುತ್ರಿ ಡಾ. ಎಂ.ಎಸ್. ವಿದ್ಯಾ ಹಾಗೂ ಪುತ್ರ ಎಂ.ಎಸ್.ರವಿ ಅವರನ್ನು ಅಗಲಿದ್ದಾರೆ.

ಶಾಸ್ತ್ರಿ ನಗರದ ಮನೆಯಲ್ಲಿ ಪಾರ್ಥಿವ ಶರೀರ ಇಡಲಾಗಿದ್ದು, ಅಮೆರಿಕಾದಲ್ಲಿರುವ ಸಹೋದರ ಬಂದ ನಂತರ ಅಂತ್ಯಕ್ರಿಯೆ ನಡೆಸಲಾಗುವುದು ವಿದ್ಯಾ ತಿಳಿಸಿದ್ದಾರೆ. ಹಿಂದಿ ಭಾಷೆಯಲ್ಲೇ ಹೆಚ್ಚಿನ ವ್ಯಾಸಂಗ ಮಾಡಿದ್ದರೂ ಪಾರ್ವತಿ ಅವರು ಲೇಖಕಿ ಹಾಗೂ ಅನುವಾದಕಿಯಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಲವು ಪ್ರಶಸ್ತಿಗಳಿಗೂ ಭಾಜನರು.

ಆಕಾಶವಾಣಿ ನಿರೂಪಕಿ: ಪಾರ್ವತಿ ಅವರು, ಬೆಂಗಳೂರು ಹಾಗೂ ಮೈಸೂರು ಆಕಾಶವಾಣಿಗಳಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಕಾರ್ಯನಿರ್ವಹಿಸಿದ್ದರು.

1958ರಲ್ಲಿ ಆಕಾಶವಾಣಿ ಬೆಂಗಳೂರು ವಿಭಾಗದಲ್ಲಿ ಉದ್ಯೋಗ ಪಡೆದ ಅವರು ಭಾಷಾಂತರ ಪರಿಣತರಾಗಿದ್ದರು. ಮಕ್ಕಳಿಗಾಗಿ ರೂಪಿಸಲಾದ `ಕೇಳಿ ಗಿಳಿಗಳೇ', ಕನ್ನಡದ ಕವಿಗಳ ಕುರಿತ ಚಿಂತನ, ಹೀಗೆ ಹಲವು ಕಾರ್ಯಕ್ರಮಗಳು ಪಾರ್ವತಿಯವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದಿದ್ದವು. 1990ರಲ್ಲಿ ಅವರು ಸ್ವಯಂ ನಿವೃತ್ತಿ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.