ಜಿಲ್ಲಾ ಸುದ್ದಿ

ಬಿಹಾರ ಚುನಾವಣೆ ಕೇಂದ್ರದಿಂದ ಪಂಚಾಯ್ತಿವರೆಗೆ ಮಾದರಿ: ಜನಾರ್ದನ ಪೂಜಾರಿ

ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಎಲ್ಲರಿಗೂ ಮಾದರಿ. ಪ್ರಧಾನಮಂತ್ರಿಗಷ್ಟೇ ಅಲ್ಲ, ಎಲ್ಲ ಮುಖ್ಯಮಂತ್ರಿಗಳಿಗೂ ಮಾದರಿ. ಕೇಂದ್ರದಿಂದ ಹಿಡಿದು ಪಂಚಾಯ್ತಿವರೆಗೆ ಮಾದರಿ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ...

ಬಿಹಾರ ಚುನಾವಣೆ ಕೇಂದ್ರದಿಂದ ಪಂಚಾಯ್ತಿವರೆಗೆ ಮಾದರಿ: ಜನಾರ್ದನ ಪೂಜಾರಿ
ಹಿರಿಯ ಕಾಂಗ್ರೆಸ್ ನಾಯಕ ಬಿ. ಜನಾರ್ದನ ಪೂಜಾರಿ (ಸಂಗ್ರಹ ಚಿತ್ರ)
Published On :

ಮಂಗಳೂರು: ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಎಲ್ಲರಿಗೂ ಮಾದರಿ. ಪ್ರಧಾನಮಂತ್ರಿಗಷ್ಟೇ ಅಲ್ಲ, ಎಲ್ಲ ಮುಖ್ಯಮಂತ್ರಿಗಳಿಗೂ ಮಾದರಿ. ಕೇಂದ್ರದಿಂದ ಹಿಡಿದು ಪಂಚಾಯ್ತಿವರೆಗೆ ಮಾದರಿ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದನ್ನು ಈ ಚುನಾವಣೆ ಕಲಿಸಿಕೊಟ್ಟಿದೆ. ಅಧಿಕಾರ ಸಿಕ್ಕಾಗ ತಲೆಗೆ ಮದ ಏರಬಾರದು, ದ್ವೇಷದ ವಿಷಬೀಜ ಬಿತ್ತುವುದು, ಅಸಹಿಷ್ಣುತೆಯನ್ನು ಎಲ್ಲ ಕಡೆ ಸೃಷ್ಟಿ ಮಾಡುವುದು, ಅಸ್ಪೃಶ್ಯತೆಯನ್ನು ಕೂಡ ದೇಶದ ಮೇಲೆ ಹೇರಿದ ಕೇಂದ್ರ ಸರ್ಕಾರಕ್ಕೆ ಬಿಹಾರದ ಜನತೆ ತಕ್ಕ ಉತ್ತರವನ್ನೇ ಕೊಟ್ಟಿದ್ದಾರೆ ಎಂದರು.

``ಗೋಮಾಂಸ ತಿನ್ನುವವರನ್ನು ಹತ್ಯೆ ಮಾಡುತ್ತೇವೆ ಎಂದು ಸಂಘ ಪರಿವಾರದವರು ಹೇಳುತ್ತಾರೆ, ವೇದವನ್ನೇ ತಿರುಚುತ್ತಾರೆ ಇವರು. ಚಿದಾನಂದ ಮೂರ್ತಿಯವರು ಮುಖ್ಯಮಂತ್ರಿಗೆ `ನೀವು ನರ ಮಾಂಸ ತಿನ್ನಿ' ಎಂದು ಹೇಳ್ತಾರೆ. ಬಿಹಾರ ಚುನಾವಣೆಯಲ್ಲಿ ಇದನ್ನೇ ಅಸ್ತ್ರವನ್ನಾಗಿ ಪ್ರಯೋಗ ಮಾಡಿದ್ರು. ಇದು ಬೇಕಿತ್ತೇ ಇವರಿಗೆ? ನಿಮ್ಮಲ್ಲಿ ಸಹಿಷ್ಣುತೆ ಎಂಬುದೇ ಇಲ್ಲವೇ'' ಎಂದು ಸಂಘ ಪರಿವಾರದ ಮುಖಂಡರನ್ನು ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.