ಜಿಲ್ಲಾ ಸುದ್ದಿ

ಬಿಹಾರ ಸೋಲಿಗೆ ಆತ್ಮಾವಲೋಕನ

ಬಿಹಾರ ವಿಧಾನಸಭೆ ಚುನಾವಣೆ ಸೋಲನ್ನು ಬಿಜೆಪಿ ಸ್ವೀಕರಿಸುತ್ತದೆ. ಆದರೆ, ಭವಿಷ್ಯದಲ್ಲಿ ಬಿಜೆಪಿಗೆ ಗೆಲವು ಕಟ್ಟಿಟ್ಟ ಬುತ್ತಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ...

ಬಿಹಾರ ಸೋಲಿಗೆ ಆತ್ಮಾವಲೋಕನ
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ
Published On :

ಕೊಪ್ಪಳ: ಬಿಹಾರ ವಿಧಾನಸಭೆ ಚುನಾವಣೆ ಸೋಲನ್ನು ಬಿಜೆಪಿ ಸ್ವೀಕರಿಸುತ್ತದೆ. ಆದರೆ, ಭವಿಷ್ಯದಲ್ಲಿ ಬಿಜೆಪಿಗೆ ಗೆಲವು ಕಟ್ಟಿಟ್ಟ ಬುತ್ತಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ
ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಬಿಹಾರ ಜನರ ತೀರ್ಪಿಗೆ ಪ್ರತಿಯೊಬ್ಬರು ತಲೆ ಬಾಗಲೇಬೇಕು. ಅಲ್ಲಿನ ಸೋಲನ್ನು ಬಿಜೆಪಿ ಒಪ್ಪಿಕೊಳ್ಳುತ್ತಲೇ ಸೋಲಿಗೆ ಕಾರಣ ಕಂಡುಹಿಡಿಯುವ ಆತ್ಮಾವಲೋಕನ ಮಾಡಿಕೊಳ್ಳುತ್ತದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯವರು ಕಾಂಗ್ರೆಸ್‍ನಲ್ಲಿ ಸೂತ್ರದ ಬೊಂಬೆಯಷ್ಟೆ. ಪ್ರತಿ ಹಂತದಲ್ಲಿ ಸುಳ್ಳು ಹೇಳುತ್ತಾರೆ. ಅವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಅವರು ಹೇಳುವ ಸುಳ್ಳುಗಳ ಸರಮಾಲೆಗೆ ನೋಬೆಲ್ ಪಾರಿತೋಷಕ ಕೊಡಬೇಕು ಎಂದು ವ್ಯಂಗ್ಯವಾಡಿದರು.

ಮೋದಿಯವರನ್ನು ಬೈಯುವುದು ಬಿಟ್ಟರೆ ಸಿದ್ದರಾಮಯ್ಯನವರಿಗೆ ಬೇರೆ ಕೆಲಸ ಗೊತ್ತಿಲ್ಲ. ಅವರೊಬ್ಬ ಭ್ರಷ್ಟರ ರಕ್ಷಕ. ಇಲ್ಲದಿದ್ದರೆ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಅವರು ಮೂಕರಂತೆ ವರ್ತಿಸದೆ ಸಚಿವರಿಂದ ರಾಜಿನಾಮೆ ಪಡೆಯುತ್ತಿದ್ದರು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.