ವಿದ್ಯಾರ್ಥಿನಿಗೆ ಖಾರದ ಪುಡಿ ಎರಚಿ, ಮಚ್ಚಿನಿಂದ ಹಲ್ಲೆ
ಪ್ರೇಮ ನಿವೇದನೆ ತಿರಸ್ಕರಿಸಿದ್ದಕ್ಕಾಗಿ ಮೂವರು ಯುವಕರು 16ರ ಹರೆಯದ ವಿದ್ಯಾರ್ಥಿನಿಗೆ ಖಾರದ ಪುಡಿ ಎರಚಿ ಮಚ್ಚಿನಿಂದ ಹಲ್ಲೆಗೈದ ಘಟನೆ ವರದಿ...

Published On :
ಬೆಂಗಳೂರು: ಪ್ರೇಮ ನಿವೇದನೆ ತಿರಸ್ಕರಿಸಿದ್ದಕ್ಕಾಗಿ ಮೂವರು ಯುವಕರು 16ರ ಹರೆಯದ ವಿದ್ಯಾರ್ಥಿನಿಗೆ ಖಾರದ ಪುಡಿ ಎರಚಿ ಮಚ್ಚಿನಿಂದ ಹಲ್ಲೆಗೈದ ಘಟನೆ ವರದಿಯಾಗಿದೆ.
ಬ್ರಿಂದಾ ಎಂಬ ಹುಡುಗಿ ಕಾಲೇಜಿನಿಂದ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ದಾಳಿ ಮಾಡಿದ ಯುವಕರಲ್ಲಿ ಒಬ್ಬ ಬ್ರಿಂದಾಗೆ ಪ್ರೇಮ ನಿವೇದನೆ ಮಾಡಿದ್ದು, ಅದನ್ನಾಕೆ ತಿರಸ್ಕರಿಸಿದ್ದಳು.
ನಾವು ತುಂಬಾ ಬಡ ಕುಟುಂಬದವರು, ತುಂಬಾ ಭಯವಾಗುತ್ತಿದೆ ಎಂದು ಬ್ರಿಂದಾ ಅಮ್ಮ ಕಣ್ಣೀರಿಡುತ್ತಿದ್ದಾರೆ.
ನನ್ನ ಮಗಳನ್ನು ರಕ್ಷಿಸಿ, ನನಗಿರುವುದು ಅವಳು ಮಾತ್ರ. ಅವಳ ಕೈಗೆ ಯಾವ ರೀತಿ ಏಟಾಗಿದೆ ಎಂಬುದನ್ನು ನೋಡಿ. ಅವಳ ಈ ಅವಸ್ಥೆ ನನ್ನಿಂದ ನೋಡಲಾಗುವುದಿಲ್ಲ ಎಂದು ಅಮ್ಮ ಕಣ್ಣೀರಾಗುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


