ಮಹಿಳೆ ಚಿತ್ರ ತೆಗೆದವನಿಗೆ ಗೂಸಾ
ಮಹಿಳಾ ಸಿಬ್ಬಂದಿಯ ಅನುಮತಿ ಇಲ್ಲದೇ ಆಕೆಯ ಫೋಟೋ ಸೆರೆ ಹಿಡಿದು ಅಸಭ್ಯವಾಗಿ ವರ್ತಿಸುತ್ತಿದ್ದ ಬಟ್ಟೆ ಮಳಿಗೆ ಮಾಲೀಕನಿಗೆ ಸಾರ್ವಜನಿಕರು ಹಾಗೂ ಸಂಘಟನೆಯೊಂದರ ಸದಸ್ಯರು ಹಿಡಿದು ಥಳಿಸಿರುವ ಘಟನೆ ಮಾಗಡಿ ರಸ್ತೆ ತಾವರೆಕೆರೆಯಲ್ಲಿ ನಡೆದಿದೆ...

ಬೆಂಗಳೂರು: ಮಹಿಳಾ ಸಿಬ್ಬಂದಿಯ ಅನುಮತಿ ಇಲ್ಲದೇ ಆಕೆಯ ಫೋಟೋ ಸೆರೆ ಹಿಡಿದು ಅಸಭ್ಯವಾಗಿ ವರ್ತಿಸುತ್ತಿದ್ದ ಬಟ್ಟೆ ಮಳಿಗೆ ಮಾಲೀಕನಿಗೆ ಸಾರ್ವಜನಿಕರು ಹಾಗೂ ಸಂಘಟನೆಯೊಂದರ ಸದಸ್ಯರು ಹಿಡಿದು ಥಳಿಸಿರುವ ಘಟನೆ ಮಾಗಡಿ ರಸ್ತೆ ತಾವರೆಕೆರೆಯಲ್ಲಿ ನಡೆದಿದೆ.
ಅಂಜನಪುರ ನಿವಾಸಿ ದೆಹಲಿ ಮೂಲದ ಬಟ್ಟೆ ವ್ಯಾಪಾರಿ ಪ್ರಕಾಶ ಹಲ್ಲೆಗೊಳಗಾದವ. ಈತನನ್ನು ತಾವರೆಕೆರೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಕೆಲ ವರ್ಷಗಳಿಂದ ಮಹಿಳೆಯೊಬ್ಬರು ಈತನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾಲೀಕ ಪ್ರಕಾಶ ಹಲವು ದಿನಗಳಿಂದ ಮಹಿಳೆಗೆ ಕಿರುಕುಳ ನೀಡುತ್ತಿದ್ದ. ಮೊಬೈಲ್‍ನಲ್ಲಿ ಫೋಟೋ ತೆಗೆದುಕೊಳ್ಳುತ್ತೇನೆ. ವಿವಿಧ ರೀತಿಯ ಬಟ್ಟೆಗಳನ್ನು ಧರಿಸು ಎಂದು ಆಕೆಗೆ ಒತ್ತಾಯಿಸುತ್ತಿದ್ದ. ಈ ದುರ್ವರ್ತನೆಯಿಂದ ಬೇಸತ್ತ ಮಹಿಳೆ ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಹಲವು ಬಾರಿ ಮಾಲೀಕನಿಗೆ ಎಚ್ಚರಿಕೆಯನ್ನೂ ನೀಡಿದ್ದರು. ಆದರೂ ಈತ ತನ್ನ ಚಾಳಿ ಮುಂದುವರಿಸಿದ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ಮಾಲೀಕನ ವರ್ತನೆ ಮಿತಿ ಮೀರಿದ್ದರಿಂದ ಬೇಸತ್ತ ಮಹಿಳೆ ಕೊನೆಗೆ ಈ ವಿಚಾರವನ್ನು ಸ್ಥಳೀಯರ ಗಮನಕ್ಕೆ ತಂದರು. ಬಟ್ಟೆ ಅಂಗಡಿಗೆ ಬಂದ ಸ್ಥಳೀಯರು ಆತನ ಮೊಬೈಲ್ ಕಸಿದುಕೊಂಡು ವೀಕ್ಷಿಸಿದಾಗ ಮಹಿಳೆಯ ಫೋಟೊಗಳಿರುವುದು ಕಂಡುಬಂದಿದೆ. ಬಳಿಕ ಮಾಲೀಕ ಪ್ರಕಾಶನಿಗೆ ಥಳಿಸಿದ ಸ್ಥಳೀಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಸ್ನೇಹಿತರು ಮತ್ತು ಸ್ಥಳಿಯರೊಂದಿಗೆ ಚರ್ಚಿಸಿದ ಬಳಿಕ ಈ ಬಗ್ಗೆ ದೂರು ದಾಖಲಿಸುವುದಾಗಿ ಮಹಿಳೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


