ಜಿಲ್ಲಾ ಸುದ್ದಿ

ಚುನಾವಣೆಗೆ ಹಂಚಲು ಸಂಗ್ರಹಿಸಿದ್ದ ಕಳ್ಳಭಟ್ಟಿ ಬಯಲಿಗೆಳೆದ ಮಕ್ಕಳು!

ಗ್ರಾಪಂ ಚುನಾವಣೆಯಲ್ಲಿ ಹಂಚಲು ಸಂಗ್ರಹಿಸಿದ್ದ ಅಕ್ರಮ ಸಾರಾಯಿ ಭಟ್ಟಿ ಹಾಗೂ ಮಾರಾಟ ಕೇಂದ್ರಗಳ ಕುರಿತು ಮಕ್ಕಳೇ ಪೊಲೀಸರಿಗೆ...

ಚುನಾವಣೆಗೆ ಹಂಚಲು ಸಂಗ್ರಹಿಸಿದ್ದ ಕಳ್ಳಭಟ್ಟಿ ಬಯಲಿಗೆಳೆದ ಮಕ್ಕಳು!
ಸಾಂದರ್ಭಿಕ ಚಿತ್ರ
Published On :

ಬೀದರ್: ಗ್ರಾಪಂ ಚುನಾವಣೆಯಲ್ಲಿ ಹಂಚಲು ಸಂಗ್ರಹಿಸಿದ್ದ ಅಕ್ರಮ ಸಾರಾಯಿ ಭಟ್ಟಿ ಹಾಗೂ ಮಾರಾಟ ಕೇಂದ್ರಗಳ ಕುರಿತು ಮಕ್ಕಳೇ ಪೊಲೀಸರಿಗೆ ಮಾಹಿತಿ ನೀಡಿ ದಾಳಿ ಮಾಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮುಂಜಾಗ್ರತೆ ಕ್ರಮವಾಗಿ ಪೊಲೀಸ್, ಲಾಟರಿ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಅದರಂತೆ ಮೇ 24ರಂದು ಬದಗಲ್ ತಾಂಡಾಕ್ಕೂ ಭೇಟಿ ನೀಡಿ ಪರಿಶೀಲಿಸುವ ವೇಳೆ ಮಕ್ಕಳು ಪೊಲೀಸರಿಗೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯ ಹಾಗೂ ಕಳ್ಳಭಟ್ಟಿ ಅಡ್ಡೆಗಳ ಕುರಿತು ಮಾಹಿತಿ ನೀಡಿದ್ದಾರೆ.

ಅಲ್ಲದೇ ಪೊಲೀಸರ ಜತೆಗೂಡಿ ಕಳ್ಳಭಟ್ಟಿ ಸಾರಾಯಿ ನಾಶಗೊಳಿಸಿದ್ದಾರೆ. ಇಡೀ ಗ್ರಾಮದಲ್ಲಿ ಕಳ್ಳಭಟ್ಟಿ ವ್ಯವಹಾರ ನಡೆಯುತ್ತಿದ್ದುದನ್ನು ಕಂಡು ಅಧಿಕಾರಿಗಳು ಹೌಹಾರಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.