ಕನ್ನಡ ಕಡ್ಡಾಯ; ಆಯ್ಕೆ ಭಾಷೆ ಇಂಗ್ಲಿಷ್
ಪದವಿ ತರಗತಿಗಳಿಗೆ ಕನ್ನಡ ಕಡ್ಡಾಯವಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಆಯ್ಕೆ ಭಾಷೆಯಾಗಲಿದೆ. ಪದವಿ ತರಗತಿಗಳಿಗೆ ಇಷ್ಟು ವರ್ಷಗಳ...

ಬೆಂಗಳೂರು: ಪದವಿ ತರಗತಿಗಳಿಗೆ ಕನ್ನಡ ಕಡ್ಡಾಯವಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಆಯ್ಕೆ ಭಾಷೆಯಾಗಲಿದೆ. ಪದವಿ ತರಗತಿಗಳಿಗೆ ಇಷ್ಟು ವರ್ಷಗಳ ಕಾಲ ಇಂಗ್ಲಿಷ್‍ನ್ನು
ಒಂದು ಭಾಷೆಯಾಗಿ, ಕಡ್ಡಾಯವಾಗಿ ಬೋಧಿಸಲಾಗುತ್ತಿತ್ತು. ಆದರೆ ಉನ್ನತ ಶಿಕ್ಷಣ ಪರಿಷತ್‍ನ ಹೊಸ ನಿರ್ಧಾರದಿಂದ ಈ ಜಾಗಕ್ಕೆ ಕನ್ನಡ ಬರಲಿದ್ದು, ಇಂಗ್ಲಿಷ್ ಭಾಷೆಯನ್ನು
ವಿದ್ಯಾರ್ಥಿಗಳು ಆಯ್ಕೆಯಾಗಿ ಅಧ್ಯಯನ ಮಾಡಬಹುದು. ಇಂಗ್ಲಿಷ್ ಬಯಸದ ವಿದ್ಯಾರ್ಥಿಗಳು ಬೇರೆ ಭಾಷೆಯನ್ನು ತೆಗೆದುಕೊಳ್ಳಬೇಕು. ಇದರಿಂದ ಬೇರೆ ಭಾಷೆ ಓದಲು
ಬಯಸುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ. ಕನ್ನಡ ಭಾಷೆ ಉಳಿಸಲು ಹಾಗೂ ಉನ್ನತ ಶಿಕ್ಷಣದಲ್ಲಿಯೂ ಕನ್ನಡದ ಅಸ್ತಿತ್ವ ಉಳಿಸುವ ಸಲುವಾಗಿ ಸರ್ಕಾರ ತೆಗೆದುಕೊಂಡಿರುವ ಕ್ರಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಆದರೆ ,ಈ ನೀತಿಯು ವಿವಿಗಳ ಭಾಷಾ ನೀತಿಗಳ ಬಗ್ಗೆ ಗೊಂದಲ ಮೂಡಸಿದೆ. ಸದ್ಯದ ಮಟ್ಟಿಗೆ ದ್ವಿಭಾಷಾ ನೀತಿಯನ್ನು ವಿವಿಗಳು ಅಳವಡಿಸಿಕೊಂಡಿವೆ. ಈಗಿರುವ ಇಂಗ್ಲಿಷ್ ಭಾಷಾ ಕಡ್ಡಾಯ ನೀತಿಯನ್ನು ಕೈಬಿಡದಿದ್ದರೆ, ಅನಿವಾರ್ಯವಾಗಿ ತ್ರಿಭಾಷಾ ನೀತಿ ಅನುಷ್ಠಾನಕ್ಕೆ ತರಬೇಕು. ಈ ಬಗ್ಗೆ ರಾಜ್ಯ ಸರ್ಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ವಿಶ್ವವಿದ್ಯಾಲಯಗಳು ಗೊಂದಲದಲ್ಲಿಯೇಇವೆ.
ತಿಂಗಳಾಂತ್ಯಕ್ಕೆ ನಡೆಯಲಿರುವ ಎಲ್ಲ ವಿವಿಗಳ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಣಯವಾಗಲಿದೆ. ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಸರ್ಕಾರದ
ನೀತಿಗೆ ಅಂತಿಮ ಸ್ವರೂಪ ಸಿಗುವ ಸಾಧ್ಯತೆಯಿದೆ. ಈ ಶೈಕ್ಷಣಿಕ ವರ್ಷದಿಂದಲೇ ನೂತನ ಭಾಷಾನೀತಿ ಜಾರಿಗೆ ತರಬೇಕಿದ್ದರೆ ಕಡ್ಡಾಯವಾಗಿ ಮುಂದಿನ ಒಂದು ತಿಂಗಳೊಳಗೆ ಸಮಿತಿ ರಚಿಸಿ ವರದಿ ಪಡೆದು , ಪಠ್ಯ ನಿರ್ಧರಿಸಬೇಕಾಗುತ್ತದೆ.
ಇಂಗ್ಲಿಷ್ ಸ್ಥಾನ ಭರಿಸಲಿರುವ ಕನ್ನಡ : ಪದವಿಯಲ್ಲಿ ಎರಡನೇ ಭಾಷೆಗಾಗಿ ವಿದ್ಯಾರ್ಥಿಗಳು ಇಂಗ್ಲಿಷ್, ಸಂಸ್ಕೃತ, ಹಿಂದಿ ಅಥವಾ ಬೇರೆ ಯಾವುದೇ ವಿಷಯವನ್ನು ತೆಗೆದುಕೊಳ್ಳಬಹುದು. ಇದಕ್ಕೆ ಯಾವುದೇ ಷರತ್ತುಗಳಿರುವುದಿಲ್ಲ. ವಿದ್ಯಾರ್ಥಿಗಳ
ಎರಡನೇ ಭಾಷೆಯ ಆಯ್ಕೆಯು ಆಯಾ ಕಾಲೇಜುಗಳಲ್ಲಿ ಲಭ್ಯವಿರುವ ವಿಷಯದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ, ಒಂದೊಮ್ಮೆ ಹೊರ
ರಾಜ್ಯ ಅಥವಾ ದೇಶದ ವಿದ್ಯಾರ್ಥಿಗಳಾಗಿದ್ದರೆ ಅವರು ಒಂದು ಭಾಷೆಯನ್ನಾಗಿ ಕನ್ನಡವನ್ನು ಕಲಿಯಬೇಕು. ಅವರಿಗೆ
ಸ್ಥಳೀಯರಿಗೆ ಇರುವಂಥ ಕನ್ನಡ ಪಠ್ಯ ಇರುವುದಿಲ್ಲ. ಬದಲಾಗಿ ಕನ್ನಡ ಪ್ರಾಥಮಿಕ ಕಲಿಕೆ ಹಾಗೂ ಓದಿಗೆ ಅಗತ್ಯವಿರುವ
ಪಠ್ಯವನ್ನು ಒದಗಿಸಲಾಗುತ್ತದೆ. ಬೆಂಗಳೂರು ವಿವಿಯಲ್ಲಿ ಇಂಥ ವ್ಯವಸ್ಥೆ ಮಾಡುವುದಾಗಿ ಕುಲಪತಿ ಪ್ರೊ. ತಿಮ್ಮೇಗೌಡ ತಿಳಿಸಿದ್ದಾರೆ. ಉಳಿಜ ವಿವಿಗಳ ಸ್ವರೂಪದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ. ಮುಂದಿನ ಸಿಂಡಿಕೇಟ್ ನಲ್ಲಿ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಈ ವರ್ಷದಿಂದಲೇ ಜಾರಿ ಸುಲಭವಲ್ಲ
ಕನ್ನಡ ಭಾಷೆ ಕಡ್ಡಾಯ ಮಾಡುವಾಗ ಪ್ರತ್ಯೇಕ ಪಠ್ಯ ಬೇಕು. ಇದಕ್ಕೆ ಸಂಬಂ„ಸಿ ಸಮಿತಿ ರಚಿಸಿ ವರದಿ ಪಡೆಯಬೇಕಾಗುತ್ತದೆ. ಅಂದರೆ ಜುಲೈನೊಳಗೆ ಈ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಪಠ್ಯ ರಚನೆಯಂತಹ ವಿಚಾರಗಳು ಒಂದೂವರೆ ತಿಂಗಳಲ್ಲಿ ನಿರ್ಧಾರವಾಗುವುದು ಅಸಾಧ್ಯ. ಈ ಬಗ್ಗೆ ಪ್ರೊ.ತಿಮ್ಮೇಗೌಡರನ್ನು ಪ್ರಶ್ನಿಸಿದಾಗ, `ಈ ವರ್ಷದಿಂದಲೇ ಜಾರಿಗೆ ತರಲು ಪ್ರಯತ್ನಿಸ್ತುತೇವೆ. ಆದರೆ ಸಿಂಡಿಕೇಟ್‍ನಲ್ಲಿ ಸಮಿತಿ ರಚಿಸಿ ಪಠ್ಯ ರಚನೆ ಮಾಡಬೇಕಾಗುತ್ತದೆ. ಒಂದೊಮ್ಮೆ ಸಾಧ್ಯವಾಗದಿದ್ದರೆ 2016-17ನೇಶೈಕ್ಷಣಿಕ ವರ್ಷಕ್ಕೆ ಮುಂದೂಡಬೇಕಾಗುತ್ತದೆ' ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


