ಹೀರೋ ಆಗಲು ಹೊರಟ ಶಾಸಕ ನಡಹಳ್ಳಿ: ಪಾಪು ತರಾಟೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಧ್ವನಿ ಎತ್ತುತ್ತಿರುವ ದೇವರಹಿಪ್ಪರಗಿಯ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಏಕಾಏಕಿ ಹೀರೋ ಆಗಲು ಹೊರಟಿದ್ದಾರೆಂದು ನಾಡೋಜ...

ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಧ್ವನಿ ಎತ್ತುತ್ತಿರುವ ದೇವರಹಿಪ್ಪರಗಿಯ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಏಕಾಏಕಿ ಹೀರೋ ಆಗಲು ಹೊರಟಿದ್ದಾರೆಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಹರಿಹಾಯ್ದಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ತಮ್ಮ ಸಿಟ್ಟು ಹೊರ ಹಾಕಿರುವ ಪಾಪು, ನಡಹಳ್ಳಿ ಶಾಸಕರಾಗುವ ಮೊದಲು ಏನಿದ್ದರು ಎಂಬುದನ್ನು ಅರಿಯಲಿ. ಉತ್ತರ ಕರ್ನಾಟಕವನ್ನು ಸಿಎಂ ಸಿದ್ದರಾಮಯ್ಯ ನಿರ್ಲಕ್ಷಿಸಿರುವರೆಂದು ಬಹುದೊಡ್ದ ರಾಗ ತೆಗೆದು ಹೇಳುತ್ತಾ ರಾಜಕೀಯ ರಂಗಸ್ಥಳದ ಮೇಲೆ ಕಾಣಿಸಿಕೊಳ್ಳಬೇಕೆಂದು ಹೊರಟಿದ್ದಾರೆ. ಈಗ ಎತ್ತಿರುವ ಉತ್ತರ ಕರ್ನಾಟಕವು ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎನ್ನುವ ಮಾತನ್ನು ಶಾಸಕ ಸಭೆಯಲ್ಲಿ ಎಂದೂ ಎತ್ತಲಿಲ್ಲ. ಅವರ ಬಾಯಲ್ಲಿ ಆಗಾಗ ಪ್ರತ್ಯೇಕ ರಾಜ್ಯದ ಧ್ವನಿಯು ಕೇಳಿ ಬರುತ್ತಿದೆ. ರಾಜ್ಯವನ್ನು ಒಡೆಯುವುದಕ್ಕೆ ಬಹುದೊಡ್ಡ ಶಕ್ತಿ ಬೇಕಾಗಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


