ಐಬಿಪಿಎಸ್ ಆಯ್ಕೆಯಲ್ಲಿ ಕನ್ನಡಿಗರಿಗೆ ಅನ್ಯಾಯ
ಸರಕಾರಿ ಬ್ಯಾಂಕ್‌ಗಳಿಗೆ ಉದ್ಯೋಗಿಗಳನ್ನು ನೇಮಕ ಮಾಡುವ ಸಂಸ್ಥೆಯಾದ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ ...

ಬೆಂಗಳೂರು: ಸರಕಾರಿ ಬ್ಯಾಂಕ್‌ಗಳಿಗೆ ಉದ್ಯೋಗಿಗಳನ್ನು ನೇಮಕ ಮಾಡುವ ಸಂಸ್ಥೆಯಾದ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ (ಐಬಿಪಿಎಸ್) ಸಮಿತಿ ರಾಜ್ಯದ ಅಭ್ಯರ್ಥಿಗಳನ್ನು ಕಡೆಗಣಿಸಿದೆ.
ಐಬಿಪಿಎಸ್ ಸಂದರ್ಶನ ವಿಭಾಗದಲ್ಲಿ ಲಾಭಿ ನಡೆದಿದೆ. ಲಿಖಿತ ಪರೀಕ್ಷೆ ಹೊರ ರಾಜ್ಯದ ಅಭ್ಯರ್ಥಿಗಳಿಗಿಂತ ಹೆಚ್ಚು ಅಂಕವನ್ನು ನಾವು ಪಡೆದಿದ್ದರೂ, ಸಂದರ್ಶನದಲ್ಲಿ ನಮಗೆ ಉದ್ದೇಶಕ ಪೂರ್ವಕವಾಗಿ ಕಡಿಮೆ ಅಂಕಗಳನ್ನು ನೀಡಿ ಐಬಿಪಿಎಸ್ ಸಂದರ್ಶನ ವಿಭಾಗ ಅಕ್ರಮವೆಸಗಿದೆ ಎಂದು ನೊಂದ ಅಭ್ಯರ್ಥಿ ಧನರಾಜು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 2014 ರಲ್ಲಿ ಕ್ಲರಿಕಲ್ 1990 ಹುದ್ದೆಗಳಿಗಾಗಿ ಐಬಿಪಿಎಸ್ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 1200ಕ್ಕಿಂತ ಹೆಚ್ಚು ಆಂಧ್ರಪ್ರದೇಶ ಹಾಗೂ ತೆಲಂಗಾಣದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯದ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಅಭ್ಯರ್ಥಿಗಳು ನಮಗಿಂತಲೂ ಸಾಕಷ್ಟು ಅಂಕಗಳ ಅಂತರ ಹೊಂದಿದ್ದಾರೆ. ಆದರೆ, ಸಂದರ್ಶನ ವೇಳೆ ಹಣಕಾಸು ಲಾಭಿ ನಡೆಸಿ ಅವರಿಗೆ ಹೆಚ್ಚು ಅಂಕಗಳನ್ನು ನೀಡಿ, ನಮ್ಮ ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂದರ್ಶನ ಸಮಯದಲ್ಲಿ ಕರ್ನಾಟಕದ ಅಭ್ಯರ್ಥಿಗಳಿಗೆ ಕಡಿಮೆ ಅಂಕ ನೀಡಿರುವುದಲ್ಲದೇ, ಇನ್ನೂ ಕೆಲವು ಅಭ್ಯರ್ಥಿಗಳನ್ನು ಅನರ್ಹಗೊಳಿಸಿದೆ. ಇದರಿಂದ ನಮ್ಮ ರಾಜ್ಯದ ಅಭ್ಯರ್ಥಿಗಳಿಗೆ ಅನ್ಯಾಯಾವಾಗುತ್ತಿದೆ. ಕೂಡಲೇ ಈ ಕುರಿತು ಕ್ರಮ ಸರ್ಕಾರ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


