ಜಿಲ್ಲಾ ಸುದ್ದಿ

ತ್ರಿಭಜನೆ, ಚುನಾವಣೆಗೆ ಸಂಬಂಧವೇ ಇಲ್ಲ: ಟಿ.ಬಿ.ಜಯಚಂದ್ರ

ಬಿಬಿಎಂಪಿಗೆ ಮೂರು ತಿಂಗಳಲ್ಲಿ ಚುನಾವಣೆ ನಡೆಸಬೇಕೆಂದು ನ್ಯಾಯಾಲಯ ನೀಡಿರುವ ನಿರ್ದೇಶನಕ್ಕೂ ಬಿಬಿಎಂಪಿ ವಿಭಜನೆ ವಿಚಾರಕ್ಕೂ ಸಂಬಂಧವೇ ಇಲ್ಲ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅಭಿಪ್ರಾಯಪಟ್ಟಿದ್ದಾರೆ...

ತ್ರಿಭಜನೆ, ಚುನಾವಣೆಗೆ ಸಂಬಂಧವೇ ಇಲ್ಲ: ಟಿ.ಬಿ.ಜಯಚಂದ್ರ
ಕಾನೂನು ಸಚಿವ ಟಿ.ಬಿ.ಜಯಚಂದ್ರ
Published On :

ಬೆಂಗಳೂರು: ಬಿಬಿಎಂಪಿಗೆ ಮೂರು ತಿಂಗಳಲ್ಲಿ ಚುನಾವಣೆ ನಡೆಸಬೇಕೆಂದು ನ್ಯಾಯಾಲಯ ನೀಡಿರುವ ನಿರ್ದೇಶನಕ್ಕೂ ಬಿಬಿಎಂಪಿ ವಿಭಜನೆ ವಿಚಾರಕ್ಕೂ ಸಂಬಂಧವೇ ಇಲ್ಲ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ-2015 ಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ಪರಿಶೀಲನಾ ಸಮಿತಿಯ ಪ್ರಾರಂಭಿಕ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನ್ಯಾಯಾಲಯ ಸೂಚನೆಯಂತೆ ಚುವಾವಣೆ ನಡೆಸಬೇಕಾದ್ದು ಚುನಾವಣಾ ಆಯೋಗದ ಕರ್ತವ್ಯ. ಆದರೆ, ಆಡಳಿತದ ದೃಷ್ಠಿಯಿಂದ ವಿಭಾಗ ಮಾಡಬೇಕೇ ಬೇಡವೇ ಎಂಬುದು ಶಾಸನಸಭೆಗೆ ಬಿಟ್ಟ ವಿಚಾರ.

ಈಗಾಗಲೇ ಪರಿಷತ್ತಿನ ಸದನ ಸಮಿತಿ ರಚನೆಯಾಗಿ ಮೊದಲ ಸಭೆ ನಡೆದಿದೆ. ಮೂರು ಗಂಟೆಗಳ ಕಾಲ ವ್ಯಾಪಕವಾಗಿ ಎಲ್ಲಾ ವಿಚಾರದಲ್ಲೂ ಕೂಡ ಚರ್ಚೆ ಆಯಿತು, ಸದಸ್ಯರೆಲ್ಲರೂ ಕೂಡ ಅವರವರ ವಿಭಿನ್ನ ಅಭಿಪ್ರಾಯ ಸೂಚಿಸಿದ್ದಾರೆ. ಇದು ಒಂದೇ ದಿನಗದಲ್ಲಿ ಮುಗಿಯುವುದಿಲ್ಲ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.