ಜಿಲ್ಲಾ ಸುದ್ದಿ

ಹೈಕೋರ್ಟ್ ಗೆ 4ರಿಂದ 29ರವರೆಗೆ ರಜೆ

ಹೈಕೋರ್ಟ್‍ಗೆ ಬೇಸಿಗೆ ಕಾಲದ ರಜೆ ಆರಂಭವಾಗಿದ್ದು ಮೇ 4ರಿಂದ ಮೇ 29ರ ವರೆಗೆ ಕೋರ್ಟ್ ಕಾರ್ಯನಿರ್ವಹಿಸುವುದಿಲ್ಲ. ತುರ್ತು ಅರ್ಜಿ...

ಹೈಕೋರ್ಟ್ ಗೆ 4ರಿಂದ 29ರವರೆಗೆ ರಜೆ
ಹೈಕೋರ್ಟ್
Published On :

ಬೆಂಗಳೂರು: ಹೈಕೋರ್ಟ್‍ಗೆ ಬೇಸಿಗೆ ಕಾಲದ ರಜೆ ಆರಂಭವಾಗಿದ್ದು ಮೇ 4ರಿಂದ ಮೇ 29ರ ವರೆಗೆ ಕೋರ್ಟ್ ಕಾರ್ಯನಿರ್ವಹಿಸುವುದಿಲ್ಲ. ತುರ್ತು ಅರ್ಜಿ ಹೊರತುಪಡಿಸಿ ಈ ಸಮಯದಲ್ಲಿ ಯಾವುದೇ ರೀತಿ ರಿಟ್ ಅರ್ಜಿ, ಮೇಲ್ಮನವಿ, ವಕಾಲತ್ತು ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ಕ್ರಿಮಿನಲ್ ಪ್ರಕರಣದ ಅರ್ಜಿ ಮತ್ತು ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ಮತ್ತು ತುರ್ತು ಅರ್ಜಿ ವಿಚಾರಣೆ ಮಾತ್ರ ರಜೆ ಕಾಲದ ಪೀಠ ಕೈಗೆತ್ತಿಕೊಳ್ಳುತ್ತದೆ. ರಜೆ ಕಾಲದಲ್ಲಿ ಒಟ್ಟು ಎಂಟು ದಿನಗಳ ಕಾಲ ಕಲಾಪ ನಡೆಯಲಿದ್ದು, ಬೆಳಿಗ್ಗೆ 10.30 ರಿಂದ ನ್ಯಾಯಪೀಠ ಕಾರ್ಯ ನಿರ್ವಹಿಸುತ್ತದೆ.

ಸರ್ಕಾರಿ ರಜೆ ಮತ್ತು ಶನಿವಾರ ಹೊರತುಪಡಿಸಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಚೇರಿಯಲ್ಲಿ ಬೆಳಗ್ಗೆ 10.30 ರಿಂದ 12.30ರವರೆಗೆ ಸ್ವೀಕರಿಸಲಾಗುತ್ತದೆ. ರಜೆ ಕಾಲದ ಪೀಠ ಕಾರ್ಯ ನಿರ್ವಹಿಸುವ ದಿನಗಳಲ್ಲಿ ಬೆ.10.30 ರಿಂದ ಮಧ್ಯಾಹ್ನ 3 ಗಂಟೆವರೆಗೂ ಕಚೇರಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಸ್ವೀಕರಿಸಲಾಗುವುದು.

ಕಲಬುರಗಿ ಮತ್ತು ಧಾರವಾಡದ ಪೀಠದಲ್ಲಿ ರಜೆ ಕಾಲದ ಪೀಠ ಕಾರ್ಯನಿರ್ವಹಿಸುವುದಿಲ್ಲ. ತುರ್ತು ಪ್ರಕರಣ ಗಳನ್ನು ಬೆಂಗಳೂರು ಕೋರ್ಟ್‍ನಲ್ಲಿ ದಾಖಲಿಸಬೇಕು. ಈ ಹಿಂದೆಯೇ ದಾಖಲಾದ ಪ್ರಕರಣ ತುರ್ತು ಎಂದೆನಿಸಿದರೆ ಬೆಂಗಳೂರು ಕೋರ್ಟ್‍ಗೆ ವರ್ಗಾಯಿಸಬಹುದು ಎಂದು ಹೈಕೋರ್ಟ್ ರಿಜಿಸ್ಟ್ರಾರ್ (ನ್ಯಾಯಾಂಗ) ಪ್ರಕಟಣೆ ಹೊರಡಿಸಿದ್ದಾರೆ.

ರಜೆ ಕಾಲದ ಏಕಸದಸ್ಯ ಪೀಠ

-ಮೇ 5 ಮತ್ತು ಮೇ 7- ನ್ಯಾ.ಆನಂದ ಭೈರಾರೆಡ್ಡಿ, ನ್ಯಾ.ಬಿ.ಮನೋಹರ್, ನ್ಯಾ.ಜಿ.ನರೇಂದರ್ ಅವರ ಪೀಠ ಕಾರ್ಯನಿರ್ವಹಿಸುತ್ತದೆ.
-ಮೇ 12 ಮತ್ತು ಮೇ 14- ನ್ಯಾ.ಆನಂದ ಭೈರಾರೆಡ್ಡಿ, ನ್ಯಾ.ಕೆ.ಎನ್.ಫಣೀಂದ್ರ, ನ್ಯಾ.ಜಿ.ನರೇಂದರ್ ಅವರ ಪೀಠ ಕಾರ್ಯ ನಿರ್ವಹಿಸುತ್ತದೆ.
-ಮೇ 19 ಮತ್ತು ಮೇ 21-ನ್ಯಾ.ವೇಣುಗೋಪಾಲ ಗೌಡ, ನ್ಯಾ.ಅರವಿಂದ ಕುಮಾರ್ ಮತ್ತು ನ್ಯಾ.ಬಿ. ವೀರಪ್ಪ ಅವರ ಪೀಠ ಕಾರ್ಯನಿರ್ವಹಿಸುತ್ತದೆ.
-ಮೇ 26- ನ್ಯಾ.ಆನಂದ ಭೈರಾರೆಡ್ಡಿ, ನ್ಯಾ.ಬಿ. ವೀರಪ್ಪ ಮತ್ತು ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರ ಪೀಠ ಕಾರ್ಯನಿರ್ವಹಿಸುತ್ತದೆ.
-ಮೇ 28-ನ್ಯಾ.ಎಚ್.ಬಿಳ್ಳಪ್ಪ, ನ್ಯಾ.ಬಿ.ವೀರಪ್ಪ ಮತ್ತು ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಅವರ ಪೀಠ ಕಾರ್ಯನಿರ್ವಹಿಸುತ್ತದೆ.
-ರಜೆ ಕಾಲದ ವಿಭಾಗೀಯ ಪೀಠ
-ಮೇ 5 ಮತ್ತು ಮೇ 7- ನ್ಯಾ.ಆನಂದ ಭೈರಾರೆಡ್ಡಿ ಮತ್ತು ನ್ಯಾ.ಜಿ.ನರೇಂದರ್ ಅವರ ವಿಭಾಗೀಯ ಪೀಠ ಕಾರ್ಯನಿರ್ವಹಿಸುತ್ತದೆ.
-ಮೇ 12 ಮತ್ತು ಮೇ 14- ನ್ಯಾ.ಆನಂದ ಭೈರಾರೆಡ್ಡಿ ಮತ್ತು ನ್ಯಾ.ಜಿ.ನರೇಂದರ್ ಅವರ ವಿಭಾಗೀಯ ಪೀಠ ಕಾರ್ಯ
ನಿರ್ವಹಿಸುತ್ತದೆ.
-ಮೇ 19 ಮತ್ತು ಮೇ 21-ನ್ಯಾ.ವೇಣುಗೋಪಾಲ ಗೌಡ ಮತ್ತು ನ್ಯಾ.ಬಿ.ವೀರಪ್ಪ ಅವರ ವಿಭಾಗೀಯ ಪೀಠ ಕಾರ್ಯನಿರ್ವಹಿಸುತ್ತದೆ.
-ಮೇ 26 - ನ್ಯಾ.ಆನಂದ ಭೈರಾರೆಡ್ಡಿ ಮತ್ತು ನ್ಯಾ.ಬಿ.ವೀರಪ್ಪ ಅವರ ವಿಭಾಗೀಯ ಪೀಠ ಕಾರ್ಯನಿರ್ವಹಿಸುತ್ತದೆ.
-ಮೇ 28 -ನ್ಯಾ.ಎಚ್.ಬಿಳ್ಳಪ್ಪ ಮತ್ತು ನ್ಯಾ.ಬಿ.ವೀರಪ್ಪ ಅವರ ವಿಭಾಗೀಯ ಪೀಠ ಕಾರ್ಯ ನಿರ್ವಹಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.