ಲೋಕಾಯುಕ್ತ ಬಲೆಗೆ ಎಂಜಿನಿಯರ್‍ಗಳು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಮಂಜೂರಾಗಿದ್ದ ಸೈಟ್ ಅಳತೆ ಮಾಡಲು ರು.7 ಲಕ್ಷ ಲಂಚ ಪಡೆದ ಬಿಡಿಎ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಹಾಗೂ ಕಿರಿಯ ಎಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ...

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಮಂಜೂರಾಗಿದ್ದ ಸೈಟ್ ಅಳತೆ ಮಾಡಲು ರು.7 ಲಕ್ಷ ಲಂಚ ಪಡೆದ ಬಿಡಿಎ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಹಾಗೂ ಕಿರಿಯ ಎಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಆರ್‍ಟಿ ನಗರದಲ್ಲಿರುವ ಬಿಡಿಎ ಉತ್ತರ ಕಚೇರಿ ಎಇಇ ರುದ್ರೇಗೌಡರ್ ಹಾಗೂ ಕಿರಿಯ ಎಂಜಿನಿಯರ್ ಅದನಿ ಬಲೆಗೆ ಬಿದ್ದವರು. ಹೆಸರು ಹೇಳಲಿಚ್ಛಿಸದ ದೂರುದಾರರೊಬ್ಬರಿಗೆ ಸೇರಿದ ಬಾಣಸವಾಡಿ ಸಮೀಪದಲ್ಲಿದ್ದ 5 ಗುಂಟೆ ಜಮೀನನ್ನು ಬಿಡಿಎ ವಶಪಡಿಸಿಕೊಂಡಿತ್ತು. ಅದರ ಬದಲಿಗೆ ಎಚ್‍ಬಿಆರ್ 1ನೇ ಹಂತದಲ್ಲಿ 60/40 ಅಳತೆಯ ಸೈಟ್ ಮಂಜೂರು ಮಾಡಿತ್ತು. ನಿಯಮದಂತೆ ಎಂಜಿನಿಯರ್‍ಗಳು ಮಂಜೂರು ಮಾಡಲಾಗಿರುವ ಸೈಟ್ ಅಳತೆ ಮಾಡಿ ಈ ಬಗ್ಗೆ ಬಿಡಿಎ ಆಯುಕ್ತರಿಗೆ ವರದಿ ಸಲ್ಲಿಸಬೇಕು. ಆದರೆ, ಈ ಪ್ರಕ್ರಿಯೆ ಪೂರ್ಣಗೊಳಿಸಲು ಎಂಜಿನಿಯರ್‍ಗಳು ರು.8 ಲಕ್ಷ ಲಂಚ ಕೇಳಿದ್ದರು.
ಲಂಚದ ಹಣ ತಮಗೆ ಮಾತ್ರವಲ್ಲದೇ ಬೇರೆ ಬೇರೆ ಅಧಿಕಾರಿಗಳಿಗೂ ಹಂಚಬೇಕಾಗುತ್ತದೆ. ತಾನು ಬರೀ ರು.4 ಲಕ್ಷ ಮಾತ್ರ ಪಡೆಯುತ್ತೇನೆ. ಉಳಿದ ನಾಲ್ಕು ಲಕ್ಷ ಹಣವನ್ನು ಅಳತೆ ಮಾಡುವ ಹಲವು ಸಹೋದ್ಯೋಗಿಗಳಿಗೆ ನೀಡುತ್ತೇನೆ ಎಂದು ಎಇಇ ರುದ್ರೇಗೌಡರ್ ದೂರುದಾರರಿಗೆ ಹೇಳಿದ್ದ. ಲಂಚ ನೀಡಲು ಇಚ್ಚಿಸದ ದೂರುದಾರರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ಸಂಘಟಿಸಲಾಗಿತ್ತು. ಮೂವರು ಆರೋಪಿಗಳನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


