ಯೋಗ್ಯತೆ ಇಲ್ಲದ ಮೇಲೆ ಮಂತ್ರಿ ಏಕೆ ಆಗ್ತೀರಿ? ಕಿತ್ತಾಕ್ರೀ ಅವ್ರನ್ನ...
ಯೋಗ್ಯತೆ ಇಲ್ಲದ ಮೇಲೆ ಮಂತ್ರಿ ಏಕೆ ಆಗುತ್ತೀರಿ. ಗೂಟದ ಕಾರು, ಸಿಬ್ಬಂದಿ, ಕಚೇರಿ ಏಕೆ ಬೇಕು?-- ಸದನಕ್ಕೆ ಹಾಜರಾಗದ ಸಚಿವರ ಬಗ್ಗೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ ರೀತಿ...

ವಿಧಾನಪರಿಷತ್ತು: ಯೋಗ್ಯತೆ ಇಲ್ಲದ ಮೇಲೆ ಮಂತ್ರಿ ಏಕೆ ಆಗುತ್ತೀರಿ. ಗೂಟದ ಕಾರು, ಸಿಬ್ಬಂದಿ, ಕಚೇರಿ ಏಕೆ ಬೇಕು?-- ಸದನಕ್ಕೆ ಹಾಜರಾಗದ ಸಚಿವರ ಬಗ್ಗೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ ರೀತಿ.
ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಈಶ್ವರಪ್ಪ, ಸಚಿವರಿಗೆ ಸದನಕ್ಕೆ ಬರುವುದಕ್ಕೆ ಆಸಕ್ತಿ ಇಲ್ಲ. ಅಂಥವರಿಗೆ ಸಚಿವರಾಗಲು ಯೋಗ್ಯತೆಯೂ ಇಲ್ಲ ಎಂದು ರೇಗಿದರು. ಆಗ ಮುಖ್ಯ ಸಚೇತಕ ಆರ್.ವಿ.ವೆಂಕಟೇಶ್, ಕೆಲವು ಸಚಿವರು ಅನ ಪಡೆದಿದ್ದಾರೆ. ತಡವಾಗಿ ಬರುತ್ತಾರೆ ಎಂದು ಹೇಳಿದರು.
ಇದನ್ನು ಒಪ್ಪದ ಈಶ್ವರಪ್ಪ ಸರ್ಕಾರದದಲ್ಲಿ ಸಾಕಷ್ಟು ಅಸರ್ಮಥ ಸಚಿವರಿದ್ದಾರೆ. ಅಂಥವರನ್ನು ಏಕೆ ಇಟ್ಟುಕೊಂಡಿದ್ದೀರಿ. ದಯವಿಟ್ಟು ತೆಗೆದು ಹಾಕಿ. ಸಮರ್ಥರಿಗೆ ಮಂತ್ರಿ ಸ್ಥಾನ ನೀಡಿ. ಅಸಮರ್ಥರನ್ನು ಕೂಡಲೇ ಸಂಪುಟದಿಂದ ಕೈಬಿಡಿ ಎಂದು ಆಗ್ರಹಿಸಿದರು. ಇದಕ್ಕೆ ಸಭಾನಾಯಕ ಎಸ್.ಆರ್. ಪಾಟೀಲ್ ಹೊರತುಪಡಿಸಿ ಮತ್ಯಾರೂ ತುಟಿ ಬಿಚ್ಚಲು ಯತ್ನಿಸಲಿಲ್ಲ. ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಕ್ಸಮರ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


