ಜಿಲ್ಲಾ ಸುದ್ದಿ

3ನೇ ದಿನದ ಕಾರ್ಯದಲ್ಲಿ ಅಧಿಕಾರಿಗಳೂ ಭಾಗಿ

ಡಿ.ಕೆ.ರವಿ ಅವರ ಅಂತ್ಯಕ್ರಿಯೆಯ ಮೂರನೇ ದಿನದ ವಿಧಿವಿಧಾನಗಳನ್ನು ಹುಟ್ಟೂರು ದೊಡ್ಡ ಕೊಪ್ಪಲಿನಲ್ಲಿ ಕುಟುಂಬಸ್ಥರು ಗುರುವಾರ ನೆರವೇರಿಸಿದರು.ಸೋದರ ರಮೇಶ, ತಾಯಿ ಗೌರಮ್ಮ ಹಾಲುತುಪ್ಪ ಹಾಕುವ ಕಾರ್ಯನೆರವೇರಿಸಿದರು...

3ನೇ ದಿನದ ಕಾರ್ಯದಲ್ಲಿ ಅಧಿಕಾರಿಗಳೂ ಭಾಗಿ
ಡಿ.ಕೆ.ರವಿ ಅವರ ಅಂತ್ಯಕ್ರಿಯೆಯ ಮೂರನೇ ದಿನದ ವಿಧಿವಿಧಾನ
Published On :

ಕುಣಿಗಲ್: ಡಿ.ಕೆ.ರವಿ ಅವರ ಅಂತ್ಯಕ್ರಿಯೆಯ ಮೂರನೇ ದಿನದ ವಿಧಿವಿಧಾನಗಳನ್ನು ಹುಟ್ಟೂರು ದೊಡ್ಡ ಕೊಪ್ಪಲಿನಲ್ಲಿ ಕುಟುಂಬಸ್ಥರು ಗುರುವಾರ ನೆರವೇರಿಸಿದರು.ಸೋದರ ರಮೇಶ, ತಾಯಿ ಗೌರಮ್ಮ ಹಾಲುತುಪ್ಪ ಹಾಕುವ ಕಾರ್ಯನೆರವೇರಿಸಿದರು.

ಗ್ರಾಮಸ್ಥರು, ಹತ್ತಿರದ ಸಂಬಂಧಿಗಳು, ನೆಂಟರು ಮೊದಲಿಗೆ ಪೂಜೆಸಲ್ಲಿಸಿದರು. ನಂತರ ಕೋಲಾರ, ರಾಮನಗರ, ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ್ಧ ಅಭಿಮಾನಿಗಳೂ
ಸಮಾಧಿಗೆ ಗೌರವ ಸಲ್ಲಿಸಿದರು. ಅವರಲ್ಲಿ ಐಎಎಸ್ ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಅಭಿಮಾನಿಗಳೂ  ಇದ್ದರು. ಮಧ್ಯಾಹ್ನ 12.30ರ ವೇಳೆಗೆ ಬೆಂಗಳೂರಿನಿಂದ ಆಗಮಿಸಿದ ಪತ್ನಿ ಕುಸುಮಾ ಹಾಗೂ ಅವರ ಕುಟುಂಬ ವರ್ಗದವರೂ ಪೂಜೆ ಸಲ್ಲಿಸಿದರು.

ರಾಜ್ಯಪಾಲರ ಭೇಟಿ: ರವಿ ಸೋದರ ರಮೇಶ್ ಮಾತನಾಡಿ, ಕುಟುಂಬದ ಸದಸ್ಯರೆಲ್ಲರೂ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ರಾಜ್ಯಪಾಲರನ್ನು ಭೇಟಿ ಮಾಡಲು ಶುಕ್ರವಾರ ತೆರಳುತ್ತೇವೆ ಎಂದು ತಿಳಿಸಿದರು. ರವಿಯವರ ಚಿರಶಾಂತಿ ಸ್ಥಳದಲ್ಲಿ ಉದ್ಯಾನ ನಿರ್ಮಿಸುವ ಜತೆಗೆ ಅವರ ಸಾಧನೆ ಹಾಗೂ ಅವರು ಕೈಗೊಂಡ ಜನಪರ ಕಾರ್ಯಗಳನ್ನು ವಿವರಿಸುವ, ಒಬ್ಬ ಮಾದರಿ ಅಧಿಕಾರಿ ಹೇಗಿರಬೇಕೆಂಬ ರೀತಿಯಲ್ಲಿ ಇತರರಿಗೆ ಮಾರ್ಗದರ್ಶನವಾಗುವ ರೀತಿಯಲ್ಲಿ ದೇವಾಲಯ ನಿರ್ಮಿಸಲಾಗುವುದು ಎಂದು ರವಿ ಸಹಪಾಠಿ ಮಂಚಯ್ಯ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.