ಅಪ್ಪ ಅಮ್ಮನ ದುಡಿಮೆಯೇ ಚಿನ್ನ
ಹೆತ್ತವರ ಕಣ್ಣಲ್ಲಿ ಚಿನ್ನದ ಹೊಳಪು. ಭೂಮಿಯಲ್ಲಿ ತಾವು ದುಡಿದಿದ್ದನ್ನು ಅವರ ಕಂದ ಅಕ್ಷರ ರೂಪ ನೀಡಿತ್ತು. ಅದಕ್ಕೆ ಚಿನ್ನದ ಗರಿ. ನಮ್ಮ...

ಬೆಂಗಳೂರು: ಹೆತ್ತವರ ಕಣ್ಣಲ್ಲಿ ಚಿನ್ನದ ಹೊಳಪು. ಭೂಮಿಯಲ್ಲಿ ತಾವು ದುಡಿದಿದ್ದನ್ನು ಅವರ ಕಂದ ಅಕ್ಷರ ರೂಪ ನೀಡಿತ್ತು. ಅದಕ್ಕೆ ಚಿನ್ನದ ಗರಿ. ನಮ್ಮ ತಿಳುವಳಿಕೆಯೇ ಇಲ್ಲಿ
ಸಾಕಾರವಾಯಿತಲ್ಲಾ ಎಂಬ ಸಾಕ್ಷಾತ್ಕಾರ ಭಾವ. ಮಗಳ ಮಾತುಗಳಿಗೆ ಎದೆಯ ತುಂಬಾ ಸಂತಸ. ಇಂತಹ ನೆಮ್ಮದಿ ತಂದಿದ್ದು ಎನ್.ಗೀತಾ. ಸ್ನಾತಕ ಕೃಷಿ ಪದವಿಯಲ್ಲಿ ಬರೋಬ್ಬರಿ 13 ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡ `ಚಿನ್ನದ ಹುಡುಗಿ' ದೊಡ್ಡಬಳ್ಳಾಪುರ ತಾಲೂಕು ದೊಡ್ಡಹೆಜ್ಜಾಜಿ ಗ್ರಾಮದ ಎನ್. ಗೀತಾ, ಬೆಂಗಳೂರು ಕೃವಿವಿ ಘಟಿಕೋತ್ಸವದಲ್ಲಿ ಪದಕ ಸ್ವೀಕರಿಸಿದಾಗ ತಂದೆತಾಯಿಗಳ ಸಂತಸಕ್ಕೆ ಎಣೆಯಿರಲಿಲ್ಲ. `ಅಪ್ಪ-ಅಮ್ಮ ಕೃಷಿಕರಾಗಿರದಿದ್ದರೆ, ಬಹುಶಃ ನಾನು ಇಷ್ಟೊಂದು ಪದಕತೆಗೆದುಕೊಳ್ಳುತ್ತಿರಲಿಲ್ಲ. ನಿತ್ಯ ಅವರು ಹೊಲದಲಿದ್ದು ದುಡಿಯುವ ಪ್ರೇರಣೆಯೇ ಕೃಷಿ ಪದವಿಯಲ್ಲಿ ನನಗೆ ಇಷ್ಟೊಂದು ಪದಕ ತೆಗೆದುಕೊಳ್ಳಲು ಕಾರಣ...' ಎಂದು ಮಗಳು ಹೇಳಿದೊಡನೆ ಹೆತ್ತವರ ಕಣ್ಣಿನಲ್ಲಿ ಮಿಂಚು.
ಶನಿವಾರ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ ನಡೆದ ವಿಶ್ವವಿದಾಲಯದ 49ನೇ ಘಟಿಕೋತ್ಸವ ಇಂತಹ ಹೃದಯಸ್ಪರ್ಶಿ ದೃಶ್ಯಗಳಿಗೆ ಸಾಕ್ಷಿಯಾಯಿತು. ವಿಶೇಷವಾಗಿ
ಬಿಎಸ್ಸಿ ಕೃಷಿ ಪದವಿಯಲ್ಲಿ ದೊಡ್ಡಬಳ್ಳಾಪುರದ ಗೀತಾ 13 ಪದಕ ಪಡೆದು `ಚಿನ್ನದ ಹುಡುಗಿ'ಯಾದರು.
ಆಂಧ್ರದ ಗುಂಟೂರು ಜಿಲ್ಲೆಯ ಕುಂದೂರು ಭರತ್ 7, ಬಾಗೇಪಲ್ಲಿಯ ಆರತಿ 5 ಹಾಗೂ ಕೀರ್ತಿ 4 ಪದಕಗಳಿಗೆ ಖುಷಿ ಪಟ್ಟರು. ಎಂಎಸ್ಸಿ ಕೃಷಿ ಪದವಿಯಲ್ಲಿ ಗುಂಜನ್ ಭಂಡಾರಿ 5 ಪದಕಗಳನ್ನು ಪಡೆದು ನಗು ಬೀರಿದರು. ಎಂಎಸ್ಸಿ ಕೃಷಿ ವಿಸ್ತರಣಾ ವಿಭಾಗದ ವಿದ್ಯಾರ್ಥಿ ಮಂಡ್ಯದ ಸುರೇಶ್ 4 ಪದಕಗಳನ್ನು ಮುಡಿಗೇರಿಸಿಕೊಂಡರು. ಹಾಗೆಯೇ ಮಧು ಟಿ.ಎನ್.ಲೋಕೇಶ್ ಕುಮಾರ್.ಬಿ.ಎಂ. ತಲಾ ಮೂರು ಪದಕ ಪಡೆದರು. ಪಿಎಚ್.ಡಿ ವಿಭಾಗದಲ್ಲಿ ಕೆ.ಎಸ್. ಕಾರ್ತಿಕ್ ಮೂರು ಪದಕ ಪಡೆದು ಶ್ರೇಷ್ಠ ವಿದ್ಯಾರ್ಥಿಯಾಗಿ ಮಿಂಚಿದರು. ಉಳಿದಂತೆ, ಈ ವಿಭಾಗದಲ್ಲಿ ಶಿಲ್ಪಾ 2 ಪದಕ ಪಡೆದರು.
574 ಸ್ನಾತಕ , 204 ಸ್ನಾತಕೋತ್ತರ, 67 ಡಾಕ್ಟೊರಲ್ ಮತ್ತು 53 ಡಿಪ್ಲೋ ಮಾ ಪದವಿಗಳನ್ನು ಪ್ರದಾನ ಮಾಡಲಾಯಿತು. ಒಟ್ಟು 119 ಚಿನ್ನದ ಪದಕ ನೀಡಲಾಯಿತು. ವಿವಿ ಕುಲಾ„ಪತಿ, ರಾಜ್ಯಪಾಲ ವಜುಭಾಯ್ ಆರ್. ವಾಲಾ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಚಿನ್ನದ ಪದಕ ಪ್ರದಾನ ಮಾಡಿದರು.
ಅಪ್ಪ-ಅಮ್ಮ ಕೃಷಿಕರು. ನನ್ನ ಓದಿಗೆ ಅವರೇ ಕಾರಣ. ಅಕ್ಕನ ಸಹಾಯವೂ ಇದೆ. ಜತೆಗೆ ಅಧ್ಯಾಪಕರನ್ನು ಮರೆಯಲಾರೆ. ಕೃಷಿ ವಿಜ್ಞಾನಿಯಾಗುವ ಆಸೆ.
-ಗೀತಾ .ಎನ್
ಎಂಎಸ್ಸಿ ಯಲ್ಲಿ 13 ಪದಕ ಪಡೆದ ವಿದ್ಯಾರ್ಥಿನಿ
ಎಂಬಿಬಿಎಸ್ ಮಾಡಬೇಕು ಅಂತ ಅದ್ಕೊಂಡಿದ್ದೆ.ಆದ್ರೆ ಸೀಟು ಸಿಗಲಿಲ್ಲ. ಎಂಎಸ್ಸಿಗೆ ಇಲ್ಲಿ ಸೀಟು ಸಿಕ್ಕಿತು. ಪರಿಶ್ರಮದಿಂದ ಓದುತ್ತಾ ಬಂದೆ. ಆ ಪ್ರಯತ್ನಕ್ಕೆ ಫಲ ಸಿಕ್ಕಿದೆ.
- ಕುಂದೂರು ಭರತ್
ಎಂ.ಎಸ್ಸಿಯಲ್ಲಿ 7 ಪದಕ ಪಡೆದ ವಿದ್ಯಾರ್ಥಿ
ಕೃಷಿಯಲ್ಲಿ ಆಸಕ್ತಿ ಇರುವುದರಿಂದಲೇ ಕೃಷಿ ಪದವಿ ಆಯ್ಕೆ ಮಾ ಡಿಕೊಂಡಿದ್ದೆ. ಕೃಷಿ ಲಾಭದಾಯಕ ಎಂಬುದನ್ನು ರೈತ ರಿಗೆ ಮನವರಿಕೆ ಮಾಡುವ ಆಸೆ.
-ಡಿ.ಕೆ.ಸುರೇಶ್
ಎಂಎಸ್ಸಿಯಲ್ಲಿ 4 ಪದಕ ಪಡೆದ ವಿದ್ಯಾರ್ಥಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


