ಮಾರ್ಟರ್ ಬಾಂಬ್ ಸ್ಫೋಟಿಸಿ ಆತಂಕ ದೂರ ಮಾಡಿದ ಸಿಆರ್‌ಪಿಎಫ್ ಸಿಬ್ಬಂದಿ
ಬೆಳಗಾವಿಯ ಹೊರವಲಯದಲ್ಲಿರುವ ಸೋನೋಳಿ ಗ್ರಾಮದ ಹೊಲವೊಂದರಲ್ಲಿ ಪತ್ತೆಯಾಗಿದ್ದ ಸಜೀವ ಮಾರ್ಟರ್ ಬಾಂಬ್‌ನ್ನು ಸಿಆರ್‌ಪಿಎಫ್ ಸಿಬ್ಬಂದಿ...

ಬೆಳಗಾವಿ: ಬೆಳಗಾವಿಯ ಹೊರವಲಯದಲ್ಲಿರುವ ಸೋನೋಳಿ ಗ್ರಾಮದ ಹೊಲವೊಂದರಲ್ಲಿ ಪತ್ತೆಯಾಗಿದ್ದ ಸಜೀವ ಮಾರ್ಟರ್ ಬಾಂಬ್‌ನ್ನು ಸಿಆರ್‌ಪಿಎಫ್ ಸಿಬ್ಬಂದಿ ಸ್ಪೋಟಗೊಳಿಸಿ, ಗ್ರಾಮಸ್ಥರಲ್ಲಿ ಮನೆ ಮಾಡಿದ್ದ ಆತಂಕವನ್ನು ದೂರ ಮಾಡಿದ್ದಾರೆ.
ಮಾರ್ಟರ್ ಬಾಂಬ್ ನಿಷ್ಕ್ರಿಯಗೊಳಿಸುವ ತಂತ್ರಜ್ಞಾನ ಲಭ್ಯವಿಲ್ಲದ ಕಾರಣ ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಬೆಳಗಾವಿಗೆ ಬರಬೇಕಿತ್ತು. ಆದರೆ ಬೆಂಗಳೂರಿನಿಂದ ಬೆಳಗಾವಿ ಬಾಂಬ್ ನಿಷ್ಕ್ರಿಯ ದಳ ತಲುಪುದು ವಿಳಂಬವಾಗುವುದರಿಂದ ಮಾರ್ಟರ್ ಬಾಂಬ್ ಸ್ಫೋಟಗೊಳ್ಳುವ ಆತಂಕವಿತ್ತು.
ಇದರಿಂದಾಗಿ ಕಾರ್ಯಾಚರಣೆಯನ್ನು ಆರಂಭಿಸಿದ ಸಿಆರ್‌ಪಿಎಫ್ ಸಿಬ್ಬಂದಿ ಬ್ಯಾಟರಿ ಬಾಂಬ್ ಬಳಸಿ ಮಾರ್ಟರ್‌ನ್ನು ಸ್ಫೋಟಿಸಿದ್ದಾರೆ. ಆ ಮೂಲಕ ಸ್ಥಳೀಯರಲ್ಲಿ ಆವರಿಸಿದ್ದ ಆತಂಕ ದೂರ ಮಾಡಿದ್ದಾರೆ.
ಅಶೋಕ ಪಾಟೀಲ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಸಜೀವ ಮಾರ್ಟರ್ ಬಾಂಬ್ ಪತ್ತೆಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


