ಎಸ್.ಎಲ್ ಭೈರಪ್ಪಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋ ಗೌರವ
ಈ ಹಿಂದೆ ರಾಷ್ಟ್ರೀಯ ಫ್ರೊಫೆಸರ್ ಸ್ಥಾನ ಗಳಿಸಿದ್ದ ಕನ್ನಡದ ಖ್ಯಾತ ಕಾದಂಬರಿಕಾರ ಎಸ್. ಎಲ್ ಭೈರಪ್ಪನವರಿಗೆ ಮತ್ತೊಂದು ಗೌರವದ ಸುದ್ದಿ.

ಬೆಂಗಳೂರು: ಈ ಹಿಂದೆ ರಾಷ್ಟ್ರೀಯ ಫ್ರೊಫೆಸರ್ ಸ್ಥಾನ ಗಳಿಸಿದ್ದ ಕನ್ನಡದ ಖ್ಯಾತ ಕಾದಂಬರಿಕಾರ ಎಸ್. ಎಲ್ ಭೈರಪ್ಪನವರಿಗೆ ಮತ್ತೊಂದು ಗೌರವದ ಸುದ್ದಿ. ಕೇಂದ್ರ ಸಾಹಿತ್ಯ ಅಕಾಡೆಮಿ ಭೈರಪ್ಪ ಅವರಿಗೆ ಫೆಲೋ ಸ್ಥಾನ ಮಾನ ನೀಡಿದೆ.
ಸೋಮವಾರ ಸಾಹಿತ್ಯ ಅಕಾಡೆಮಿಯಲ್ಲಿ ನಡೆದ ಜನರಲ್ ಕೌನ್ಸಿಲ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಭೈರಪ್ಪನವರ ಜತೆ ತೆಲುಗಿನ ಖ್ಯಾತ ಕವಿ ಸಿ. ನಾರಾಯಣ ರೆಡ್ಡಿ ಅವರೂ ಈ ಫೆಲೋ ಗೌರವಕ್ಕೆ ಭಾಜನ ರಾಗಿದ್ದಾರೆ. ಈ ಫೆಲೋ ಗೌರವ ಆಜೀವ ಪರ್ಯಂತವಾಗಿದ್ದು, ಮಾಸಿಕ ರು.1 ಲಕ್ಷವನ್ನು ಗೌರವಧನವಾಗಿ ನೀಡಲಾಗುತ್ತದೆ.
ಹಿರಿಯ ಪತ್ರಕರ್ತ ಹಾಗೂ ಕಸ್ತೂರಿ ಮಾಸ ಪತ್ರಿಕೆ ಸಂಪಾದಕ ಜಿ.ಎನ್. ರಂಗನಾಥ್ ರಾವ್ ರಿಗೆ 2014ನೇ ಸಾಲಿನ ಅನುವಾದಿತ ಕೃತಿಗಳಿಗೆ ನೀಡಲಾಗುವ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೋಹನದಾಸ ಒಂದು ಸತ್ಯ ಕಥೆ' ಅನುವಾದಿತ ಕೃತಿಗೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ರು. 50 ಸಾವಿರ ಹಾಗೂ ತಾಮ್ರದ ಫಲಕ ಒಳಗೊಂಡಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


