ಜಿಲ್ಲಾ ಸುದ್ದಿ

ವಿವಿಯಲ್ಲಿ ನೇಮಕ ವಿವಾದ

ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸ್ಥಾನಕ್ಕೆ ಸೇವಾ ಹಿರಿತನ ಪರಿಗಣಿಸದೆ, ಈಗಾಗಲೇ ಒಂದು ಬಾರಿ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ . ಎಸ್.ಆರ್ ...

ವಿವಿಯಲ್ಲಿ ನೇಮಕ ವಿವಾದ
ಬೆಂಗಳೂರು ವಿವಿ
Published On :

ಬೆಂಗಳೂರು: ಸಸ್ಯಶಾಸ್ತ್ರ  ವಿಭಾಗದ ಮುಖ್ಯಸ್ಥ ಸ್ಥಾನಕ್ಕೆ ಸೇವಾ ಹಿರಿತನ ಪರಿಗಣಿಸದೆ, ಈಗಾಗಲೇ ಒಂದು ಬಾರಿ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ . ಎಸ್.ಆರ್ ಅಂಬಿಕಾ
ಅವರನ್ನು ಮುಖ್ಯಸ್ಥರನ್ನಾಗಿಸುವ ವಿವಿ ನಿರ್ಣಯ ವಿವಾದ ಸೃಷ್ಟಿಸಿದ್ದು, ಪ್ರಾಧ್ಯಾಪಕ ಡಾ.ಕೆ.ಪಿ. ಶ್ರೀನಾಥ್ ಅವರು ಕುಲಪತಿ ಕಚೇರಿ ಮುಂದೆ ಸೋಮವಾರದಿಂದ ಧರಣಿ
ಕುಳಿತಿದ್ದಾರೆ. ಸೇವಾ ಹಿರಿತನದಲ್ಲಿ ಡಾ. ಕೆ.ಪಿ. ಶ್ರೀನಾಥ್ ಅವರನ್ನು ನೇಮಿಸಬೇಕಿತ್ತು. ಅವರ ನಂತರ ಪ್ರೊ . ರಾಜಣ್ಣ ಅವರಿಗೆಸೇವಾ ಹಿರಿತನವಿದೆ. ಸದ್ಯ ಮುಖ್ಯಸ್ಥರಾಗಿರುವ
ಅನಸೂಯರನ್ನು 2014ರ ಅ.1ರಂದು 3ನೇ ಅವಧಿಗೆ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಹುದ್ದೆಗೆ ಅರ್ಹರಾದ  ಪ್ರೊಫೆಸರ್ಗಿಳಿರುವ ಸಂದರ್ಭದಲ್ಲಿ ಈ
ರೀತಿಯ ನೇಮಕಕ್ಕೆ ಅವಕಾಶವಿಲ್ಲ. ಆ ಸಂದರ್ಭದಲ್ಲೇ ಶ್ರೀನಾಥ್ ಆಕ್ಷೇಪಿಸಿ ವಿವಿಗೆ ಪತ್ರ ಬರೆದಿದ್ದಾಗಿ `ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಅನಸೂಯ ಅವರ ಅವಧಿ  2016ರ ಸೆಪ್ಟೆಂಬರ್ಗೆಸ ಮುಗಿಯುತ್ತದೆ. ಆದರೆ, ಅವರನ್ನು 3ನೇ ಅವಧಿಗೆ ನೇಮಿಸಿರುವುದರಿಂದ ವಿವಿ ಅವರ ಅವ„ ಮೊಟಕುಗೊಳಿಸಿ ಮತ್ತೊಬ್ಬರನ್ನು ನೇಮಿ ಸಲು ಮುಂದಾಗಿದೆ. ಆದರೆ ಈ ಸಂದರ್ಭ ದಲ್ಲೂ ವಿವಿ ಮೊದಲು ನೇಮಕಗೊಂಡವರನ್ನೇ ಮತ್ತೆ ರಡು ವರ್ಷ ನೇಮಿಸಲು ಮುಂದಾಗಿದೆ. ಇದರಿಂದ ಉಳಿದವರಿಗೆ ಅವಕಾಶ ತಪ್ಪುತ್ತಿದೆ ಎನ್ನುವುದು ವಿಭಾಗದಲ್ಲಿರುವ ಆಕಾಂಕ್ಷಿಗಳ ದೂರು. ಇದಲ್ಲದೆ ಅಂಬಿಕಾ ಅವರ ಮೇಲಿರುವ ಆರೋಪಗಳನ್ನು ರಾಮಕೃಷ್ಣ ಆಯೋ ಗ ಎತ್ತಿಹಿಡಿದಿದೆ ಎನ್ನುತ್ತಾರೆ ಶ್ರೀನಾಥ್.
ಆರೋಪಗಳೇನು?: `ವಿಭಾಗದ ಮುಖ್ಯಸ್ಥ ರಾಗಿದ್ದ ಸಂದರ್ಭದಲ್ಲಿ ಸೆಮಿಸ್ಟರ್ನಭ ಪಾಠ ಪೂರೈಸದೆ ಪರೀಕ್ಷೆ ನಡೆಸಲು ಅವಕಾಶ ಕೊಟ್ಟಿ ದ್ದಾರೆ, ವಿದ್ಯಾರ್ಥಿಗಳಿಗೆ
ಆಂತರಿಕ ಅಂಕಗಳನ್ನು ನೀಡಿಲ್ಲ ಎಂದು ವರದಿ ತಿಳಿಸಿದೆ. ಇದರೊಂದಿಗೆ ಮೂಲ ವಿಜ್ಞಾ ನದ ಸಂಶೋಧನಾವ  ಫೆಲೋಷಿಪ್ ನೇಮಕದಲ್ಲಿ ಯುಜಿಸಿ ನಿಯಮ ಗಳನ್ನು
ಗಾಳಿಗೆ ತೂರಿ, ಬೇಕಾದವರನ್ನು ನೇಮಕ ಮಾಡಿದ್ದರೆನ್ನುವ ಆರೋಪವನ್ನು ವರದಿ ಪುಷ್ಟೀಕರಿಸಿದೆ. ಈ ಕುರಿತು ಕೆಲ ಪ್ರಾಧ್ಯಾಪಕರು ಹೈಕೋರ್ಟ್ ಮೆಟ್ಟಿಲೇರಿದಾಗ
ನ್ಯಾಯಾಲಯ ನೇಮಕವನ್ನು ರದ್ದುಗೊಳಿಸುವಂತೆ ಸೂಚಿಸಿತ್ತು ಅದರಂತೆ  ವಿವಿ  ಆದೇಶ ಹಿಂಪಡೆದಿದೆ ಎಂದು ಶ್ರೀನಾಥ್ ಹೇಳುತ್ತಾರೆ. ವಿಭಾಗದ ಮುಖ್ಯಸ್ಥರನ್ನು ಇದುವರೆಗೂ ಸೇವಾ ಹಿರಿತನದ ಮೇಲೆ ನೇಮಿಸಲಾಗತ್ತಿತ್ತು. ಈಗ ಶ್ರೀನಾಥ್ ಅವರು ರಾಜಣ್ಣ ಅವರಿಂತಲೂ ಸೇವಾ ಹಿರಿತನ ಹೊಂದಿದ್ದಾರೆ.
ಆದರೆ, ಈಗ ನನಗೆ ಮತ್ತು ರಾಜಣ್ಣ ಇಬ್ಬರಿಗೂ ಅವಕಾಶ ತಪ್ಪಿಸಿ ಅಂಬಿಕಾರನ್ನು ಮುಖ್ಯಸ್ಥರನ್ನಾಗಿ ಮಾಡಲು ಸಿಂಡಿ ಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳ ಲಾಗಿದೆ. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಮಿತಿ ನೇಮಕ ಮಾಡುವುದಾಗಿ ವಿವಿ ಲಿಖಿತವಾಗಿ ಆಶ್ವಾಸನೆ ನೀಡುವ ತನಕ ಧರಣಿ ಮುಂದುವರಿಯಲಿದೆ ಎಂದು ಅವರು ತಿಳಿಸಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.