ಜಿಲ್ಲಾ ಸುದ್ದಿ

ವಿದೇಶಿ ಮಹಿಳೆಯನ್ನು ಕೆಣಕಿ ಅಮಾನತುಗೊಂಡ ಪೊಲೀಸ್ ಪೇದೆಗಳು

ವಿದೇಶಿ ಮಹಿಳೆಯೊಳಡನೆ ಅಸಭ್ಯವಾಗಿ ವರ್ತಿಸಿರುವ ನಾಲ್ವರು ಪೊಲೀಸ್ ಪೇದೆ ಹಾಗೂ ಇಬ್ಬರು ಹೋಮ್ ಗಾರ್ಡ್‌ಗಳನ್ನು ಸೋಮವಾರ ಅಮಾನತುಗೊಳಿಸಲಾಗಿದೆ...

ವಿದೇಶಿ ಮಹಿಳೆಯನ್ನು ಕೆಣಕಿ ಅಮಾನತುಗೊಂಡ ಪೊಲೀಸ್ ಪೇದೆಗಳು
ಸಾಂದರ್ಭಿಕ ಚಿತ್ರ
Published On :

ಗಂಗಾವತಿ: ವಿದೇಶಿ ಮಹಿಳೆಯೊಳಡನೆ ಅಸಭ್ಯವಾಗಿ ವರ್ತಿಸಿರುವ ನಾಲ್ವರು ಪೊಲೀಸ್ ಪೇದೆ ಹಾಗೂ ಇಬ್ಬರು ಹೋಮ್ ಗಾರ್ಡ್‌ಗಳನ್ನು ಸೋಮವಾರ ಅಮಾನತುಗೊಳಿಸಲಾಗಿದೆ.

ವಿದೇಶಿ ಮಹಿಳೆಯೊಡನೆ ಅಸಭ್ಯವಾಗಿ ವರ್ತಿಸಿದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜಾ ಅವರು ಇಂದು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಂಗಾವತಿ ನಗರ ಠಾಣೆ ಪೇದೆಗಳಾದ ಅಮೃತ್, ರಾಜೇಶ್ ಗೌಳಿ, ಗ್ರಾಮಾಂತರ ಠಾಣೆಯ ಪೇದೆಗಳಾದ ಆದೇಶ್, ರೇವಪ್ಪ ಹಾಗೂ ಹೋಮ್ ಗಾರ್ಡ್ ಗಳಾದ ಶಿವು, ವೆಂಕಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.

ವಿದೇಶಿ ಮಹಿಳೆ ಗಂಗಾವತಿಯಲ್ಲಿರುವ ವಿರೂಪಾಪುರ ಗುಡ್ಡೆಯಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಿದ್ದ ವೇಳೆ ಆಕೆಯೊಂದಿಗೆ ಆ ಎಲ್ಲಾ ಪೇದೆಗಳು ಅಸಭ್ಯವಾಗಿ ವರ್ತಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಮೌಖಿಕ ದೂರು ದಾಖಲಿಸಿದ್ದರು.

ಅಲ್ಲದೆ ಎಸ್ಪಿ ಅವರ ಗಮನಕ್ಕೂ ತಂದಿದ್ದರು. ಪರಿಣಾಮ ಕೂಡಲೇ ಕ್ರಮ ಕೈಗೊಂಡಿರುವ ವರಿಷ್ಠಾಧಿಕಾರಿಗಳು, ಆರೋಪಿ ನೌಕರರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.