ಸೊಸೆಯನ್ನೇ ಬರ್ಬರವಾಗಿ ಕೊಚ್ಚಿ ಕೊಲೆಗೈದ ಮಾವ
ಸೊಸೆಯ ನಡವಳಿಕೆ ಸರಿಯಿಲ್ಲ ಎಂದು ಆರೋಪಿಸಿ ಮಾವನೇ ಸೊಸೆಯನ್ನು ಕೊಚ್ಚಿ ಕೊಲೆಗೈದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ...

ಚಿತ್ರದುರ್ಗ: ಸೊಸೆಯ ನಡವಳಿಕೆ ಸರಿಯಿಲ್ಲ ಎಂದು ಆರೋಪಿಸಿ ಮಾವನೇ ಸೊಸೆಯನ್ನು ಕೊಚ್ಚಿ ಕೊಲೆಗೈದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗದ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಲ್ಲಾಡಿಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದ್ದು, ರಾಜೇಶ್ ಎಂಬುವರ ಪತ್ನಿ ದಿವ್ಯಾ (26) ಕೊಲೆಯಾದ ದುರ್ದೈವಿ. ರಾಜೇಶ್ ಅವರ ತಂದೆ ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ (62) ಎಂಬಾತ ತನ್ನ ಸೊಸೆಯನ್ನು ಕೊಲೆಗೈದಿದ್ದು, ಪ್ರಸ್ತುತ ಆರೋಪಿ ಕೃಷ್ಣಮೂರ್ತಿಯನ್ನು ಹೊಳಲ್ಕೆರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಲತಃ ರಾಜೇಶ್ ರಾಯಚೂರು ಜಿಲ್ಲೆಯ ಲಿಂಗಸಗೂರಿನ ಮೂಲದವರಾಗಿದ್ದು, ವೃತ್ತಿಪರ ಎಂಜಿನಿಯರ್ ಆಗಿದ್ದಾರೆ. ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ರಾಜೇಶ್ ಕೆಲಸ ನಿರ್ವಹಿಸುತ್ತಿದ್ದು, ಕಳೆದ ಆರು ತಿಂಗಳ ಹಿಂದಷ್ಟೇ ದಿವ್ಯಾ ಮತ್ತು ರಾಜೇಶ್ ವಿವಾಹವಾಗಿತ್ತು ಎಂದು ತಿಳಿದುಬಂದಿದೆ.
ದಿವ್ಯ ಮತ್ತು ರಾಜೇಶ್ ಇಬ್ಬರೂ ಬೆಂಗಳೂರಿನಲ್ಲಿ ವಾಸವಿದ್ದು, ಕಳೆದ 15 ದಿನಗಳ ಹಿಂದೆ ದಿವ್ಯಾ ಮತ್ತು ರಾಜೇಶ್ ಮಲ್ಲಾಡಿಹಳ್ಳಿಗೆ ಬಂದಿದ್ದರು. ಇವರು ಬಂದಾಗಿನಿಂದ ರಾಜೇಶನ ತಂದೆ ಕೃಷ್ಣಮೂರ್ತಿ ಸೊಸೆಯೊಂದಿಗೆ ಸುಖಾಸುಮ್ಮನೆ ಖ್ಯಾತೆ ತೆಗೆದು ಜಗಳ ಮಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ನಿನ್ನೆ ಕೂಡ ಕೃಷ್ಣಮೂರ್ತಿ ದಿವ್ಯಾಳೊಂದಿಗೆ ಜಗಳ ಮಾಡಿಕೊಂಡಿದ್ದ.
ನೀನು ನನ್ನ ಮಗನ ಜತೆ ನೀನು ಹೊಂದಿಕೊಂಡು ಹೋಗುವುದಿಲ್ಲ. ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಕೃಷ್ಣಮೂರ್ತಿ ಸೊಸೆ ದಿವ್ಯಾಳಿಗೆ ಬೈದಿದ್ದ. ಇದರಿಂದ ಬೇಸರಗೊಂಡಿದ್ದ ಆಕೆ ಜಗಳ ಮಾಡಿದ್ದಳು. ರಾತ್ರಿ ಕೂಡ ಜಗಳ ಮುಂದುವರಿದು ವಿಕೋಪಕ್ಕೆ ಹೋಗಿದೆ.
ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ಮತ್ತೆ ಜಗಳ ಪ್ರಾರಂಭವಾಗಿ ಮಾವ ಕೃಷ್ಣಮೂರ್ತಿ ಸೊಸೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿಬಿಟ್ಟಿದ್ದಾನೆ. ವಿಷಯ ತಿಳಿದು ಬೆಳಿಗ್ಗೆ ಹೊಳಲ್ಕೆರೆ ಠಾಣೆ ಪಿಎಸ್‌ಐ ಎಚ್.ಎಂ.ರಂಗಸ್ವಾಮಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕೃಷ್ಣಮೂರ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


