ಜನವರಿಗೆ ಪ್ರತ್ಯೇಕ ಫೀಡರ್
ಕೃಷಿ ಪಂಪ್‍ಸೆಟ್ ಬಳಕೆದಾರರು ಮೀಟರ್ ಅಳವಡಿಸಿಕೊಂಡಲ್ಲಿ ಅವರಿಗೆ ನಿರಂತರ ವಿದ್ಯುತ್ ನೀಡಲು 2016ರ ಜನವರಿ ವೇಳೆಗೆ...

ಬೆಂಗಳೂರು: ಕೃಷಿ ಪಂಪ್‍ಸೆಟ್ ಬಳಕೆದಾರರು ಮೀಟರ್ ಅಳವಡಿಸಿಕೊಂಡಲ್ಲಿ ಅವರಿಗೆ ನಿರಂತರ ವಿದ್ಯುತ್ ನೀಡಲು 2016ರ ಜನವರಿ ವೇಳೆಗೆ ಪ್ರತ್ಯೇಕ ಫೀಡರ್ ಮೂಲಕ ವಿದ್ಯುತ್ ನೀಡಲು ಕ್ರಮ ಕೈಗೊಳ್ಳುವಂತೆ ಎಲ್ಲ ಎಸ್ಕಾಂಗಳಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಸೂಚಿಸಿದೆ. ಕೃಷಿ ಚಟುವಟಿಕೆಗೆ ಗ್ರಾಮೀಣ ಪ್ರದೇಶದಲ್ಲಿ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಇದರಿಂದ ಎಷ್ಟು ಪ್ರಮಾಣದ ವಿದ್ಯುತ್ ಬಳಕೆಯಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಕೆಲವು ಕೃಷಿಕರು ತಮಗೆ ನಿರಂತರ ವಿದ್ಯುತ್ ನೀಡಿದಲ್ಲಿ ಮೀಟರ್ ಅಳವಡಿಸಿಕೊಳ್ಳಲಾಗುವುದು ಎಂದು ಆಯೋಗಕ್ಕೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೀಟರ್ ಅಳವಡಿಸಿಕೊಳ್ಳುವವರಿಗೆ ಹಾಗೂ ನಿರಂತರ ಜ್ಯೋತಿ ಯೋಜನೆಗಾಗಿ ಪ್ರತ್ಯೇಕ ಫೀಡರ್ ಗಳನ್ನು ಅಳವಡಿಸುವಂತೆ ಎಸ್ಕಾಂಗಳಿಗೆ ಸೂಚಿಸಲಾಗಿದೆ ಎಂದು ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ತಿಳಿಸಿದರು. ವಿದ್ಯುತ್ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಟರ್ ಅಳವಡಿಸಿಕೊಳ್ಳುವುದರಿಂದ ಬಳಕೆ ಪ್ರಮಾಣ ಹಾಗೂ ವಿದ್ಯುತ್ ಕಳ್ಳತನ ತಪ್ಪಿಸಬಹುದು ಎಂದರು.
ಬೇಡಿಕೆ ಪ್ರಮಾಣ ಇಳಿಮುಖ
ರಾಜ್ಯದಲ್ಲಿ ವಿದ್ಯುತ್ ಕೊರತೆ ನಿವಾರಣೆಯಾಗುತ್ತಿದೆ. 2012-13ನೇ ಸಾಲಿನಲ್ಲಿ ಶೇ.19ರಷ್ಟು ವಿದ್ಯುತ್ ಅನ್ನು ಅಲ್ಪಾವಧಿ ವ್ಯವಸ್ಥೆಯಡಿ ಖರೀದಿಸಲಾಗಿತ್ತು.2013- 14ನೇ ಸಾಲಿನಲ್ಲಿ ಇದರ ಪ್ರಮಾಣ ಶೇ.11ಕ್ಕೆ ಇಳಿಮುಖವಾಗಿದೆ. 2014-15ನೇ ಸಾಲಿಗೆ ಶೇ.8 ರಷ್ಟಾಗಲಿದ್ದು, 2015-16ನೇ ಸಾಲಿಗೆ ಶೇ.3 ರಷ್ಟಕ್ಕೆ ಇಳಿಮುಖವಾಗಲಿದೆ. ಇದಕ್ಕೆ ರಾಜ್ಯಅನೇಕ ವಿದ್ಯುತ್ ಉತ್ಪಾದನೆಯ ಯೋಜನೆಗಳನ್ನು ಕಾರ್ಯಗತಗೊಳಿ ಸುತ್ತಿರುವುದು ಕಾರಣ ಎಂದರು.
100 ಯೂನಿಟ್‍ಗೆ ಹೆಚ್ಚಳವಿಲ್ಲ
ಗೃಹ ಬಳಕೆದಾರರಿಗೆ ಮೊದಲು 100 ಯೂನಿಟ್ ಬಳಕೆಗೆ ಯಾವುದೇ ದರ ಹೆಚ್ಚಳ ಮಾಡಿಲ್ಲ. 101ಯೂನಿಟ್ ನಂತರದ ಬಳಕೆಗೆ ಪ್ರತಿಯೂನಿಟ್‍ಗೆ 15
ಪೈಸೆ ಹೆಚ್ಚಳ ಮಾಡಿದೆ. ಅಂದರೆ, ಮೊದಲ 100 ಯೂನಿಟ್‍ಗೆ ಪ್ರತಿ ಯೂನಿಟ್ ದರ ರು. 4 ಹಾಗೆಯೇ ಇದೆ. 101 ಯೂನಿಟ್‍ಗೆ ಈಗಿರುವ ದರವನ್ನು ರು. 5.25ರಿಂದ
ರು. 5-40ಕ್ಕೆ, 201ನೇ ಯೂನಿಟ್‍ನಿಂದ ರು. 6.25ರಿಂದ ರು. 6.40ಕ್ಕೆ ಏರಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯ ನಗರ ಪ್ರದೇಶಗಳಲ್ಲಿನ ಎಲ್‍ಟಿ ಕೈಗಾರಿಕಾ ಬಳಕೆದಾರರಿಗೆ
ಮೊದಲ 500 ಯೂನಿಟ್‍ಗೆ 15 ಪೈಸೆ ಹೆಚ್ಚಳ ಮÁಡಿ 500 ಯೂನಿಟ್‍ವರೆಗಿನ ಬಳಕೆಗೆ ಪ್ರತಿ ಯೂನಿಟ್‍ಗೆ ರು. 4.90 ರೂ. ನಿಗದಿ ಮಾಡಲಾಗಿದೆ. 500
ಯೂನಿಟ್‍ನಿಂದ 1000 ಯೂನಿಟ್ ಬಳಕೆಗೆ ರು. 5.50, ನಂತರದ ಬಳಕೆಗೆ ರು. 5.80 ರೂ. ನಿಗದಿ ಮಾಡಲಾಗಿದೆ.
ಕೊನೆಯ ಪರಿಷ್ಕರಣೆ
ಕೆಇಆರ್‍ಸಿ ಅಧ್ಯಕ್ಷ ಎಂ. ಆರ್. ಶ್ರೀನಿವಾಸ ಮೂರ್ತಿ ಅವಧಿಯ ಕೊನೆಯ ವಿದ್ಯುತ್ ಪರಿಷ್ಕರ ಇದಾಗಿದ್ದು, ಇವರ
ನಿವೃತ್ತಿಯ ನಂತ ಈ ತಿಂಗಳೇ ಹೊಸ ಅಧ್ಯಕ್ಷರುನೇಮಕಗೊಳ್ಳಲಿದ್ದಾರೆ.
ಚಿಕ್ಕ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಿಗೆ ರಿಯಾಯಿತಿ
ನಗರದಲ್ಲಿರುವ ಸಣ್ಣ ಪ್ರಮಾಣದ ಆಸ್ಪತ್ರೆ, ಕ್ಲಿನಿಕ್‍ಗಳು, ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ಈ ಹಿಂದಿನ ದರವೇ ಮುಂದುವರೆಯಲಿದೆ. ದೊಡ್ಡ ಪ್ರಮಾಣದಲ್ಲಿರುವ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ಯೂನಿಟ್‍ಗೆ 20 ಪೈಸೆ ಹೆಚ್ಚಳ ಮಾಡಲಾಗಿದೆ. ನವೀಕೃತ ಇಂಧನ ಮೂಲಗಳಿಂದ ಉತ್ಪಾದಿಸುವ ಹಾಗೂ
ಖರೀದಿಸುವ ವಿದ್ಯುತ್‍ಗೆ ಪ್ರತಿ ಯೂನಿಟ್‍ಗೆ ನೀಡುವ 50 ಪೈಸೆ ಹಸಿರು ದರವನ್ನು ಮುಂದುವರಿಸಲಾಗಿದೆ.
ನೀರಿಗೆ 10 ಪೈಸೆ ಹೆಚ್ಚಳ
ಕುಡಿಯುವ ನೀರು ಸರಬರಾಜು ಮಾಡುವ ಸ್ಥಾವರಗಳಿಗೆ ಬಳಸಲಾಗುವ ವಿದ್ಯುಚ್ಛಕ್ತಿ ದರವನ್ನು ಪ್ರತಿ ಯೂನಿಟ್‍ಗೆ 10 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಈಗಿರುವ
ರು. 3.20 ರೂನಿಂದ ರು. 3.40ಕ್ಕೆ ಹೆಚ್ಚಿಸಲಾಗಿದೆ. ಇದು ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಅನ್ವಯವಾಗಲಿದೆ. ದರ್ಜಿ ಹಾಗೂ ಇಸ್ತ್ರಿ ಮಾಡುವವರಿಗೆ ದರ ಕಡಿಮೆ
ಮಾಡಲಾಗಿದೆ. ಹಿಂದೆ ಅವರು ಪ್ರತಿ ಯುನಿಟ್‍ಗೆ ರು. 6.45 ನೀಡುತ್ತಿದ್ದರು. ಈಗ ರು. 4.70 ರಿಂದ ರು. 6 ಕೊಡಬೇಕಾಗುತ್ತದೆ. ಸ್ಥಳೀಯ ಸಂಸ್ಥೆಗಳು ಎಲ್ಲ ಬೀದಿ ದೀಪಗಳಿಗೆ ಎಲ್‍ಇಡಿ ದೀಪಗಳನ್ನು ಅಳವಡಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ಯೂನಿಟ್‍ಗೆ ರು. 4 ದರ ನಿಗದಿ ಮಾಡಿದೆ. ಇತರೆ ಮಾದರಿ ಬೀದಿ ದೀಪ ಅಳವಡಿಕೆಗೆ ಪ್ರತಿ ಯೂನಿಟ್‍ಗೆ 15 ಪೈಸೆಯಷ್ಟು ಅಂದರೆ, ರು. 4.85 ರೂ.ನಿಂದ ರು. 5ಕ್ಕೆ ಏರಿಕೆ ಮಾಡಲಾಗಿದೆ.
ಮನ್ನಣೆ ಸಿಕ್ಕಿಲ್ಲ
ಪ್ರತಿ ಎಸ್ಕಾಂಗಳು ಎಲ್ಲ ವರ್ಗದ ಬಳಕೆದಾರರಿಗೆ 80 ಪೈಸೆಯಷ್ಟು ಹೆಚ್ಚಳ ಮಾಡುವಂತೆ ಮನವಿ ಮಾಡಿ ದ್ದವು. ಆದರೆ, ಎಲ್ಲವನ್ನೂ ಅಳೆದು ತೂಗಿ ದರ ನಿಗದಿ ಮಾಡಿದೆ.
ಕೆಪಿಟಿಸಿಎಲ್‍ಗೆ ರು. 2606 ಕೋಟಿ ನಿಗದಿ ಮಾಡಿದ್ದು, ಪ್ರತಿ ತಿಂಗಳು ಪ್ರತಿ ಮೆಗಾವಾಟ್‍ಗೆ ರು. 1,12,079 ಕೋಟಿ ನಿಗದಿ ಮಾಡಿದೆ.
ಬೆಸ್ಕಾಂ- ರು. 16,418 ಕೋಟಿ ಸಂಗ್ರಹಕ್ಕೆ ಬೇಡಿಕೆ, ರು.15,613 ಕೋಟಿ ಸಂಗ್ರಹಕ್ಕೆ ಅನುಮೋದನೆ.
ಮೆಸ್ಕಾಂ- ರು. 2665.20 ಕೋಟಿ ಸಂಗ್ರಹಕ್ಕೆ ಬೇಡಿಕೆ, ರು. 2492.42 ಕೋಟಿ ಸಂಗ್ರಹಕ್ಕೆ ಅನುಮೋದನೆ.
ಚೆಸ್ಕಾಂ- ರು.3441.90 ಕೋಟಿ ಸಂಗ್ರಹಕ್ಕೆ ಬೇಡಿಕೆ, ರು.3074.70 ಕೋಟಿ ಸಂಗ್ರಹಕ್ಕೆ ಅನುಮೋದನೆ.
ಹೆಸ್ಕಾಂ- ರು.5865.28 ಕೋಟಿ ಸಂಗ್ರಹಕ್ಕೆ ಬೇಡಿಕೆ, ರು. 5319.38 ಕೋಟಿ ಸಂಗ್ರಹಕ್ಕೆ ಅನುಮೋದನೆ.
ಜೆಸ್ಕಾಂ- ರು.3792.60 ಕೋಟಿ ಸಂಗ್ರಹಕ್ಕೆ ಬೇಡಿಕೆ, ರು. 3497.94 ಕೋಟಿ ಸಂಗ್ರಹಕ್ಕೆ ಅನುಮೋದನೆ.
ಒಟ್ಟಾರೆ ಎಲ್ಲ ಎಸ್ಕಾಂಗಳು 31,687 ಕೋಟಿ ಬೇಡಿಕೆ ಇಟ್ಟಿದ್ದು, ರು. 28,803 ಕೋಟಿ ಸಂಗ್ರಹಕ್ಕೆ ಅನುಮೋದನೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


