ಜಿಲ್ಲಾ ಸುದ್ದಿ

ಬಿಬಿಎಂಪಿ ಚುನಾವಣೆಗೆ ಬಿಜೆಪಿ ತಾಲೀಮು ಶುರು

ಬಿಬಿಎಂಪಿ ಚುನಾವಣೆಗೆ ಬಿಜೆಪಿ ಈಗಿನಿಂದಲೇ ತಾಲೀಮು ಶುರುವಿಟ್ಟುಕೊಂಡಿದೆ. ಬುಧವಾರದಿಂದ ಆರಂಭವಾಗುವ ಪಕ್ಷದ ಮಹಾಸಂಪರ್ಕ ಅಭಿಯಾನದ ಜೊತೆಜೊತೆಗೆ ಚುನಾವಣಾ ಪ್ರಚಾರ ಕಾರ್ಯವನ್ನು ಸದ್ದಿಲ್ಲದೇ ಆರಂಭಿಸುತ್ತಿದೆ...

ಬಿಬಿಎಂಪಿ ಚುನಾವಣೆಗೆ ಬಿಜೆಪಿ ತಾಲೀಮು ಶುರು
ಬಿಬಿಎಂಪಿ ಚುನಾವಣೆಗೆ ಪ್ರಚಾರ ಕಾರ್ಯಕ್ಕೆ ತಯಾರಾದ ಬಿಜೆಪಿ
Published On :

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಬಿಜೆಪಿ ಈಗಿನಿಂದಲೇ ತಾಲೀಮು ಶುರುವಿಟ್ಟುಕೊಂಡಿದೆ. ಬುಧವಾರದಿಂದ ಆರಂಭವಾಗುವ ಪಕ್ಷದ ಮಹಾಸಂಪರ್ಕ ಅಭಿಯಾನದ ಜೊತೆಜೊತೆಗೆ ಚುನಾವಣಾ ಪ್ರಚಾರ ಕಾರ್ಯವನ್ನು ಸದ್ದಿಲ್ಲದೇ ಆರಂಭಿಸುತ್ತಿದೆ.

ಪಕ್ಷದ ತೀರ್ಮಾನದಂತೆ ಸದಸ್ಯತ್ವ ಅಭಿಯಾನದ ಮುಂದುವರಿದ ಭಾಗವಾಗಿ ಮಹಾಸಂಪರ್ಕ ಅಭಿಯಾನವು ಜೂ.24ರಿಂದ ಜುಲೈ 6ರವರೆಗೆ ನಡೆಯುತ್ತಿದೆ. ಈ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಬರೆದಿರುವ ಪತ್ರ, ಕೇಂದ್ರ ಸರ್ಕಾರದ ಸಾಧನೆ, ಬಿಜೆಪಿ ನಡೆದುಬಂದ ಸಾಧನೆ ಮಾಹಿತಿ ಇರುವ ಪತ್ರದ ಜೊತೆಗೆ ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತಾವಧಿಯ ಐದು ವರ್ಷದ ಸಾಧನೆಯನ್ನು ಬಿಂಬಿಸುವ ಕರಪತ್ರವನ್ನು ಪ್ರತಿ ಸದಸ್ಯರಿಗೆ ತಲುಪಿಸಿ ಒಂದು ಸುತ್ತಿನ ಪ್ರಚಾರ ಕಾರ್ಯವನ್ನೇ ಮುಗಿಸುವ ಕಾರ್ಯತಂತ್ರ ರೂಪಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಸುಬ್ಬನರಸಿಂಹ, ಚುನಾವಣೆಗೆ ನಾವು ಈ ಹಿಂದೆಯೇ ಸಿದ್ಧರಿದ್ದೆವು. ಈಗ ಮಹಾ ಸಂಪರ್ಕ ಅಭಿಯಾನದ ವೇಳೆಯಲ್ಲಿ ಬಿಬಿಎಂಪಿ ಸಾಧನೆ ಬಿಂಬಿಸುವ ಕರಪತ್ರವನ್ನು ಜನರಿಗೆ ಮುಟ್ಟಿಸುತ್ತೇವೆ. ಚುನಾವಣೆ ಘೋಷಣೆಯಾದ ನಂತರ ಕಾರ್ಯಂತ್ರ ಬದಲಿಸುತ್ತೇವೆ ಎಂದು ಹೇಳಿದರು.

ಪಕ್ಷದ ಮಿಸ್ಡ್ ಕಾಲ್ ಸದಸ್ಯತ್ವ ಅಭಿಮಾನದ ವೇಳೆ ಬಿಬಿಎಂಪಿ ವ್ಯಾಪ್ತಿಯಲ್ಲಿ 21 ಲಕ್ಷ ಮಂದಿ ಸದಸ್ಯರಾಗಿದ್ದರು. ಅವರೆಲ್ಲರನ್ನೂ ನೇರವಾಗಿ ಭೇಟಿ ಮಾಡಲು ಕಾರ್ಯಕರ್ತರ ತಂಡಗಳನ್ನು ರಚಿಸಲಾಗಿದ್ದು, ಪ್ರತಿ ಬೂತ್ ನಲ್ಲಿ ನಾಲ್ಕು ಮಂದಿಗೆ ಜವಾಬ್ದಾರಿ ವಹಿಸಲಾಗಿದೆ. ಇವರೊಂದಿಗೆ ಉಳಿದ ಕಾರ್ಯಕರ್ತರು ಪ್ರತಿ ಮನೆಯನ್ನು ಭೇಟಿ ಮಾಡಿ ಕರಪತ್ರ ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಪಕ್ಷದ ಮುಖಂಡರು ವಿವರಿಸಿದ್ದಾರೆ.

ಸತತ ಸಭೆ

ರಾಜ್ಯ ಸರ್ಕಾರವು ಬಿಬಿಎಂಪಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡುತ್ತಿದ್ದಂತೆಯೇ ಕಾರ್ಯಪ್ರವೃತ್ತವಾಗಿದ್ದ ಬಿಜೆಪಿಯು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸತತ ಸಭೆ ನಡೆಸಿದೆ. ಬಿಜೆಪಿ ಬೆಂಗಳೂರು ಜಿಲ್ಲಾ ಘಟಕದ ಮುನಿರಾಜು ಮತ್ತು ಮಹಾನಗರ ಘಟಕದ ಅಧ್ಯಕ್ಷ ಸುಬ್ಬನರಸಿಂಹ ನೇತೃತ್ವದಲ್ಲಿ ತಂಡ ರಚನೆಯಾಗಿದ್ದು, ಪ್ರತಿವಾರಕ್ಕೊಂದರಂತೆ ಸಭೆ ನಡೆದಿದೆ. ಕ್ಷೇತ್ರವಾರು ಬಿಜೆಪಿಗಿರುವ ಅವಕಾಶಗಳು, ಋಣಾತ್ಮಕ ಅಂಶಗಳಿದ್ದರೆ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡಲಾಗಿದೆ.

ಚುನಾವಣೆ ದೃಷ್ಟಿಯಿಂದ ರಚನೆಯಾದ ಕೋರ್ ಕಮಿಟಿಯ ಹೊರತಾಗಿ ನಗರದ ಅಲ್ಲಲ್ಲಿ ಸಣ್ಣಪುಟ್ಟ ಸಭೆಗಳು ನಡೆದಿವೆ. ಅನೇಕ ಕಡೆಗಳಲ್ಲಿ ಬಿಜೆಪಿ ಸಂಸದರು ಸಹ ಪಾಲ್ಗೊಂಡಿದ್ದಿದೆ. ಬೆಂಗಳೂರು ಬಿಜೆಪಿ ಶಾಸಕರಿಗೆ ಚುನಾವಣೆಯ ಜವಾಬ್ದಾರಿ ವಹಿಸಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಶಾಸಕರ ಸಭೆ ಕೂಡ ನಿಗದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.