ಜಿಲ್ಲಾ ಸುದ್ದಿ

ತುಂಬು ಗರ್ಭಿಣಿ ಮೇಲೆ ಹರಿದ ಲಾರಿ: ತಾಯಿ-ಮಗು ಸಾವು

ಕೆಲ ದಿನಗಳಲ್ಲೇ ಜಗತ್ತಿಗೆ ಕಾಲಿಡಬೇಕಿದ್ದ ಪುಟ್ಟ ಕಂದಮ್ಮ, ಹಸುಗೂಸನ್ನು ಹೆತ್ತಾಡಿಸುವ ತಾಯಿ ಹಂಬಲ ಎರಡು ಒಂದು ಅಪಘಾತಕ್ಕೆ ಬಲಿಯಾಗಿವೆ...

ತುಂಬು ಗರ್ಭಿಣಿ ಮೇಲೆ ಹರಿದ ಲಾರಿ: ತಾಯಿ-ಮಗು ಸಾವು
ತುಂಬು ಗರ್ಭಿಣಿ
Published On :
ರಾಯಚೂರು: ಕೆಲ ದಿನಗಳಲ್ಲೇ ಜಗತ್ತಿಗೆ ಕಾಲಿಡಬೇಕಿದ್ದ ಪುಟ್ಟ ಕಂದಮ್ಮ, ಹಸುಗೂಸನ್ನು ಹೆತ್ತಾಡಿಸುವ ತಾಯಿ ಹಂಬಲವೆರಡೂ ಒಂದು ಅಪಘಾತಕ್ಕೆ ಬಲಿಯಾಗಿವೆ. 
ರಾಯಚೂರಿನ ಬಸವನಬಾವಿ ವೃತ್ತದಲ್ಲಿ ಯಮಸ್ವರೂಪಿಯಾದ ಲಾರಿ 9 ತಿಂಗಳ ಗರ್ಭಿಣಿ ಮೇಲೆ ಹರಿದ ಪರಿಣಾಮ ತಾಯಿ ಹಾಗೂ ಗರ್ಭದಲ್ಲಿದ್ದ ಮಗು ಸಾವನ್ನಪ್ಪಿದೆ. 
ಚಂದ್ರಬಂಡಾ ಗ್ರಾಮದ ನಿವಾಸಿ ಸರೋಜ ಎಂಬುವರು ಮೃತ ದುರ್ದೈವಿ. ಇಕೆ ಚಿಕಿತ್ಸೆಗೆಂದು ಬಂದಿದ್ದ ವೇಳೆ ಅವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಮಗು ಗರ್ಭದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ರಾಯಚೂರಿನಲ್ಲಿ ನಡೆದಿದೆ. 
ರಾಯಚೂರು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.