ಜೂ 23 ರಿಂದ ಮಹಾಪುರಾಣಗಳ ಸಂದೇಶದ ಬಗ್ಗೆ ರಾಷ್ಟ್ರಮಟ್ಟದ ಸಮ್ಮೇಳನ
ಭಾರತೀಯ ವಿದ್ಯಾಭವನ ಹಾಗೂ ಇಸ್ಕಾನ್ ಸಂಸ್ಥೆ ಮಹಾಪುರಾಣಗಳ ಸಂದೇಶ ಎಂಬ ರಾಷ್ಟ್ರಮಟ್ಟದ ಸಮ್ಮೇಳನವನನ್ನು ಆಯೋಜಿಸಿವೆ.

ಬೆಂಗಳೂರು ವೇದ ಸಂವಾದ, ಉಪನಿಷತ್ ಸಂದೇಶ ಸಮ್ಮೇಳನವನ್ನು ಹಮ್ಮಿಕೊಂಡಿದ್ದ ಭಾರತೀಯ ವಿದ್ಯಾಭವನ ಹಾಗೂ ಇಸ್ಕಾನ್ ಸಂಸ್ಥೆ ಮಹಾಪುರಾಣಗಳ ಸಂದೇಶ ಎಂಬ ರಾಷ್ಟ್ರಮಟ್ಟದ ಸಮ್ಮೇಳನವನನ್ನು ಆಯೋಜಿಸಿವೆ.
ಕಾರ್ಡ್ ರಸ್ತೆಯಲ್ಲಿರುವ ಹರೆಕೃಷ್ಣ ಹಿಲ್ ನಲ್ಲಿ ಜೂ.23 - 27 ವರೆಗೂ ಈ ಮಹಾಸಮ್ಮೇಳನ ನಡೆಯಲಿದ್ದು, ದೇಶದ ವಿವಿಧ ಭಾಗಳಿಂದ ವಿದ್ವಾಂಸರು ಪಾಲ್ಗೊಂಡು ಮಹಾಪುರಾಣಗಳ ಸಂದೇಶಗಳ ಬಗ್ಗೆ ಮಾತನಾಡಲಿದ್ದಾರೆ. ಉಪನ್ಯಾಸದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜೂ.23 ರಂದು ಬೆಳಿಗ್ಗೆ 11 ಗಂಟೆಗೆ ರಾಷ್ಟ್ರಮಟ್ಟದ ಮಹಾಸಮ್ಮೇಳನ ಉದ್ಘಾಟನೆಯಾಗಲಿದ್ದು, ಪ್ರತಿ ದಿನ ಬೆಳಿಗ್ಗೆ 9 -7 ವರೆಗೆ ಎರಡು ಸೆಷನ್ ಗಳಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಮಾಜಿ ಕೇಂದ್ರ ಸಚಿವ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಸಾಹಿತಿ ವೀರಪ್ಪ ಮೊಯ್ಲಿ, ಭಾರತೀಯ ವಿದ್ಯಾಭವನದ ಕಾರ್ಯದರ್ಶಿ ಕೆ.ಜಿ ರಾಘವನ್, ವಿದ್ವಾಂಸರಾದ ಶತಾವಧಾನಿ ಗಣೇಶ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪುರಾಣಗಳಲ್ಲಿ ಪರಿಸರ(ಎಕೋಲಜಿ ಇನ್ ಪುರಾಣ) ಎಂಬ ವಿಷಯದ ಬಗ್ಗೆ ಜೂ.23 ರಂದು ಸಂಜೆ 5 ಗಂಟೆಗೆ ಶತಾವಧಾನಿ ಡಾ.ಆರ್ ಗಣೇಶ್ ಮಾತನಾಡಲಿದ್ದಾರೆ. www.intlarts.org ಎಂಬ ವೆಬ್ ಸೈಟ್ ನಲ್ಲಿ ಕಾರ್ಯಕ್ರಮವನ್ನು ವೆಬ್ಕಾಸ್ಟ್ ಮಾಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


