4 ಅರ್ಚಕರ ಅಮಾನತು
ನಗರದ ಐತಿಹಾಸಿಕ ದೇವಸ್ಥಾನ ಬನಶಂಕರಿ ದೇವಿಯ ಕಿರೀಟ ಹಾಗೂ ಪಾದುಕೆಯ 6.810 ಮಿಲಿಗ್ರಾಂ ಚಿನ್ನಾಭರಣ ಕಳವಾಗಿದೆ. ಈ ಸಂಬಂಧ ದೇವಸ್ಥಾನದ ನಾಲ್ವರು ಅರ್ಚಕರು ಅಮಾನತುಗೊಂಡಿದ್ದಾರೆ.

ಬೆಂಗಳೂರು: ನಗರದ ಐತಿಹಾಸಿಕ ದೇವಸ್ಥಾನ ಬನಶಂಕರಿ ದೇವಿಯ ಕಿರೀಟ ಹಾಗೂ ಪಾದುಕೆಯ 6.810 ಮಿಲಿಗ್ರಾಂ ಚಿನ್ನಾಭರಣ ಕಳವಾಗಿದೆ. ಈ ಸಂಬಂಧ ದೇವಸ್ಥಾನದ ನಾಲ್ವರು ಅರ್ಚಕರು ಅಮಾನತುಗೊಂಡಿದ್ದಾರೆ.
ದೇವಸ್ಥಾನದ ಪ್ರಧಾನ ಅರ್ಚಕ ಸತ್ಯನಾರಾಯಣ ಶಾಸ್ತ್ರಿ, ಪರಿಚಾರಕ ಸೋಮಶೇಖರ್ ಶರ್ಮಾ, ಸಹಾಯಕ ಅರ್ಚಕರಾದ ಸತೀಶ್ ಹಾಗೂ ನಾಗರಾಜ ರಾವ್ ಅವರನ್ನು ಅಮಾನತುಗೊಳಿಸಿ ವಿಶೇಷ ಜಿಲ್ಲಾಧಿಕಾರಿ ವೆಂಕಟಾಚಲಪತಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ದೇವರ ಆಭರಣ ನಾಪತ್ತೆ ಹಿನ್ನೆಲೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀ ಅವರು ಕುಮಾರಸ್ವಾಮಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ: ಜೂನ್ 10ರಂದು ದೇವಸ್ಥಾನದ ಅರ್ಚಕರಾದ ನಾಗರಾಜ್ ರಾವ್ ಅವರು ಅಭಿಷೇಕ ಮಾಡಲೆಂದು ಹಿಂದಿನ ದಿನದ ಹೂವಿನ ಅಲಂಕಾರ ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ದೇವರ ಪಾದುಕೆ ಹಾಗೂ ಕಿರೀಟದ ಕೆಳಭಾಗದ ಚಿನ್ನಾಭರಣ ಕಾಣೆಯಾಗಿರುವುದನ್ನು ಗಮನಿಸಿರುವುದಾಗಿ ಹೇಳಿದ್ದಾರೆ.
ಆದರೆ, ಆ ವಿಚಾರವನ್ನು ಕೂಡಲೇ ನಮ್ಮ ಗಮನಕ್ಕೆ ತಾರದೆ, ಜೂನ್ 15ರಂದು ತಿಳಿಸಿದ್ದರು, ದೇವಸ್ಥಾನದ ಗರ್ಭ ಗುಡಿಯೊಳಗೆ ತೆರಳಲು ನಾಲ್ವರಿಗೆ ಮಾತ್ರ ಅವಕಾಶವಿದೆ. ಒಡವೆಗಳಿಗೆ ಅವರೇ ಜವಾಬ್ದಾರರಾಗಿರುತ್ತಾರೆ. ಹೀಗಾಗಿ, ನಾಲ್ವರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಾಗಿದೆ. ದೇವಸ್ಥಾನದ ಸಿಸಿ ಕ್ಯಾಮೆರಾ ವಿಡಿಯೋ ಪರಿಶೀಲಿಸಲಾಗಿತ್ತು. ಒಡವೆಗಳ ಸ್ವಲ್ಪ ಭಾಗವನ್ನು ಮುರಿದಿರುವಂತೆ ಕಂಡು ಬಂದಿದೆ. ತೂಕ ಮಾಡಿದಾಗ 6.810 ಮಿಲಿ ಗ್ರಾಂ ಚಿನ್ನ ಕಡಿಮೆಯಾಗಿತ್ತು ಎಂದು ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


