ಅಶ್ವಿನಿ ಅಂಗಡಿ ಸಾಧನೆ ಶ್ಲಾಘಿಸಿದ ಮೋಟಮ್ಮ
ದುರ್ಬಲ, ವಿಕಲಚೇತನ ಹಾಗೂ ಅಂಧ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕನ್ನಡದ ಕುವರಿ ಕುಮಾರಿ ಅಶ್ವಿನಿ ಅಂಗಡಿ ಅವರಿಗೆ ವಿಶ್ವ ಮಟ್ಟದಲ್ಲಿ ಮನ್ನಣೆ...

ಬೆಂಗಳೂರು: ದುರ್ಬಲ, ವಿಕಲಚೇತನ ಹಾಗೂ ಅಂಧ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕನ್ನಡದ ಕುವರಿ ಕುಮಾರಿ ಅಶ್ವಿನಿ ಅಂಗಡಿ ಅವರಿಗೆ ವಿಶ್ವ ಮಟ್ಟದಲ್ಲಿ ಮನ್ನಣೆ ಸಿಕ್ಕಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಶ್ವಿನಿ ಅಂಗಡಿ ಅವರು ಬೆಂಗಳೂರಿನಲ್ಲಿ ಬೆಳಕು ಅಕಾಡೆಮಿ ಸ್ಥಾಪಿಸಿ ಅಂಧ ಮಕ್ಕಳಿಗೆ ಉಚಿತ ವಸತಿ ಶಾಲೆ ಸೌಲಭ್ಯ ಕಲ್ಪಿಸಿದ್ದಾರೆ. ಅವರಿಗೆ ದೇಶ-ವಿದೇಶಗಳ ಬಿರುದು ಬಾವಲಿಗಳು, ಪುರಸ್ಕಾರಗಳು ದೊರೆತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
ಅಶ್ವಿನಿ ಅಂಗಡಿಯವರಿಗೆ ಲಂಡನ್ ಮಹಾರಾಣಿ ಎಲಿಜಬೆತ್ ಅವರ ಡೈಮಂಡ್ ಜುಬಿಲಿ ಟ್ರಸ್ಟ್ ನೀಡುವ ಯಂಗ್ ಲೀಡರ್ ಪ್ರಶಸ್ತಿ ಲಭಿಸಿದೆ. ಇದೇ 22ರಂದು ಬಂಕಿಂಗ್ಹ್ಯಾಮ್ ಅರಮನೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದ ಅವರು, ವಿಶ್ವದ 60 ಯುವ ಪ್ರತಿಭೆಗಳಿಗೆ ಯಂಗ್ ಲೀಡರ್ ಪ್ರಶಸ್ತಿ ಲಭಿಸಿದ್ದು, ಅದರಲ್ಲಿ ಅಶ್ವಿನಿ ಕೂಡ ಒಬ್ಬಳಾಗಿರುವುದು ಖುಷಿಯ ಸಂಗತಿ. ಅಶ್ವಿನಿ ಅಂಗಡಿ ಮಾದರಿಯಲ್ಲೇ ಎಲ್ಲಾ ಅಂಗವಿಕಲರು ಕುಗ್ಗದೇ ಸಾಧನೆಯತ್ತ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


