ಕಾಳಸಂತೆಯಲ್ಲಿ ಹಾಲಿನ ಪುಡಿ ಪ್ಯಾಕೆಟ್ ಮಾರಾಟ
ಅಂಗನವಾಡಿ ಹಾಲಿನ ಪುಡಿ ಪ್ಯಾಕೆಟ್ ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕನನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಮಾಲು ಸಮೇತ ಹಿಡಿದು, ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ...

ಕೆ.ಆರ್.ನಗರ: ಅಂಗನವಾಡಿಗಳ ಮೂಲಕ 3ರಿಂದ 6 ವರ್ಷದ ಮಕ್ಕಳಿಗೆ ನೀಡುವ ಹಾಲಿನ ಪುಡಿ ಪ್ಯಾಕೆಟ್ ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕನನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಮಾಲು ಸಮೇತ ಹಿಡಿದು, ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ.
ಪಟ್ಟಣದ ಬಜಾರ್ ರಸ್ತೆ ಮೊದಲನೇ ಕ್ರಾಸ್ ನಲ್ಲಿರುವ ಪ್ರಾವಿಷನ್ ಸ್ಟೋರ್ ನ ಮಾಲೀಕ ಕೇರಳ ಮೂಲದ ರಫೀಕ್ ಹಲವಾರು ದಿನಗಳಿಂದ ಹಾಲಿನ ಪುಡಿ ಪ್ಯಾಕೆಟ್ ಗಳನ್ನು ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಸಿಡಿಪಿಒ ಸದಾಶಿವಪ್ಪ ದಾಳಿ ನಡೆಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಲೀಕನನ್ನು ಬಂಧಿಸಿರುವ ಪಟ್ಟಣ ಪೊಲೀಸರು ಎಫ್ ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇಲಾಖೆ ವತಿಯಿಂದ ಅಂಗನವಾಡಿಗಳ ಮೂಲಕ ಮಕ್ಕಳ ಮನೆಗಳಿಗೆ ವಿತರಿಸುವ 258 ಬೆಲೆ ಬಾಳುವ ಅರ್ಧ ಕೆ.ಜಿ. ತೂಕದ 20 ಹಾಲಿನ ಪೌಡರ್ ಪ್ಯಾಕೆಟ್ ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಂಗಡಿ ಮಾಲೀಕ ರಫೀಕ್ ಅವರನ್ನು ಪ್ರಶ್ನಿಸಿದಾಗ ಪಟ್ಟಣದ ಕಿರಣ್ ಎಂಬುವವರು 60ರಿಂದ 70 ಪ್ಯಾಕೆಟ್ ಗಳನ್ನು ನನ್ನ ಅಂಗಡಿ ಸೇರಿದಂತೆ ಹಲವಾರು ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ನಾವು ಇವುಗಳನ್ನು ಐಸ್ ಕ್ರೀಂ ಮಾಡುವ ಕಾರ್ಖಾನೆಗಳಿಗೆ ಲಾಭಕ್ಕೆ ಮಾರಾಟ ಮಾಡುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


