ಜಿಲ್ಲಾ ಸುದ್ದಿ

ಮದುವೆ ಆಮಿಷ ಒಡ್ಡಿ ಬಾಲಕಿ ಮೇಲೆ ಅತ್ಯಾಚಾರ

ಮದುವೆಯಾಗುವುದಾಗಿ ಆಮಿಷ ಒಡ್ಡಿ ಪ್ರೇಮಿಯೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ರಾಮನಗರಗದಲ್ಲಿ ಬೆಳಕಿಗೆ ಬಂದಿದೆ.

ಮದುವೆ ಆಮಿಷ ಒಡ್ಡಿ ಬಾಲಕಿ ಮೇಲೆ ಅತ್ಯಾಚಾರ
ಮದುವೆ ಆಮಿಷ ಒಡ್ಡಿ ಅತ್ಯಾಚಾರ
Published On :

ರಾಮನಗರ: ಮದುವೆಯಾಗುವುದಾಗಿ ಆಮಿಷ ಒಡ್ಡಿ ಪ್ರೇಮಿಯೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ರಾಮನಗರಗದಲ್ಲಿ ಬೆಳಕಿಗೆ ಬಂದಿದೆ.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಕಳೆದ 2 ದಿನಗಳ ಹಿಂದೆ ಗಿರೀಶ್ ಎಂಬಾತ ಆಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ಹೇಳಿ ಕಾರಿನಲ್ಲಿ ಬೆಂಗಳೂರಿನಕ್ಕ ಕರೆತಂದಿದ್ದ. ಮಾರ್ಗ ಮಧ್ಯೆ ಕಾರು ಕೆಟ್ಟು ಹೋಗಿದೆ ಎಂದು ಹೇಳಿ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಪ್ರಸ್ತುತ ಪ್ರಕರಣ ಸಂಬಂಧ ಬಾಲಕಿಯ ಪ್ರೇಮಿ ತುಮಕೂರು ಮೂಲದ ಗಿರೀಶ್ ಮತ್ತು ಆತನ ಇಬ್ಬರು ಸ್ನೇಹಿತರಾದ ಗಂಗರಾಜ್ ಮತ್ತು ಕೆಂಪರಾಜ್ ಎಂಬುವವನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳ ವಿರುದ್ಧ ಪೋಸ್ಕೋ, ಅಪಹರಣ, ಮತ್ತು ಅತ್ಯಾಚಾರ ಪ್ರಕರಣದಡಿಯಲ್ಲಿ ದೂರು ದಾಖಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏನಿದು ಘಟನೆ?
ರಾಮನಗರ ಮೂಲದ ಅಪ್ರಾಪ್ತ ಬಾಲಕಿಯನ್ನು ತುಮಕೂರು ಮೂಲದ ಗಿರೀಶ್ ಎಂಬಾತ 2 ವರ್ಷದಿಂದ ಪ್ರೀತಿಸುತ್ತಿದ್ದನು. ಕಳೆದ 2 ದಿನಗಳ ಹಿಂದೆ ಬಾಲಕಿಯನ್ನು ಭೇಟಿ ಮಾಡಿದ್ದ ಗಿರೀಶ್ ಆಕೆಯನ್ನು ಮದುವೆಯಾಗುವುದಾಗಿ ಹೇಳಿ. ಆಕೆಯನ್ನು ಪುಸಲಾಯಾಸಿ ಬೆಂಗಳೂರಿಗೆ ಕರೆದೊಯ್ಯಲು ನಿರ್ಧರಿಸಿದ್ದ. ಇದಕ್ಕೆ ಈತ ತನ್ನ ಇಬ್ಬರು ಸ್ನೇಹಿತರಾದ ಗಂಗರಾಜ್ ಮತ್ತು ಕೆಂಪರಾಜ್ ಎಂಬುವವರ ಸಹಾಯ ಕೂಡ ಪಡೆದಿದ್ದ. ಕಾರಿನಲ್ಲಿ ಬಂದ ಮೂವರು ಬಾಲಕಿಯನ್ನು ರಾಮನಗರದಿಂದ ಕರೆದೊಯ್ದು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಮಾರ್ಗ ಮಧ್ಯೆ ಕಾರು ಕೆಟ್ಟು ಹೋಗಿದ್ದು, ಗಿರೀಶ್ ಸ್ನೇಹಿತರು ಕಾರಿನಿಂದ ಕೆಳಗಿಳಿದು ಹೋದಾಗ ಪ್ರೇಮಿ ಗಿರೀಶ್ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಬಾಲಕಿಯನ್ನು ಅದೇ ಕಾರಿನಲ್ಲಿ ಆಕೆಯ ಮನೆ ಬಳಿ ಬಿಟ್ಟು ಹೋಗಿದ್ದಾನೆ. ನಿಧಾನವಾಗಿ ಈ ವಿಚಾರ ಬಾಲಕಿಯ ಪೋಷಕರಿಗೆ ತಿಳಿದಿದ್ದು, ಕೂಡಲೇ ಅವರು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.