2014ರಲ್ಲಿ ಭಾರತದಲ್ಲಿ ಶೇ. 32.8ರಷ್ಟು ಅಭಿವದ್ಧಿ ಸಾಧಿಸಿದ ಫ್ರ್ಯೂಡೆನ್ ಬರ್ಗ್
ಗ್ರಾಹಕರಿಗೆ ತಾಂತ್ರಿಕವಾಗಿ ಸವಾಲಿನಿಂದ ಕೂಡಿರುವಂತಹ ಉತ್ಪನ್ನ ಪರಿಹಾರಗಳು ಹಾಗೂ ಸೇವೆಗಳನ್ನು ಫ್ರ್ಯೂಡೆನ್ ಬರ್ಗ್ ಸಮೂಹ ಸಂಸ್ಥೆ ಒದಗಿಸುತ್ತಿದ್ದು...

ಬೆಂಗಳೂರು: ಗ್ರಾಹಕರಿಗೆ ತಾಂತ್ರಿಕವಾಗಿ ಸವಾಲಿನಿಂದ ಕೂಡಿರುವಂತಹ ಉತ್ಪನ್ನ ಪರಿಹಾರಗಳು ಹಾಗೂ ಸೇವೆಗಳನ್ನು ಫ್ರ್ಯೂಡೆನ್ ಬರ್ಗ್ ಸಮೂಹ ಸಂಸ್ಥೆ ಒದಗಿಸುತ್ತಿದ್ದು, 2014ರಲ್ಲಿ ಈ ತಂತ್ರಜ್ಞಾನ ಸಮೂಹ ಭಾರತದಲ್ಲಿ ಒಟ್ಟಾರೆ ರು. 1,497 ಕೋಟಿಗಳ ಮಾರಾಟವನ್ನು ದಾಖಲಿಸಿದೆ ಎಂದು ಸಂಸ್ಥೆ ಹೇಳಿದೆ.
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಪ್ರಾದೇಶಿಕ ಪ್ರತಿನಿಧಿ ಡಾ. ಜೊರ್ಗ್ ಮಥಿಯಾಸ್ ಗ್ರಾಸ್ ಮನ್, ಫ್ರ್ಯೂಡೆನ್ ಬರ್ಗ್ ಸಮೂಹಕ್ಕೆ ಭಾರತ ಮಹತ್ವವಾದ ಮಾರುಕಟ್ಟೆಯಾಗಿದೆ ಹಾಗೂ ಫ್ರ್ಯೂಡೆನ್ ಬರ್ಗ್ ಸಮೂಹದ ಹೊಸ ಶೋಧನೆಯ ಬಲಕ್ಕೆ ಭಾರತ ಮಹತ್ವಪೂರ್ಣ ಕೊಡುಗೆಯನ್ನು ಒದಗಿಸುತ್ತದೆ ಎಂದರು.
ಈ ಸಂಸ್ಥೆ ಕರ್ನಾಟಕದಲ್ಲಿ ದೀರ್ಘಾವಧಿ ವ್ಯವಸ್ಥಿತ ಹೂಡಿಕೆ ಮಾಡಲು ಬದ್ಧರಾಗಿದ್ದೇವೆ. 2014ರಲ್ಲಿ ಸಮೂಹ ಭಾರತದಲ್ಲಿ ರು. 97.6 ಕೋಟಿಗಳಷ್ಟು ಸ್ಥಳೀಯ ಹೂಡಿಕೆಗಳನ್ನು ಮಾಡಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


