ಜಿಲ್ಲಾ ಸುದ್ದಿ

ವಿರೋಧದ ಮಧ್ಯೆಯೂ ಜೀರ್ಣೋದ್ಧಾರ ಆರಂಭ

ಇಲ್ಲಿನ ಅಷ್ಟ ಮಠಾಧೀಶರ ನಡುವೆ ಭಿನ್ನಮತಕ್ಕೆ ಕಾರಣವಾಗಿರುವ ಉಡುಪಿಯ ರಥಬೀದಿಯಲ್ಲಿರುವ ಶ್ರೀಅನಂತೇಶ್ವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಸೋಮವಾರ ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ಆರಂಭವಾಗಿದೆ...

ವಿರೋಧದ ಮಧ್ಯೆಯೂ ಜೀರ್ಣೋದ್ಧಾರ ಆರಂಭ
ಶ್ರೀಅನಂತೇಶ್ವರ ದೇವಾಲಯ
Published On :

ಉಡುಪಿ: ಇಲ್ಲಿನ ಅಷ್ಟ ಮಠಾಧೀಶರ ನಡುವೆ ಭಿನ್ನಮತಕ್ಕೆ ಕಾರಣವಾಗಿರುವ ಉಡುಪಿಯ ರಥಬೀದಿಯಲ್ಲಿರುವ ಶ್ರೀಅನಂತೇಶ್ವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಸೋಮವಾರ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಆರಂಭವಾಗಿದೆ.

ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು ಮತ್ತು ಇತರ ಮಠಾಧೀಶರ ವಿರೋಧದ ನಡುವೆಯೂ ಪುತ್ತಿಗೆ ಮಠದ ಶ್ರೀ ಸುಗಣೇಂದ್ರ ತೀರ್ಥರು ದೇವಾಲಯದ ಜೀರ್ಣೋದ್ಧಾರಕ್ಕೆ
ಚಾಲನೆ ನೀಡಿದ್ದಾರೆ. ಮುಜರಾಯಿ ಇಲಾಖೆಗೆ ಸೇರಿರುವ ಈ ದೇವಾಲಯದ ಮೇಲ್ಮಾಡು ನಾಲ್ಕೈದು ವರ್ಷಗಳಿಂದ ಸೋರುತ್ತಿದ್ದು, ಅದನ್ನೀಗ ಸುಮಾರು ರು.3 ಕೋಟಿ ವೆಚ್ಚದಲ್ಲಿ ದುರಸ್ತಿಗೊಳಿಸಲು ಪುತ್ತಿಗೆ ಶ್ರೀಗಳು ಮುಜರಾಯಿ ಇಲಾಖೆಯ ಅನುಮತಿ ಪಡೆದಿದ್ದಾರೆ.

ಈ ದೇವಾಲಯವು ಉಡುಪಿಯ ಕಷ್ಣಮಠ ಮತ್ತು ಅಷ್ಟಮಠಗಳ ಸ್ಥಾಪಕರಾದ ಆಚಾರ್ಯ ಮಧ್ವರ ಸನ್ನಿಧಿ ಇರುವ ಸ್ಥಳವಾಗಿದ್ದು, ಈ ದೇವಾಲಯದ ಮೇಲೆ ಎಲ್ಲ ಅಷ್ಟ ಮಠಗಳಿಗೆ ಹಕ್ಕಿದೆ. ಆದ್ದರಿಂದ ಪುತ್ತಿಗೆ ಮಠಾಧೀಶರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜೀರ್ಣೋದಾಟಛಿರಕ್ಕೆ ಹೊರಟಿದ್ದಾರೆ ಎನ್ನುವುದು ಇತರ ಮಠಾಧೀಶರ ಅಸಮಾಧಾನ.

ಮೊದಲು ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದವರು ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥರು. ನಂತರ ಪೇಜಾವರ ಶ್ರೀಗಳ ನೇತೃತ್ವದಲ್ಲಿ, ಪುತ್ತಿಗೆ ಶ್ರೀಗಳೊಂದಿಗೆ ಅಷ್ಟ ಮಠಾಧೀಶರ ಸುದೀರ್ಘ ಸಭೆ ನಡೆಯಿತು. ಸಭೆಯಲ್ಲಿ, ಈಗ ಮಳೆಗಾಲ, ಜೀರ್ಣೋದ್ಧಾರಕ್ಕೆ ಸಕಾಲವಲ್ಲ. ಆದ್ದರಿಂದ ಸದ್ಯ 6 ತಿಂಗಳು ಜೀರ್ಣೋದಾಟಛಿರ ಬೇಡ ಎಂದು ಪುತ್ತಿಗೆ ಶ್ರೀಗಳ ಮನವೂಲಿಸಲು ಯತ್ನಿಸಿದರು. ಆದರೆ, ಪುತ್ತಿಗೆ ಶ್ರೀಗಳು ತಮ್ಮ ಪಟ್ಟು ಸಡಿಲಿಸಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.