ಬಂಡಿಪುರ ರಾತ್ರಿ ಸಂಚಾರ ಬೇಡ: ಕುಮಾರಸ್ವಾಮಿ
ಬಂಡಿಪುರ ರಸ್ತೆಗಳಲ್ಲಿ ವನ್ಯ ಜೀವಿಗಳ ಸ್ವತಂತ್ರ ಸಂಚಾರಕ್ಕೆ ತೊಂದರೆಯಾಗುವುದರಿಂದ ಕೇರಳದ ಕೋರಿಕೆಯಂತೆ ರಾತ್ರಿ ವೇಳೆ ಸಂಚಾರಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ...

ಬೆಂಗಳೂರು: ಬಂಡಿಪುರ ರಸ್ತೆಗಳಲ್ಲಿ ವನ್ಯ ಜೀವಿಗಳ ಸ್ವತಂತ್ರ ಸಂಚಾರಕ್ಕೆ ತೊಂದರೆಯಾಗುವುದರಿಂದ ಕೇರಳದ ಕೋರಿಕೆಯಂತೆ ರಾತ್ರಿ ವೇಳೆ ಸಂಚಾರಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಭಾನುವಾರ ಚಿತ್ರಕಲಾ ಪರಿಷತ್‍ನಲ್ಲಿ ಆಯೋಜನೆಗೊಂಡಿದ್ದ ಛಾಯಾಗ್ರಾಹಕ ಸುಧೀರ್ ಶೆಟ್ಟಿಯವರು ತೆಗೆದಿರುವ `ಬಂಡಿಪುರ ಅಭಯಾರಣ್ಯದಲ್ಲಿ ವಾಹನಗಳಿಗೆ ಸಿಕ್ಕು ಸತ್ತ ವನ್ಯ ಜೀವಿಗಳ ಛಾಯಾಚಿತ್ರ' ಪ್ರದರ್ಶನ ವೀಕ್ಷಿಸಿದ ನಂತರ ಮಾತನಾಡಿ, ರಾತ್ರಿ ಹೊತ್ತು ವಾಹನಗಳ ಸಂಚಾರ ನಿಷೇಧ ಇದ್ದರೂ ವಾಹನಗಳು ಅಧಿಕಾರಿಗಳ ಕಣ್ತಪ್ಪಿ ಹೋಗುತ್ತಿವೆ. ಇದರ ಬಗ್ಗೆ ಸರ್ಕಾರ ಗಮನಕೊಡಬೇಕು. ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಶೇ.50ಕ್ಕಿಂತ ಹೆಚ್ಚು ಸದಸ್ಯರು ಗೆದ್ದಿದ್ದಾರೆ ಅಂತ ಮುಖ್ಯಮಂತ್ರಿ ಹೇಳಿದ್ದಾರೆ.
ಬಿಜೆಪಿಯವರು ಶೇ.60ಕ್ಕಿಂತಲೂ ಹೆಚ್ಚು ಗೆದ್ದಿದ್ದೀವಿ ಅಂತ ಹೇಳುತ್ತಾರೆ. ಇವರಿಬ್ಬರ ಪಾಲೇ ಶೇ.100 ದಾಟಿ ಹೋಗಿದೆ. ಹಾಗಿದ್ದರೆ, ಜೆಡಿಎಸ್ ಮೈನಸ್ ಮಟ್ಟಕ್ಕೆ ಹೋಗಿದೆ ಅಂತ ಅರ್ಥವೇ? ಹಾಗಾದರೆ ರಾಜ್ಯದಲ್ಲಿ ನಮಗೆ ಸ್ಥಾನವೇ ಇಲ್ಲವೇ? ಬಿಜೆಪಿ, ಕಾಂಗ್ರೆಸ್ ನಾವು ಹೆಚ್ಚು ಸ್ಥಾನ ಪಡೆದಿದ್ದೇವೆ ಅಂತ ಬೀಗುತ್ತಿದ್ದಾರೆ. ಪಕ್ಷದ ಚಿನ್ಹೆಯಡಿ ನಡೆಯುವ ತಾಪಂ, ಜಿಪಂ ಚುನಾವಣೆಯಲ್ಲಿ ವಾಸ್ತವ ಗೊತ್ತಾಗಲಿದೆ. ಈ ಬಾರಿ ಗ್ರಾಪಂ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಕಳೆದ ಸಲಕ್ಕಿಂತ ಹೆಚ್ಚು ಗೆದ್ದಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


