2015ರ ಕೀಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮಾಧ್ಯಮ ನಿರ್ವಹಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಟಾರಿಯನ್ ಸಂಸ್ಥೆ ನೀಡುವ ಕೀಮ (ಕನ್ನಡ ಅಂತರರಾಷ್ಟ್ರೀಯ ಸಂಗೀತ ಪ್ರಶಸ್ತಿ) 2015ನೇ ಸಾಲಿನ...

ಬೆಂಗಳೂರು: ಮಾಧ್ಯಮ ನಿರ್ವಹಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಟಾರಿಯನ್ ಸಂಸ್ಥೆ ನೀಡುವ ಕೀಮ (ಕನ್ನಡ ಅಂತರರಾಷ್ಟ್ರೀಯ ಸಂಗೀತ ಪ್ರಶಸ್ತಿ) 2015ನೇ ಸಾಲಿನ ಪ್ರಶಸ್ತಿಗಳಿಗೆ ಸಂಗೀತ ಕ್ಷೇತ್ರದಲ್ಲಿನ ವಿವಿಧ ಸಾಧಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿ. ಕೆ ಲೋಕೇಶ್ ಅವರು ಒಟ್ಟು 30 ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು ಸಂಗೀತ ಹಕ್ಕು ಹೊಂದಿರುವ ಸಂಗೀತ ಸಂಯೋಜಕರು, ಸಾಹಿತಿಗಳು, ಹಿನ್ನೆಲೆ ಗಾಯಕರು, ವಾದ್ಯ ಸಂಯೋಜಕರು, ತಂತ್ರಜ್ಞರು, ಚಲನಚಿತ್ರ/ ಚಲನಚಿತ್ರೇತರ ಹಾಡುಗಳಲ್ಲಿ ಸಾಧನೆ ಮಾಡಿರುವವರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ತೀರ್ಪುಗಾರರ ಸಮಿತಿ ಅರ್ಜಿಗಳನ್ನು ಪರಿಷ್ಕರಿಸಿ ನಾಮಾಂಕಿತರನ್ನು ಘೋಷಿಸಲಿದೆ.
ಜೀವಮಾನದ ಸಾಧನೆ, ಮಹೋನ್ನತ ಕೊಡುಗೆ ಮತ್ತು ಅಂತರರಾಷ್ಟ್ರೀಯ ಸಂಗೀತಗಾರ ವಿಭಾಗಗಳಲ್ಲಿ ವಿಶೇಷ ಪ್ರಶಸ್ತಿಗಳನ್ನು ಸಹ ನೀಡಲಾಗುವುದು. ಜೂನ್ 21ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಪ್ರಶಸ್ತಿ ಕುರಿತ ವಿವರಗಳಿಗೆ www.kima.co.in ವೆಬ್‌ಸೈಟ್‌ಅನ್ನು ವೀಕ್ಷಿಸಬಹುದು.
ಪತ್ರಿಕಾಗೋಷ್ಟಿಯಲ್ಲಿ ಕಲಾ ನಿರ್ದೇಶಕ, ನಟ ಅರುಣ್ ಸಾಗರ್, ಸಂಸ್ಥೆಯ ಮುಖ್ಯಸ್ಥರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


