ವಿದ್ಯಾರ್ಥಿಗಳಿಗೆ ಹುಲಿ ಸಂರಕ್ಷಣೆ ಅರಿವು
ರಾಷ್ಟ್ರಪ್ರಾಣಿ ಹುಲಿ ವಾಸಸ್ಥಾನ, ಅದರ ಚಟುವಟಿಕೆ, ಮಾನವನಿಂದ ಅದು ಹೇಗೆ ಕೊಲ್ಲಲ್ಪಡುತ್ತದೆ? ಹುಲಿಯ ಸಂತತಿ ನಾಶವಾಗುತ್ತಿರುವುದು, ಹುಲಿಯ ಸಂರಕ್ಷಣೆ ಹೇಗೆ..ಎಂಬಿತ್ಯಾದಿ ವಿಷಯಗಳ...

ಬೆಂಗಳೂರು: ರಾಷ್ಟ್ರಪ್ರಾಣಿ ಹುಲಿ ವಾಸಸ್ಥಾನ, ಅದರ ಚಟುವಟಿಕೆ, ಮಾನವನಿಂದ ಅದು ಹೇಗೆ ಕೊಲ್ಲಲ್ಪಡುತ್ತದೆ? ಹುಲಿಯ ಸಂತತಿ ನಾಶವಾಗುತ್ತಿರುವುದು, ಹುಲಿಯ ಸಂರಕ್ಷಣೆ ಹೇಗೆ..ಎಂಬಿತ್ಯಾದಿ ವಿಷಯಗಳ ಬಗ್ಗೆ ಕಿರುಚಿತ್ರದ ಮೂಲಕ ಕಾಲೇಜು ಮಕ್ಕಳಲ್ಲಿ ಅರಿವು ಮೂಡಿಸಲಾಯಿತು.
ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ `ಸೇವ್ ಟೈಗರ್ ಫಸ್ಟ್' ಹಾಗೂ `ರೇಡಿಯೋ ಆಕ್ಟಿವ್ 90.4' ವತಿಯಿಂದ ಬುಧವಾರ ನಗರದ ಜೈನ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ `ಸೇವ್ ಟೈಗರ್' ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ
ಹುಲಿ ಸಂರಕ್ಷಣೆ ಹಾಗೂ ಅವನತಿ ಕುರಿತು ಜಾಗೃತಿ ಮೂಡಿಸಲಾಯಿತು. `ಹುಲಿಯನ್ನು ಮರೆಯುತ್ತಿದ್ದೇವೆಯೇ?' ಎಂಬ ಒಂದು ಗಂಟೆಗೂ ಹೆಚ್ಚು ಅವಧಿಯ ಕಿರುಚಿತ್ರ ಪ್ರದರ್ಶಿಸಲಾಯಿತು. ಚಿತ್ರಪ್ರದರ್ಶನದ ನಂತರ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಾಗೂ ಹುಲಿ ಸಂರಕ್ಷಣೆ ಕುರಿತು ಸಂವಾದ ನಡೆಸಿದರು.
ಅದಕ್ಕೂ ಮುನ್ನ ಮಾತನಾಡಿದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ಡಾ.ರವಿಕುಮಾರ್, ಹುಲಿ ಸಂರಕ್ಷಣೆಗೆ ಯುವ ಜನಾಂಗ ಕೈಜೋಡಿಸಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಹುಲಿಗಳು ಉಳಿವುದೇ ಅನುಮಾನವಾಗುತ್ತದೆ. ಪ್ರಮುಖವಾಗಿ ಅರಣ್ಯ ಪ್ರದೇಶದ ಸುತ್ತಮುತ್ತಲ ನಿವಾಸಿಗಳು ಹುಲಿ ಉಳಿವಿಗೆ ಹಾಗೂ ಅವುಗಳನ್ನು ಜೋಪಾನವಾಗಿ ಕಾಪಾಡಬೇಕು.
ಯಾವುದೇ ಕಾರಣಕ್ಕೂ ಅವುಗಳಿಗೆ ತೊಂದರೆ ಕೊಡಬಾರದು ಎಂದು ಮನವಿ ಮಾಡಿಕೊಂಡರು. ಆದರೆ, ಆ ಕೆಲಸ ಆಗುತ್ತಿಲ್ಲ ಎಂದು ವಿಷಾದಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ರೆಸಾರ್ಟ್, ಮನೆ ನಿರ್ಮಿಸುವುದು ಹೆಚ್ಚುತ್ತಿದೆ. ಇಂತಹ ನಿರ್ಮಾಣ ಕಾಮಗಾರಿ ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕಾಡುಪ್ರಾಣಿಗಳು ತಾವಾಗಿಯೇ ನಮ್ಮ ಮನೆಗೆ ಬರುವುದಿಲ್ಲ. ಆದರೆ ಇಂದು ಮಾನವನೇ ಅವುಗಳ ಮನೆಗೆ ಹೋಗುವ ಮೂಲಕ ತೊಂದರೆ ಕೊಡುತ್ತಿದ್ದಾನೆ. ಇಂದು ಶೇ.50ರಷ್ಟು ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಇದರಿಂದ ಪ್ರಾಣಿಗಳು ತಾವಿರುವ ಜಾಗ ಬಿಟ್ಟು ನಾಡಿಗೆ ಬರುತ್ತಿವೆ. ಹಾಗಾಗಿ ಸರ್ಕಾರ ಒತ್ತುವರಿ ತೆರವುಗೊಳಿಸಿ ಪ್ರಾಣಿಗಳಿಗೆ ಅನುಕೂಲ ಮಾಡಿಕೊಟ್ಟು, ರಾಜಸ್ಥಾನದ ರಣಥಂಬೂರ್‍ನಲ್ಲಿ ನರಭಕ್ಷಕ ಎಂಬ ಪಟ್ಟಕಟ್ಟಿ ಉಸ್ತಾದ್ ಎಂಬ ಹುಲಿಯನ್ನು ಮೃಗಾಲಯಕ್ಕೆ ಹಾಕಿರುವುದು ಸರಿಯಲ್ಲ. ಇದು ಕಾನೂನಿಗೆ ವಿರುದಟಛಿ. ಹಾಗಾಗಿ ಅಲ್ಲಿನ ಸರ್ಕಾರ ಕೂಡಲೇ
ಈ ಹುಲಿಯನ್ನು ಬಿಡುಗಡೆ ಮಾಡಬೇಕು. ಈ ಬಗ್ಗೆ ದೇಶಾದ್ಯಂತ ಹೋರಾಟ ನಡೆಯುತ್ತಿದ್ದರೂ ಅಲ್ಲಿನ ಸರ್ಕಾರಕ್ಕೆ ಕೇಳುತ್ತಿಲ್ಲ.
- ಪದ್ಮ ಅಶೋಕ್, ಸಂಸ್ಥಾಪಕರು, ಸೇವ್ ಟೈಗರ್ ಫಸ್ಟ್
ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವವರನ್ನು ಶಿಕ್ಷಿಸುವಂತೆಯೇ ಹುಲಿ ಕೊಂದವರು, ಅವುಗಳಿಗೆ ತೊಂದರೆ ಕೊಡುವವರಿಗೆ ಶಿಕ್ಷೆ ಆಗಬೇಕು. ಅಂತಹ ಕಾನೂನು ಜಾರಿಗೆ ಬಂದರೆ ನಮ್ಮ ರಾಷ್ಟ್ರಪ್ರಾಣಿ ಮಾತ್ರವಲ್ಲ ಎಲ್ಲ ಪ್ರಾಣಿಗಳನ್ನೂ ನಾವು ಉಳಿಸಿಕೊಳ್ಳಲು ಸಾಧ್ಯ, ಮುಂದಿನ ಪೀಳಿಗೆಗೆ ಅವುಗಳು ನೋಡಲು ಸಿಗುತ್ತವೆ.
-ವಿದ್ಯಾರ್ಥಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


