ಜಿಲ್ಲಾ ಸುದ್ದಿ

ಹಾಡಹಗಲೇ ಪಟ್ಣಣದ ಶಾಲೆ ಆವರಣಕ್ಕೆ ಬಂದ ಚಿರತೆ

ನಗರದ ಹೃದಯ ಭಾಗದಲ್ಲಿರುವ ಟೌನ್ ಮಹಿಳಾ ಸಮಾಜದ ಶಾಲೆಗೆ ಗುರುವಾರ ಮಟಮಟ ಮಧ್ಯಾಹ್ನ...

ಹಾಡಹಗಲೇ ಪಟ್ಣಣದ ಶಾಲೆ ಆವರಣಕ್ಕೆ ಬಂದ ಚಿರತೆ
ಸಂಗ್ರಹ ಚಿತ್ರ
Published On :

ಚಿಕ್ಕಮಗಳೂರು: ನಗರದ ಹೃದಯ ಭಾಗದಲ್ಲಿರುವ ಟೌನ್ ಮಹಿಳಾ ಸಮಾಜದ ಶಾಲೆಗೆ ಗುರುವಾರ ಮಟಮಟ ಮಧ್ಯಾಹ್ನ ನುಗ್ಗಿದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸತತ ಆರು ಗಂಟೆ ಕಾರ್ಯಾಚರಣೆ ಬಳಿಕ ಸೆರೆ ಹಿಡಿದಿದ್ದಾರೆ.

ಚಿರತೆ ಇಬ್ಬರನ್ನು ಗಾಯಗೊಳಿಸಿದೆ. ಜೆರಾಕ್ಸ್ ಅಂಗಡಿಯಲ್ಲಿ ಅವಿತಿದ್ದ ಚಿರತೆ ಹಿಡಿಯಲು ಬೋನ್ ತಂದಿಟ್ಟು, ಅದು, ಬೋನಿನೊಳಗೆ ಬರುವಂತೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ 12ಕ್ಕೆ ಕಟ್ಟಡದ ಒಳಹೊಕ್ಕ ಕಿಲಾಡಿ ಚಿರತೆ, ಸಂಜೆ 6ರವರೆಗೂ ಅತ್ತ ಸುಳಿಯಲೇ ಇಲ್ಲ. ಕೊನೆಗೆ ಅರವಲಿಕೆ ನೀಡಿ ಹಿಡಿಯಲಾಯಿತು.

ಶಾಲೆಯ ಚಿಕ್ಕದಾದ ಗೇಟ್ ಮೂಲಕವೇ ಆವರಣ ಪ್ರವೇಶಿಸಿ, ಜೆರಾಕ್ಸ್ ಅಂಗಡಿಯೊಳಗೆ ಹೋಗಿದೆ. ಈ ಅಂಗಡಿಯಲ್ಲಿದ್ದ ಮಹಿಳೆ ಸ್ವಲ್ಪ ಸಮಯದ ಮೊದಲು ಸಮೀಪದ ಹೋಟೆಲ್ ಗೆ ಕಾಫಿ ಕುಡಿಯಲು ಹೋಗಿದ್ದರು. ಚಿರತೆ ಅಂಗಡಿಯೊಳಗೆ ಹೋಗಿರುವುದನ್ನು ನೋಡಿದ ವ್ಯಕ್ತಿಯೋರ್ವ ತಕ್ಷಣವೇ ಬಾಗಿಲ ಚಿಲಕವನ್ನು ಹಾಕಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.