ಜಿಲ್ಲಾ ಸುದ್ದಿ

ಆನೇಕಲ್ ನ ಗ್ರಾಮವೊಂದರಲ್ಲಿ ಕುದಿಯುವ ನೀರಿನ ಹೊಂಡ

ಸೌದೆ ಅಥವಾ ಗ್ಯಾಸ್ ಬಳಕೆ ಇಲ್ಲದೆಯೇ ಬೆಂಕಿ ಹೊತ್ತಿಕೊಳ್ಳುತ್ತಿದ್ದು, ಇಲ್ಲಿನ ಬೋರ್ ವೆಲ್ ಗಳಲ್ಲಿ ನೀರು ಬದಲಿಗೆ ಬಯೋಗ್ಯಾಸ್ ಬರುತ್ತಿದೆ...

ಆನೇಕಲ್ ನ ಗ್ರಾಮವೊಂದರಲ್ಲಿ ಕುದಿಯುವ ನೀರಿನ ಹೊಂಡ
ಕುದಿಯುವ ನೀರಿನ ಹೊಂಡ
Published On :

ಬೆಂಗಳೂರು: ನಗರದ ಹೊರವಲಯದಲ್ಲಿರುವ ಆನೇಕಲ್ ನ ಕೆಲ ಪ್ರದೇಶಗಳಲ್ಲಿ ಸೌದೆ ಅಥವಾ ಗ್ಯಾಸ್ ಬಳಕೆ ಇಲ್ಲದೆಯೇ ಬೆಂಕಿ ಹೊತ್ತಿಕೊಳ್ಳುತ್ತಿದ್ದು, ಇಲ್ಲಿನ ಬೋರ್ ವೆಲ್ ಗಳಲ್ಲಿ ನೀರು ಬದಲಿಗೆ ಬಯೋಗ್ಯಾಸ್ ಬರುತ್ತಿದ್ದು, ಜನರು ಆ ಹಬೆಯ ತಾಪದಲ್ಲೇ ಆಮ್ಲೆಟ್ ಮಾಡಿ ತಿನ್ನುವಂತಾಗಿದೆ.

ಅಲ್ಲಿ ಕಲ್ಲುಗಳನ್ನು ಜೋಡಿಸಿ ಅದರ ಮೇಲೆ ಕಾಗದದ ಚೂರನ್ನು ಹಾಕಿದರೆ ಸಾಕು ಬೆಂಕಿ ಹೊತ್ತಿಕೊಳ್ಳುತ್ತಿದ್ದು, ಸ್ಥಳೀಯರು ಬೆಚ್ಚಿ ಬೀಳುವಂತಾಗಿದೆ. ಇದಕ್ಕೆ ಬಿಬಿಎಂಪಿಯವರು ಕಸದ ವಿಲೇವಾರಿ ಕಾರಣವಾಗಿದೆ. ಈ ಹಿಂದೆ ಆನೇಕಲ್ ತಾಲೂಕಿನ ಲಕ್ಮೀಪುರದ ಕ್ವಾರಿಯಲ್ಲಿ ಬಿಬಿಎಂಪಿಯವರು ಕಳೆದ ಮೂರು ವರ್ಷಗಳಿಂದ ಅವೈಜ್ಞಾನಿಕವಾಗಿ ಕಸ ಸುರಿದಿರುವುದರಿಂದ ಈ ಪ್ರದೇಶದಲ್ಲಿ ಗ್ಯಾಸ್ ಉತ್ಪತಿಯಾಗುತ್ತಿದ್ದು ಇದು ಕುದಿಯುತ್ತಿರುವ ಹೊಂಡದಂತಾಗಿದೆ.

ಬಿಬಿಎಂಪಿಯವರು ಸಂಸ್ಕರಣೆ ಮಾಡದ ಕಸವನ್ನು ಬಂಡೆಯಲ್ಲಿ ಹಾಕಿ ಮುಚ್ಚಿರುವುದರಿಂದ ಈ ಪ್ರದೇಶದ ಅಂತರ್ಜಲ ಸಂಪೂರ್ಣ ಮಲಿನವಾಗಿದ್ದು, ಕೆರೆ-ಕುಂಟೆ, ಬಾವಿಗಳ ನೀರು ವಿಷಯುಕ್ತವಾಗಿ ಮಾರ್ಪಟಿವೆ. ಈ ಕುರಿತು ಸ್ಥಳೀಯ ಮಂಟಪ ಗ್ರಾಮ ಪಂಚಾಯಿತಿ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ, ಶಾಸಕ ಎಂ.ಕೃಷ್ಣಪ್ಪನವರಾಗಲಿ, ಸಂಸದ ಡಿ.ಕೆ.ಸುರೇಶ್ ಆಗಲಿ ಯಾರೂ ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.