ಇನ್ನು ಲಾಲ್ ಬಾಗ್ ನಲ್ಲೂ ಮಿಲಿಟರಿ ಬ್ಯಾಂಡ್ ಸದ್ದು!
ಬ್ರಿಟಿಷರ ಕಾಲದಲ್ಲಿ ಲಾಲ್ ಬಾಗ್ ನಲ್ಲಿ ನಿರಂತರವಾಗಿ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು.

ಬೆಂಗಳೂರು: ಬ್ರಿಟಿಷರ ಕಾಲದಲ್ಲಿ ಲಾಲ್ ಬಾಗ್ ನಲ್ಲಿ ನಿರಂತರವಾಗಿ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ನಂತರ ತೋಟಗಾರಿಕೆ ಇಲಾಖೆ ಈ ಪರಂಪರೆ ಮುಂದುವರಿಸಿಕೊಂಡು ಬಂದರೂ ಸುಮಾರು ಐದು ವರ್ಷಗಳಿಂದ ಇದು ಸ್ಥಗಿತಗೊಂಡಿತ್ತು.
ಇದೀಗ ಮತ್ತೆ ಲಾಲ್ ಬಾಗ್ ನಲ್ಲಿ ಭಾನುವಾರದಿಂದ ಮಿಲಿಟರಿ ಬ್ಯಾಂಡ್ ಸದ್ದು ಕೇಳಿಸಲಿದೆ. ಬಿ.ಎಸ್.ಎಫ್ ಯೋಧರ ಬ್ಯಾಂಡ್ ನೊಂದಿಗೆ ಈ ಪರಂಪರೆಯನ್ನು ಜುಲೈ 12 ರ ಭಾನುವಾರದಿಂದ ನಿರಂತರವಾಗಿ ಸಂಗೀತ ಕೇಳಿಸಲಿದೆ. ಭಾನುವಾರ ಬೆಳಿಗ್ಗೆ 7 ರಿಂದ 9 ವರೆಗೆ ಉದ್ಯಾನದ ಗಾಜಿನ ಮನೆ ಮುಂದಿನ ಆವರಣದಲ್ಲಿ ಗಡಿ ಭದ್ರತಾ ಪಡೆ ಯೋಧರು ಬ್ಯಾಂಡ್ ಬಾರಿಸಿದರು. ಜತೆಗೆ ನಾನಾ ಸುಧಾರಿತ ಶಸ್ತ್ರಾಸ್ತ್ರಗಳ ವಿಶೇಷ ಪ್ರದರ್ಶನಕ್ಕೂ ಲಾಲ್ ಬಾಗ್ ನಲ್ಲಿ ಚಾಲನೆ ನೀಡಲಾಯಿತು.
ಲಾಲ್ ಬಾಗ್ ನ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ಕೆಲವು ವರ್ಷಗಳ ಹಿಂದೆ ಸಂಗೀತ ಕಚೇರಿಗಳನ್ನು ನುಡಿಸಲಾಗುತ್ತಿತ್ತು. ಅದನ್ನು ಈಗ ಮಿಲಿಟರಿ ಬ್ಯಾಂಡ್ ಮೂಲಕ ಪ್ರಾಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಉದ್ಯಾನದಲ್ಲಿ ಉದಯರಾಗ ಹಾಗೂ ಸಂಧಿಯಾ ರಾಗಗಳನ್ನು ನಡೆಸಿಕೊಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಮಾಡಲಾಗಿದೆ ಎನ್ನುತ್ತಾರೆ ರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್
ವೈವಿಧ್ಯಮಯ ಕಾರ್ಯಕ್ರಮ: ಕಬ್ಬನ್ ಪಾರ್ಕ್ ನಲ್ಲಿ ವಾಹನ ಸಂಚಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಎಂದಿನಂತೆ ಪ್ರತಿ ಭಾನುವಾರ ನಾನಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದ್ದು ಈ ವಾರ ತಾರಸಿ ಕೈತೋಟ, ಅಣಬೆ ಬೇಸಾಯದ ತರಬೇತಿಯೂ ನಡೆಯಲಿದೆ. ಹುಳಿಮಾವು ಜೈವಿಕ ಕೇಂದ್ರದ ಸಹಯೋಗದೊಂದಿಗೆ ಕಬ್ಬನ್ ಉದ್ಯಾನದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಬಳಿ ಬೆಳಿಗ್ಗೆ 7 ರಿಂದಲೇ ತಾರಸಿ ಕೈತೋಟ ಹಾಗೂ ಅಣಬೆ ಬೇಸಾಯದ ಪ್ರಾತ್ಯಕ್ಷಿಕೆ ಮತ್ತು ತರಬೇತಿ ಆರಂಭವಾಗಿ ಸಂಜೆವರೆಗೂ ಮುಂದುವರೆಯಲಿದೆ.
ಉದಯರಾಗದಲ್ಲಿ 6 ರಿಂದ 7 ವರೆಗೆ ಗಣೇಶ್ ಪ್ರಸಾದ್ ತಂಡದಿಂದ ದಾಸವಾಣಿ ಹಾಗೂ 7 ರಿಂದ 8 ವರೆಗೆ ರಮ್ಯಾ ಆನಂದ್ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 8 ರಿಂದ 9 ವರೆಗೆ ಬ್ಯಾಂಡ್ ಸ್ಟ್ಯಾಂಡ್ ಆವರಣದಲ್ಲಿ ರಾಜ್ಯ ಮೀಸಲುಪಡೆಯಿಂದ ಪೊಲೀಸ್ ಬ್ಯಾಂಡ್ ಸಂಗೀತ ಕಾರ್ಯಕ್ರಮ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


