ಗ್ರಾಮ ಪಂಚಾಯತ್ ಗಳಿಗೆ ಹೈಸ್ಪೀಡ್ ನೆಟ್
ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಬಳಸುತ್ತಿರುವ ಇಂಟರ್ ನೆಟ್ ವೇಗ ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಗುರಿ...

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ 'ಡಿಜಿಟಲ್ ಇಂಡಿಯಾ' ಕನಸಿನಂತೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ 'ನ್ಯಾಶನಲ್ ಆಪ್ಟಿಕಲ್ ಫೈಬರ್ ನೆಟ್ ವರ್ಕ್' ಯೋಜನೆ ಕಲ್ಪಿಸಲಾಗುವುದು.
ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಬಳಸುತ್ತಿರುವ ಇಂಟರ್ ನೆಟ್ ವೇಗ ಹೆಚ್ಚಿಸುವುದು ಈ ಯೋಜನೆಯ ಪ್ರಮುಖ ಗುರಿ ಎಂದು ಬಿಎಸ್ಎನ್ಎಲ್ ಪ್ರಧಾನ ಮಹಾಪ್ರಬಂಧಕ ಕ.ಲ.ಜೈರಾಮ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಗಳಲ್ಲಿ ಸದ್ಯ 10 ಎಂಬಿಪಿಎಸ್ ವೇಗದ ಅಂತರ್ಜಾಲ ಸಂಪರ್ಕ ಬಳಸುತ್ತಿದ್ದು ಕೆಲಸಗಳಿಗೆ ಹಿನ್ನಡೆಯಾಗಿದೆ. ಅದನ್ನು 50/100 ಎಂಬಿಪಿಎಸ್ ಗೆ ಹೆಚ್ಚಿಸುವ ಉದ್ದೇಶವಿದೆ. ಸರ್ಕಾರ 50 ಎಂಬಿಪಿಎಸ್ ನೀಡಲು ಸೂಚಿಸಿದ್ದು, ಅಗತ್ಯವಾದಲ್ಲಿ 100 ಎಂಬಿಪಿಎಸ್ ಗೆ ಹೆಚ್ಚಿಸಲು ವ್ಯವಸ್ಥೆ ಮಾಡಲಾಗುವುದು. ಗ್ರಾಮ ಪಂಚಾಯತ್ ಗಳ ನಂತರ ಸಾರ್ವಜನಿಕರು ಮನವಿ ಮಾಡಿದಲ್ಲಿ ಅವರ ಮನೆಗಳಿಗೂ ಸಂಪರ್ಕ ಕಲ್ಪಿಸಲಾಗುವುದು. ಇದಕ್ಕೆ ಸಂಪರ್ಕ ಶುಲ್ಕ ಇಲ್ಲ. ಆದರೆ, ಪ್ರತಿ ತಿಂಗಳು ಬಳಸಿದಷ್ಟು ಬಿಲ್ ಪಾವತಿಸಬೇಕು ಎಂದರು.ರಾಜ್ಯದಲ್ಲಿ 5 ಸಾವಿರದ 600 ಗ್ರಾಮಗಳಿವೆ.
ಬೆಂಗಳೂರಿನ ಪ್ರಮುಖ ನೂರು ಸ್ಥಳಗಳಲ್ಲಿ ವೈಫೈ ಸಂಪರ್ಕ ಕಲ್ಪಿಸಲಿದೆ.ಕಬ್ಬನ್ ಪಾರ್ಕ್ ನಲ್ಲಿ ಈಗಾಗಲೇ ಪ್ರಾಯೋಗಿಕ ಸೇವೆ ಆರಂಭವಾಗಿದ್ದು, ನಾಳೆ ಸಂಜೆ 4 ಗಂಟೆ ವೇಳೆಗೆ ಅಧಿಕೃತ ಚಾಲನೆ ದೊರೆಯಲಿದೆ ಎಂದು ಕ.ಲ.ಜೈರಾಮ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


