ವಿದ್ಯಾವಂತ ವರ್ಗವೇ ಹೆಚ್ಚು ಜಾತೀಯತೆಯ ಪ್ರತಿಪಾದಕರು
ವಿದ್ಯಾವಂತ ವರ್ಗವೇ ಜಾತೀಯತೆಯನ್ನು ಹೆಚ್ಚೆಚ್ಚು ಪ್ರತಿಪಾದಿಸುವ ಮೂಲಕ ಸಮಾಜ ಕಲುಷಿತಗೊಳ್ಳಲು ಕಾರಣರಾಗಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಡಾ.ದೊಡ್ಡರಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ...

ಬೆಂಗಳೂರು: ವಿದ್ಯಾವಂತ ವರ್ಗವೇ ಜಾತೀಯತೆಯನ್ನು ಹೆಚ್ಚೆಚ್ಚು ಪ್ರತಿಪಾದಿಸುವ ಮೂಲಕ ಸಮಾಜ ಕಲುಷಿತಗೊಳ್ಳಲು ಕಾರಣರಾಗಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಡಾ.ದೊಡ್ಡರಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಆಧುನಿಕರು ಕಂಡ ಬಸವಣ್ಣ' ಎಂಬ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇಂದು ಅಸಮಾನತೆ ಎಂಬುದು ತಾಂಡವವಾಡುತ್ತಿದೆ. ಮನುಷ್ಯರು ಕ್ಷುದ್ರ ಜೀವಿಗಳಾಗುತ್ತಿದ್ದಾರೆ. ಮಹಿಳೆಯರನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಈ ಕುರಿತು ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬಸವಣ್ಣನವರ 300 ಆಯ್ದ ವಚನಗಳನ್ನು ಸಂಕಲಿಸಿ ಕನ್ನಡ ಸಂಸ್ಕೃತಿ ಇಲಾಖೆ 5ರಿಂದ 10 ರೂಪಾಯಿಗೆ ಮನೆಮನೆಗೆ ತಲುಪಿಸಬೇಕು. ಆ ಮೂಲಕ ಸಮಾಜದ ಕಾಯಿಲೆಗಳಿಗೆ ಕಾಯಕಲ್ಪ ಮಾಡಬೇಕೆಂದು ಸಲಹೆ ನೀಡಿದರು.
ಸಮಾಜ ವಿಜ್ಞಾನಿ ಬಸವಣ್ಣ: ಆಧುನಿಕ ಕವಿಗಳು ಬಸವಣ್ಣನವರನ್ನು ಶ್ರೇಷ್ಠ ವಚನಕಾರನನ್ನಾಗಿ ಬಿಂಬಿಸಿದ್ದಾರೆ. ಬಸವಣ್ಣ ಜಗತ್ತಿನ ಶ್ರೇಷ್ಠ ಸಮಾಜ ವಿಜ್ಞಾನಿ. ಸಾಮಾಜಿಕ ಲೋಪಗಳಿಗೆ ಸೂತ್ರಗಳನ್ನು ಕಂಡು ಹಿಡಿದವರು. ಆದ್ದರಿಂದ ಚರಿತ್ರಕಾರರು ಅವರನ್ನು ಯುಗ ಪುರುಷ ಎಂದು ಗುರುತಿಸಿದ್ದಾರೆ. ಇಂದು ವ್ಯಕ್ತಿತ್ವ ವಿಕಸನದ ತರಗತಿಗಳಿಗೆ ಹೋಗುವ ಬದಲು, ಬಸವಣ್ಣನವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು. ಬಸವಣ್ಣ ಆಳುವ ವರ್ಗದ ವಿರುದ್ಧ ಹೋರಾಟ ನಡೆಸಿ, ಮನುಕುಲದ ಅಭಿವೃದ್ಧಿಗಾಗಿ ಶ್ರಮಿಸಿದವರು ಎಂದು ಬಣ್ಣಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


